ದಾವಣಗೆರೆ: ಜೈಲಲ್ಲಿರುವ ಪೋಷಕರ, ನಿರ್ಗತಿಕರ, ಲೈಂಗಿಕ ಕಾರ್ಯಕರ್ತೆಯರ ಹಾಗೂ ಏಕಪೋಷಕರ (ವಿಧವೆ) ಮಕ್ಕಳಿಗೆ ಕಲಿಕೆಗಾಗಿ ನೀಡಲಾಗುತ್ತಿದ್ದ ಪ್ರೋತ್ಸಾಹಧನ ಒಂದು ವರ್ಷದಿಂದ ಬಂದಿಲ್ಲ. ಹೀಗಾಗಿ ಈ ವರ್ಷ ಅಂತಹ ಮಕ್ಕಳನ್ನು ಗುರುತಿಸುವ ಕಾರ್ಯ ಇನ್ನೂ ನಡೆದಿಲ್ಲ.

ಬಡತನದಲ್ಲಿ ಇರುವ ಈ ಮಕ್ಕಳಿಗೆ ಬಾಲನ್ಯಾಯ ಕಾಯ್ದೆ 2000/ತಿದ್ದುಪಡಿ 2016ರಂತೆ ಮೂರು ವರ್ಷಗಳವರೆಗೆ ಪ್ರತಿ ತಿಂಗಳಿಗೆ ₹ 1,000ದಂತೆ ನೀಡಲಾಗುತ್ತದೆ. 18 ವರ್ಷದೊಳಗಿನವರಷ್ಟೇ ಈ ಯೋಜನೆಗೆ ಅರ್ಹರು. ಈ ಮೊತ್ತವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಆ ಮಕ್ಕಳ ಖಾತೆಗೆ ಜಮಾ ಮಾಡಬೇಕು. 2017ರ ಮಾರ್ಚ್ವರೆಗೆ ಮಾತ್ರ ಈ ಹಣ ಬಂದಿದೆ. 2017–18 ಮತ್ತು 2018–19ನೇ ಸಾಲಿನ ಪ್ರೋತ್ಸಾಹಧನಕ್ಕಾಗಿ ಕಾಯಲಾಗುತ್ತಿದೆ.

ಪ್ರತಿ ಜಿಲ್ಲೆಗೆ, ಅಲ್ಲಿನ ಮಕ್ಕಳ ರಕ್ಷಣಾ ಅಧಿಕಾರಿಗಳು ನೀಡಿದ ವರದಿಯ ಆಧಾರದಲ್ಲಿ ಗುರಿಯನ್ನು ನಿಗದಿ ಪಡಿಸಲಾಗಿದೆ. ಒಂದು ಮಗುವಿಗೆ 36 ತಿಂಗಳ ಪ್ರೋತ್ಸಾಹಧನ ನೀಡಿದ ಮೇಲೆ ಆ ಮಗುವಿನ ಬದಲು ಬೇರೆ ಅರ್ಹ ಮಗುವನ್ನು ಆಯ್ಕೆ ಮಾಡಲಾಗುತ್ತದೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ.

ಯಾರೆಲ್ಲ ಅರ್ಹರು ?:ಬಾಲಕರ ಅಥವಾ ಬಾಲಕಿಯರ ಬಾಲಮಂದಿರದಲ್ಲಿ ಇರುವ ಮಕ್ಕಳನ್ನು ಪೋಷಕರು ಕರೆದುಕೊಂಡು ಹೋಗಿ ಶಾಲೆಗೆ ಕಳುಹಿಸುತ್ತಾರೆ ಎಂದಾದರೆ ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಯಾವುದೇ ಪ್ರಕರಣದಲ್ಲಿ ಹೆತ್ತವರಲ್ಲಿ ಒಬ್ಬರು ಜೈಲಿಗೆ ಹೋಗಿದ್ದರೆ, ಆ ಮನೆಯ ವಾರ್ಷಿಕ ಆದಾಯ ₹ 24 ಸಾವಿರಕ್ಕಿಂತ ಕಡಿಮೆ ಇದ್ದರೆ ಆ ಮಕ್ಕಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ತಂದೆ, ತಾಯಿ ಯಾರೂ ಇಲ್ಲದ, ನಿರ್ಗತಿಕ ಮಕ್ಕಳನ್ನು ಮತ್ತು ಲೈಂಗಿಕ ಕಾರ್ಯಕರ್ತೆಯರ ಮಕ್ಕಳನ್ನು ಕೂಡ ಈ ಯೋಜನೆ ಒಳಗೊಂಡಿರುತ್ತದೆ. ಇದಲ್ಲದೆ ಒಡೆದ ಕುಟುಂಬದ ಏಕ ಪೋಷಕರ ಅಥವಾ ತಂದೆಯನ್ನು ಕಳೆದುಕೊಂಡಿರುವ ಮಕ್ಕಳೂ ಇದರ ವ್ಯಾಪ್ತಿಗೆ ಬರುತ್ತಾರೆ. ಈ ಎಲ್ಲ ಮಕ್ಕಳು ಶಾಲೆಗೆ ಹೋಗುತ್ತಿದ್ದು, ಶೇ 75ರಷ್ಟು ಹಾಜರಾತಿ ಹೊಂದಿರಬೇಕು.

ಪ್ರೋತ್ಸಾಹಧನ ಬಾರದೆ ಇರುವುದರಿಂದ 2017ರ ಏಪ್ರಿಲ್ನಿಂದ ಹೊಸ ಅರ್ಹ ಮಕ್ಕಳನ್ನು ಹುಡುಕಲು ಮಕ್ಕಳ ರಕ್ಷಣಾ ಘಟಕ ಮುಂದಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.