ದಾವಣಗೆರೆ: ಇಲ್ಲಿನ ಪ್ರಿನ್ಸ್ ಜಯಚಾಮರಾಜೇಂದ್ರ (ಪಿ.ಜೆ) ಬಡಾವಣೆಯ ಪಹಣಿ ತಿದ್ದುಪಡಿ ಮಾಡಿರುವ ಕಂದಾಯ ಇಲಾಖೆ, ‘ಖಬರಸ್ತಾನ್ ಸುನ್ನಿ ವಕ್ಫ್ ಸಂಸ್ಥೆ’ ಹೆಸರನ್ನು ರದ್ದುಪಡಿಸಿ ‘ಸರ್ಕಾರಿ ಖರಾಬು’ ಎಂಬುದಾಗಿ ಉಲ್ಲೇಖಿಸಿದೆ. ಸ್ಥಳೀಯರ ಆಕ್ರೋಶಕ್ಕೆ ಮಣಿದು ಕೊನೆಗೂ ಭೂದಾಖಲೆಗಳನ್ನು ಸರಿಪಡಿಸಿದೆ.

ನಗರದ ಹೃದಯ ಭಾಗದ ಪಿ.ಜೆ ಬಡಾವಣೆಯ 4 ಎಕರೆ 13 ಗುಂಟೆ ಜಾಗ ಭೂದಾಖಲೆಗಳಲ್ಲಿ ‘ಖಬರಸ್ತಾನ್ ಸುನ್ನಿ ವಕ್ಫ್ ಸಂಸ್ಥೆ’ ಹೆಸರಿನಲ್ಲಿತ್ತು. ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಬಹಿರಂಗಗೊಂಡ ಈ ದಾಖಲೆಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದವು.

ಪಿ.ಜೆ. ಬಡಾವಣೆಯ ಅಕ್ಕಮಹಾದೇವಿ ರಸ್ತೆಯ ಗುಂಡಿ ಮಹಾದೇವಪ್ಪ ಅವರ ಹಳೆಯ ಮನೆ, ಎ.ವಿ.ಕಮಲಮ್ಮ ಕಾಲೇಜು, ಚೇತನಾ ಹೋಟೆಲ್ ರಸ್ತೆ, ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತ, ಶ್ರೀರಾಮ ಮಂದಿರ ಒಳಗೊಂಡ ಬಡಾವಣೆಯ ದಾಖಲೆಯಲ್ಲಿ ವಕ್ಫ್ ಆಸ್ತಿಯ ಹೆಸರು ಕಾಣಿಸಿಕೊಂಡಿತ್ತು. ಉಪವಿಭಾಗಧಿಕಾರಿ ನ್ಯಾಯಾಲಯದ ಆದೇಶದಂತೆ ದಾವಣಗೆರೆ ತಹಶೀಲ್ದಾರ್ 2015ರ ಮಾರ್ಚ್ 10ರಂದು ಖಾತೆ ತಿದ್ದುಪಡಿ ಮಾಡಿದ್ದರು. ಈ ವೇಳೆ ತಾಂತ್ರಿಕ ಸಮಸ್ಯೆಯಿಂದ ಪಹಣಿಯಲ್ಲಿ ಕಾಣಿಸಿಕೊಂಡ ದೋಷವನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸರಿಪಡಿಸಿದ್ದಾರೆ.

‘ದಾವಣಗೆರೆ ಗ್ರಾಮದ ಕಸಬಾ ಹೋಬಳಿಯ ಸರ್ವೆ ನಂಬರ್ 48 ಹಾಗೂ 53ರಲ್ಲಿದ್ದ 70 ಎಕರೆಯನ್ನು ಬಡಾವಣೆ ಅಭಿವೃದ್ಧಿಗಾಗಿ 1955ರಲ್ಲಿ ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಸರ್ವೆ ನಂಬರ್ 53ರಲ್ಲಿದ್ದ 18 ಎಕರೆಯನ್ನು ಸರ್ವೆ ನಂಬರ್ 48ರ ಜೊತೆಗೆ ವಿಲೀನಗೊಳಿಸಲಾಗಿತ್ತು. ಸರ್ವೆ ನಂಬರ್ಗಳ ಕ್ರಮಾಂಕ ತಪ್ಪದಂತೆ ಗ್ರಾಮದ ಕೊನೆಯ ಸರ್ವೆ ನಂಬರ್ 162ರಲ್ಲಿದ್ದ 4 ಎಕರೆ 13 ಗುಂಟೆ ಭೂಮಿಯನ್ನು ಸರ್ವೆ ನಂಬರ್ 53ಎಂಬುದಾಗಿ ತಿದ್ದುಪಡಿ ಮಾಡಲಾಗಿತ್ತು. ಆಗ

‘ಖಬರಸ್ತಾನ್ ಸುನ್ನಿ ವಕ್ಫ್ ಸಂಸ್ಥೆ’ ಆಸ್ತಿ ಸರ್ವೆ ನಂಬರ್ 53 ಎಂಬುದಾಗಿತ್ತು. 2015ರಲ್ಲಿ ಭೂದಾಖಲೆ ತಿದ್ದುಪಡಿ ಮಾಡುವಾಗ ಬಡಾವಣೆಯ ಆಸ್ತಿಯೂ ವಕ್ಫ್ ಹೆಸರಿನಲ್ಲಿ ಕಣ್ತಪ್ಪಿನಿಂದ ನಮೂದಾಗಿತ್ತು’ ಎಂದು ತಹಶೀಲ್ದಾರ್ ಎಂ.ಬಿ.ಅಶ್ವತ್ಥ್ ವಿವರಿಸಿದ್ದಾರೆ.

ಬಡಾವಣೆಯ ಪಹಣಿಯಲ್ಲಿ ವಕ್ಫ್ ಆಸ್ತಿ ಎಂಬುದಾಗಿ ಉಲ್ಲೇಖಗೊಂಡಿದ್ದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬಡಾವಣೆಗೆ ಭೇಟಿ ನೀಡಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳೀಯರೊಂದಿಗೆ ಸಮಾಲೋಚನಾ ಸಭೆ ನಡೆಸಿ ಪಹಣಿ ತಿದ್ದುಪಡಿ ಮಾಡುವ ಆಶ್ವಾಸನೆ ನೀಡಿದ್ದರು.

ನಕ್ಷೆ ತಿದ್ದುಪಡಿಗೆ ಪ್ರಸ್ತಾವ

ಭೂದಾಖಲೆಯನ್ನು ಡಿಜಿಟಲ್ ಸ್ವರೂಪದಲ್ಲಿ ನೀಡುವ ಕಂದಾಯ ಇಲಾಖೆಯ ‘ದಿಶಾಂಕ್’ ಆ್ಯಪ್ನಲ್ಲಿ ಪಿ.ಜೆ.ಬಡಾವಣೆಯ ಆಸ್ತಿಯ ವಿವರಗಳಲ್ಲಿ ಇನ್ನೂ ‘ಖಬರಸ್ತಾನ್ ಸುನ್ನಿ ವಕ್ಫ್ ಸಂಸ್ಥೆ’ ಹೆಸರಿದೆ. ನಕ್ಷೆ ತಿದ್ದುಪಡಿ ಮಾಡಿ ದಾಖಲೆ ಸರಿಪಡಿಸುವಂತೆ ಭೂದಾಖಲೆಗಳ ಆಯುಕ್ತರಿಗೆ ಕಂದಾಯ ಇಲಾಖೆ ಪ್ರಸ್ತಾವ ಸಲ್ಲಿಸಿದೆ.

‘ದಿಶಾಂಕ್ ಆ್ಯಪ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಲೋಪವನ್ನು ಸರಿಪಡಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಒಂದು ವಾರದಲ್ಲಿ ಇದು ಕೂಡ ತಿದ್ದುಪಡಿಯಾಗುವ ಸಾಧ್ಯತೆ ಇದೆ’ ಎಂದು ತಹಶೀಲ್ದಾರ್ ಎಂ.ಬಿ.ಅಶ್ವತ್ಥ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.