ನ್ಯಾಮತಿ: ತಾಲ್ಲೂಕಿನಾದ್ಯಂತ ಐದು ದಿನದಿಂದ ಸುರಿಯುತ್ತಿರುವ ಮಳೆ ಮತ್ತು ಗಾಳಿಯಿಂದ ಮನೆಗಳು, ಅಡಿಕೆ ಮರಗಳು, ವಿದ್ಯುತ್ ಕಂಬಗಳು ಬೀಳುವ ಮೂಲಕ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿದೆ.

ಫಲವನಹಳ್ಳಿ ಗ್ರಾಮದ ಬೆಳ್ಳಿ-ಬೆಳಕು ಬಡಾವಣೆಯಲ್ಲಿ ಶುಕ್ರವಾರ ಮೂರು ವಿದ್ಯುತ್ ಕಂಬಗಳು ಬಿದ್ದಿವೆ. ವಾಸದ ಮನೆಯ ಗೋಡೆಯ ಮೇಲೆ ಮರ ಬಿದ್ದಿದೆ.

ವಿದ್ಯುತ್ ಕಂಬ ಬೀಳುವ ಸಮಯದಲ್ಲಿ ನಾವು ಹೊರಗೆ ನಿಂತಿದ್ದೆವು. ಕಂಬ ಅಲುಗಾಡಿದ ತಕ್ಷಣ ಒಳಗಡೆ ಓಡಿ ಬಂದಿದ್ದರಿಂದ ಜೀವ ಉಳಿಯಿತು ಎಂದು ಮೈನಾವತಿ, ಕಮಲಮ್ಮ, ಲಕ್ಷ್ಮಿಬಾಯಿ ತಿಳಿಸಿದರು.

ಚಟ್ನಹಳ್ಳಿ ಗ್ರಾಮದಲ್ಲಿ ವೀರಾಪುರದ ಬಸವರಾಜಪ್ಪ ಅವರ ತೋಟದಲ್ಲಿ ಫಸಲಿಗೆ ಬಂದಿರುವ ಅಡಿಕೆ ಮರಗಳು ನೆಲಕಚ್ಚಿವೆ. ಸೋಗಿಲು ಗ್ರಾಮದಲ್ಲಿ ನೀಲಗಿರಿ ಮರ ಬಿದ್ದಿದೆ. ಫಲವನಹಳ್ಳಿ-ಕಂಚಿಗನಹಳ್ಳಿ ರಸ್ತೆ ಮಧ್ಯೆ ಸಾಲು ಮರವೊಂದು ಬಿದ್ದು ವಿದ್ಯುತ್ ಕಂಬಗಳು ತುಂಡರಿಸಿವೆ ಬಿದ್ದಿವೆ. ತಕ್ಷಣ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಯಿತು. ಬೆಳಿಗ್ಗೆಯಿಂದ ಫಲವನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ ಎಂದು ಎಚ್.ಹಳದಪ್ಪ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.