ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಸಂಚಾರ ನಿಯಮ ಉಲ್ಲಂಘನೆ ನಿರಂತರ

ಅಮೃತ್ ಕಿರಣ್ ಬಿ.ಎಂ.
Published : 26 ಆಗಸ್ಟ್ 2024, 7:20 IST
Last Updated : 26 ಆಗಸ್ಟ್ 2024, 7:20 IST
ಫಾಲೋ ಮಾಡಿ
Comments
ದಾವಣಗೆರೆಯ ಕುವೆಂಪು ಕನ್ನಡ ಭವನ ರಸ್ತೆಯಲ್ಲಿ ಬೈಕ್ ಓಡುಸುತ್ತಲೇ ಮೊಬೈಲ್‌ ಬಳಸುತ್ತಿರುವ ಸವಾರ –ಪ್ರಜಾವಾಣಿ ಚಿತ್ರ / ಸತೀಶ ಬಡಿಗೇರ್
ದಾವಣಗೆರೆಯ ಕುವೆಂಪು ಕನ್ನಡ ಭವನ ರಸ್ತೆಯಲ್ಲಿ ಬೈಕ್ ಓಡುಸುತ್ತಲೇ ಮೊಬೈಲ್‌ ಬಳಸುತ್ತಿರುವ ಸವಾರ –ಪ್ರಜಾವಾಣಿ ಚಿತ್ರ / ಸತೀಶ ಬಡಿಗೇರ್
ಅಧಿಕ ದಂಡ ವಸೂಲಿ ಮಾಡಿದ ಪ್ರಕರಣಗಳು ಪ್ರಕರಣ;ದಂಡ (2024 ಜನವರಿ–2024 ಜುಲೈ) ಹೆಲ್ಮೆಟ್;34,330;₹1.4 ಕೋಟಿ ಮದ್ಯ ಸೇವಿಸಿ ಚಾಲನೆ;228;₹17.2 ಲಕ್ಷ ಲೇನ್ ಡಿಸಿ‍‍‍ಪ್ಲಿನ್;3,748;₹17 ಲಕ್ಷ ಸೀಟ್‌ಬೆಲ್ಟ್‌ ರಹಿತ ಪ್ರಯಾಣ;2,635;₹13 ಲಕ್ಷ ಟ್ರಿಪಲ್ ರೈಡಿಂಗ್;1,581;₹7.3 ಲಕ್ಷ ಅತಿವೇಗದ ಚಾಲನೆ;177;5.9 ಲಕ್ಷ ಹೈಬೀಮ್ ಲೈಟ್ ಬಳಕೆ;632;₹3.1 ಲಕ್ಷ
ಫುಟ್‌ಪಾತ್ ಒತ್ತುವರಿಯಿಂದಾಗಿ ಪಾದಚಾರಿಗಳು ಓಡಾಡಲು ರಸ್ತೆಗೆ ಇಳಿಯುತ್ತಾರೆ. ಹೀಗಾಗಿ ಅಪಘಾತ ಸಂಭವಿಸುವ ಹಾಗೂ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಹೆಚ್ಚು. ಪಾಲಿಕೆಯವರು ಒತ್ತುವರಿ ತೆರವು ಮಾಡಿದರೆ ವಾಹನ ದಟ್ಟಣೆ ನಿರ್ವಹಣೆ ಸುಲಭವಾಗಲಿದೆ
ಉಮಾ ಪ್ರಶಾಂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸಂಚಾರ ನಿರ್ವಹಣೆಗೆ ತಂತ್ರಜ್ಞಾನದ ನೆರವು
ದಾವಣಗೆರೆ ನಗರದಲ್ಲಿ ಟ್ರಾಫಿಕ್ ನಿರ್ವಹಣೆಗೆ ವಿಶ್ವದರ್ಜೆಯ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಐಟಿಎಂಎಸ್) ನೆರವಿನಿಂದ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲಾಗುತ್ತಿದೆ. ಪ್ರಮುಖ ವೃತ್ತಗಳನ್ನು ಒಳಗೊಂಡಂತೆ ಒಟ್ಟಾರೆ 304 ಕ್ಯಾಮೆರಾಗಳನ್ನು ನಗರದಲ್ಲಿ ಅಳವಡಿಸಲಾಗಿದೆ. ಈ ಪೈಕಿ 220 ಸಿ.ಸಿ.ಟಿವಿ ಕ್ಯಾಮೆರಾಗಳಿವೆ. ಐಟಿಎಂಎಸ್‌ ಉಪಕರಣಗಳನ್ನು ಅಳವಡಿಸಿದ 45 ಕ್ಯಾಮೆರಾಗಳಿವೆ. ಜತೆಗೆ ಸ್ಪೀಡ್ ವಯಲೇಷನ್ ಸಿಸ್ಟಂ ಅಳವಡಿಸಿರುವ 20 ಕ್ಯಾಮೆರಾಗಳು ನಾ‌ಲ್ಕು ಕಡೆ ಕಾರ್ಯ ನಿರ್ವಹಿಸುತ್ತಿದ್ದು ವಾಹನಗಳ ವೇಗದ ಮೇಲೆ ನಿಗಾ ವಹಿಸುತ್ತಿವೆ. ನಿಗದಿತ ವೇಗ ಮೀರಿದ ವಾಹನಗಳಿಗೆ ಆನ್‌ಲೈನ್‌ನಲ್ಲೇ ದಂಡ ವಿಧಿಸುವ ವ್ಯವಸ್ಥೆ ಕಳೆದ ಎರಡು ವರ್ಷದಿಂದ ಜಾರಿಯಲ್ಲಿದೆ. ಉಲ್ಲಂಘನೆ ಪ್ರಕರಣಗಳನ್ನು ಸಿಬ್ಬಂದಿ ರಹಿತವಾಗಿ ಪತ್ತೆ ಹಚ್ಚಲು ಈ ಸಾಧನ ನೆರವಾಗುತ್ತಿದೆ. ಆದರೆ ಪೊಲೀಸರು ಇಲ್ಲದ್ದನ್ನು ಗಮನಿಸಿ ಯುವಜನರು ಯರ್ರಾಬಿರ್ರಿ ವಾಹನ ಚಲಾಯಿಸುತ್ತ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಇತರರಿಗೂ ಸಮಸ್ಯೆ ತಂದೊಡ್ಡುತ್ತಿದ್ದಾರೆ. ಪೊಲೀಸರು ವಿವಿಧೆಡೆ ಇದ್ದು ಇಂಥವರನ್ನು ಗಮನಿಸಿದರೆ ಒಳಿತು ಎಂದು ಅನೇಕರು ಆಗ್ರಹಿಸುತ್ತಾರೆ.
ಸೈಲೆನ್ಸರ್ ಹಾರ್ನ್‌ನಿಂದಲೂ ಸಮಸ್ಯೆ ಇನಾಯತ್ ಉಲ್ಲಾ ಟಿ.
ಹರಿಹರ: ಎದೆಬಡಿತ ಹೆಚ್ಚಿಸುವ ದೊಡ್ಡ ಹಾರ್ನ್ ಡಿಫೆಕ್ಟಿವ್ ಸೈಲೆನ್ಸರ್‌ನ ಕರ್ಕಶ ಶಬ್ದ ಎದುರುಗಡೆ ಸವಾರರ ಕಣ್ಣು ಕುಕ್ಕುವ ಎಲ್‌ಇಡಿ (ಹೈಬೀಮ್) ಲೈಟ್‌ಗಳ ಹಾವಳಿ ನಿವಾರಿಸಲು ಹರಿಹರ ಪೊಲೀಸರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಡಿಫೆಕ್ಟಿವ್ ಸೈಲೆನ್ಸರ್ ಹೊಂದಿದ 32 ಬೈಕ್‌ಗಳ ವಿರುದ್ಧ ಪ್ರಕರಣ ದಾಖಲಿಸಿ ₹16000 ದಂಡ ವಸೂಲಿ ಮಾಡಿದ್ದಾರೆ. ಅಧಿಕ ಶಬ್ದದ ಹಾರ್ನ್ ಅಳವಡಿಸಿಕೊಂಡ 53 ಬೈಕ್ ಹಾಗೂ ಆಟೊಗಳ ವಿರುದ್ಧ ಪ್ರಕರಣ ದಾಖಲಿಸಿ ₹ 26500 ದಂಡ ಹಾಕಲಗಿದೆ. ಕಣ್ಣು ಕುಕ್ಕುವ ಎಲ್‌ಇಡಿ ಲೈಟ್ ಅಳವಡಿಸಿಕೊಂಡ 75 ವಿವಿಧ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ₹ 37500 ದಂಡ ವಿಧಿಸಿದ್ದಾರೆ. ಒಟ್ಟಾರೆ 160 ಪ್ರಕರಣಗಳಿಂದ ₹ 80000 ದಂಡ ವಸೂಲಿ ಮಾಡಲಾಗಿದೆ ಎನ್ನುತ್ತಾರೆ ನಗರಠಾಣೆ ಇನ್ಸ್‌ಪೆಕ್ಟರ್‌ ಎಸ್.ದೇವೇಂದ್ರಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT