ದಾವಣಗೆರೆ: ಖಾಸಗಿ ಟೆಲಿಕಾಂ ಕಂಪನಿಗಳು ಪ್ರೀಪೇಯ್ಡ್ ಇಂಟರ್ನೆಟ್ ಪ್ಯಾಕ್ ಹಾಗೂ ಮೊಬೈಲ್ ರೀಚಾರ್ಜ್ ದರ ಹೆಚ್ಚಿಸಿರುವುದನ್ನು ಖಂಡಿಸಿ ಎಐಡಿಎಸ್ಒ ಮತ್ತು ಎಐಡಿವೈಒ ಸಂಘಟನೆಗಳಿಂದ ಬುಧವಾರ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ‘ಟ್ವಿಟ್ಟರ್ ಸ್ಟಾರ್ಮ್ ಚಳವಳಿ’ ನಡೆಯಿತು.

ಕೋವಿಡ್ ಬಂದ ಬಳಿಕ ಮೊಬೈಲ್ ತಂತ್ರಜ್ಞಾನ ಹಾಗೂ ಇಂಟರ್ನೆಟ್ ಬಳಕೆ ಗಮನಾರ್ಹವಾಗಿ ಹೆಚ್ಚಳವಾಗಿದೆ. ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳಲು ಮೊಬೈಲ್ ಇಂಟರ್ನೆಟ್ ಸೇವೆ ಅಗತ್ಯವಾಗಿದೆ. ಹೀಗಿರುವಾಗ ಖಾಸಗಿ ಟೆಲಿಕಾಂ ಕಂಪನಿಗಳು ಪ್ರೀಪೇಯ್ಡ್ ದರಗಳನ್ನು ಶೇ 20ರಿಂದ ಶೇ 25ರಷ್ಟು ಹೆಚ್ಚಿಸಿರುವುದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

‘ಖಾಸಗಿ ಟೆಲಿಕಾಂ ಕಂಪನಿಗಳು ದರ ಏರಿಕೆ ಮಾಡುತ್ತಿದ್ದರೂ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಯಾವುದೇ ಕ್ರಮವನ್ನು ಕೈಗೊಳ್ಳದೇ ಮೌನವಾಗಿರುವುದು ಖಂಡನೀಯ. ಸಾರ್ವಜನಿಕ ವಲಯದ ಬಿ.ಎಸ್.ಎನ್.ಎಲ್ ಬಲಿಕೊಟ್ಟು, ಕೇವಲ ಒಂದೆರಡು ದೈತ್ಯ ಖಾಸಗಿ ಕಂಪನಿಗಳು ಟೆಲಿಕಾಂ ವಲಯದ ಮೇಲೆ ಏಕಸ್ವಾಮ್ಯ ಸಾಧಿಸುವಂತೆ ಮಾಡುವಲ್ಲಿ ಮೋದಿ ಸರ್ಕಾರವು ಯಶಸ್ವಿಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಎಐಡಿವೈಒನ ಪರಶುರಾಮ್, ಅನಿಲ್, ಮನು, ಗುರು, ಶಶಿಕುಮಾರ್, ಅಮಿತ್, ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಪೂಜಾ, ಕಾವ್ಯಾ, ಪುಷ್ಪ ಸೇರಿದಂತೆ ಎರಡೂ ಸಂಘಟನೆಗಳ ಜಿಲ್ಲಾ ಸಮಿತಿಯ ಸದಸ್ಯರು ಟ್ವೀಟ್ ಮಾಡುವ ಮೂಲಕ ಚಳವಳಿಯಲ್ಲಿ ಪಾಲ್ಗೊಂಡರು. ರಾಜ್ಯದಾದ್ಯಂತ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಯುವಜನರು, ಜನಸಾಮಾನ್ಯರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ #SayNoMobileTarriffHike, #SayNoPrivatisation, #AIDSO_AIDYO, @TRAI @DoT_India ಎಂಬ ಹ್ಯಾಶ್ ಟ್ಯಾಗ್ಗಳನ್ನು ಬಳಸಿ ಟ್ವೀಟ್ ಹಾಗೂ ರೀ ಟ್ವೀಟ್ ಮಾಡುವ ಮೂಲಕ ಬೆಲೆ ಏರಿಕೆಯನ್ನು ವಿರೋಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.