ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ‘ಯುವ ನಿಧಿ’ ಯೋಜನೆ ನೋಂದಣಿ ಆರಂಭ

Published : 26 ಡಿಸೆಂಬರ್ 2023, 15:58 IST
Last Updated : 26 ಡಿಸೆಂಬರ್ 2023, 15:58 IST
ಫಾಲೋ ಮಾಡಿ
Comments
ಪ್ರತಿ ತಿಂಗಳು ಕಳುಹಿಸಬೇಕು ಸಂದೇಶ
ದವಿ ಪಡೆದು ವಿದ್ಯಾಭ್ಯಾಸ ಮುಂದುವರಿಸುವವರಿಗೆ ಇಲ್ಲವೇ ಬೇರೆ ಉದ್ಯೋಗ ಪಡೆದುಕೊಂಡವರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ. ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆದವರು ಪ್ರತಿ ತಿಂಗಳ 25ನೇ ತಾರೀಕಿನಿಂದ ‘ನಾನು ಉದ್ಯೋಗದಲ್ಲಿ ಇಲ್ಲ’ ಎಂಬ ಸಂದೇಶ ಕಳುಹಿಸಿದರೆ ಮಾತ್ರ ಮುಂದಿನ ತಿಂಗಳ ಧನಸಹಾಯ ಜಮಾವಾಗುತ್ತದೆ. ಒಂದು ವೇಳೆ ಉದ್ಯೋಗ ಸಿಕ್ಕರೆ ‘ಉದ್ಯೋಗದಲ್ಲಿ ಇದ್ದೇನೆ’ ಎಂದು ಸಂದೇಶ ಕಳುಹಿಸಬೇಕು. ಸ್ವಂತ ಉದ್ಯೋಗ ಆರಂಭಿಸಿದರೆ ಸಹಾಯಧನ ಸಿಗುವುದಿಲ್ಲ.  ಎಂದು ಮಾಹಿತಿ ನೀಡಿದರು.
‘ಗೃಹಲಕ್ಷ್ಮಿ’ ತಾಂತ್ರಿಕ ಸಮಸ್ಯೆ ನಿವಾರಣೆಗೆ ಕ್ಯಾಂಪ್
ದಾವಣಗೆರೆ: ‘ಗೃಹಲಕ್ಷ್ಮಿ’ ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಮತ್ತು ಬ್ಯಾಂಕ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಡಿ. 27ರಿಂದ 29ರವರೆಗೆ ಕ್ಯ್ಯಾಂಪ್‍ಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ತಿಳಿಸಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒ ಡಾಟಾ ಎಂಟ್ರಿ ಆಪರೇಟರ್ ಅಂಗನವಾಡಿ ಕಾರ್ಯಕರ್ತೆಯರು ಬ್ಯಾಂಕ್ ಪ್ರತಿನಿಧಿಗಳು ಹಾಗೂ ಇ.ಡಿ.ಸಿ.ಎಸ್ ಅಧಿಕಾರಿಗಳು ಭಾಗವಹಿಸಲಿದ್ದು ಕ್ಯಾಂಪ್‍ಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ಆಧಾರ್ ಜೋಡಣೆ. ಇ-ಕೆವೈಸಿ ನವೀಕರಣ ಗೃಹಲಕ್ಷ್ಮಿ ಅರ್ಜಿಯ ಸ್ಥಿತಿ ಪರಿಶೀಲನೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹಾರ ಒದಗಿಸಲಾಗುತ್ತದೆ. ‘ಫಲಾನುಭವಿಗಳು ನಿಗಧಿತ ದಿನಗಳಂದು ಬೆಳಿಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಸೌಲಭ್ಯ ಪಡೆದುಕೊಳ್ಳಬಹುದು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT