ಜಗಳೂರು: ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ಗೌರಿಪುರ ಗ್ರಾಮದ ರಾಮಕೃಷ್ಣ ಸಾವಿನ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಒತ್ತಾಯಿಸಿದರು.

ತಾಲ್ಲೂಕಿನ ಗೌರಿಪುರ ಗ್ರಾಮದ ಮೃತ ರಾಮಕೃಷ್ಣ ಅವರ ನಿವಾಸಕ್ಕೆ ತೆರಳಿ ಪೋಷಕರನ್ನು ಶನಿವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.

ತಾಲ್ಲೂಕಿನಲ್ಲಿ ಇಂತಹ ದುರ್ಘಟನೆ ಘಟನೆ ನೆಡೆಯಬಾರದಿತ್ತು. ಪಕ್ಷ, ಜಾತಿ ಭೇದವಿಲ್ಲದೇ ಎಲ್ಲರೂ ದುಷ್ಕ್ರತ್ಯವನ್ನು ಖಂಡಿಸಿದ್ದಾರೆ. ಆರೋಪಿಗಳು ಯಾರೇ ಇರಲಿ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

‘ಭ್ರಷ್ಟಾಚಾರಾದ ಪಿಡುಗಿನ ವಿರುದ್ಧ ಹೋರಾಡಿದ ಕಾರಣಕ್ಕೆ ನನ್ನ ಮಗ ಕೊಲೆಯಾಗಿ ಹುತಾತ್ಮನಾಗಿ
ದ್ದಾನೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನುನು ಕ್ರಮ ಕೈಗೊಳ್ಳಬೇಕು. ನನ್ನ ಮಗನನ್ನು ಕೊಲೆಗೈದವರಿಗೆ ತಕ್ಕ ಶಿಕ್ಷೆಯಾಗಬೇಕು. ಆರೋಪಿ ಪಿಡಿಒ ನಾಗರಾಜ್ ಅಕ್ರಮವಾಗಿ ಸಂಪಾದಿಸಿದ ಹಣ ಹಾಗೂ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕು, ಸೇವೆಯಿಂದ ವಜಾ ಮಾಡಬೇಕು’ ಎಂದು ಮೃತ ರಾಮಕೃಷ್ಷ ತಂದೆ ಪ್ರಕಾಶಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಮುಖಂಡರಾದ ಸೂರಲಿಂಗಪ್ಪ, ಎಸ್.ಬಿ. ಕುಬೇಂದ್ರಪ್ಪ, ಡಿ.ಆರ್. ಹನುಮಂತಪ್ಪ, ಸಿ.ಡಿ. ಹನುಮಂತಪ್ಪ, ಶಂಭುಲಿಂಗಪ್ಪ, ಹಟ್ಟಿ ತಿಪ್ಪೇಸ್ವಾಮಿ, ಮಾಳಮ್ಮನಹಳ್ಳಿ ವೆಂಕಟೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.