ದಾವಣಗೆರೆ: ಆಗಸ್ಟ್ 19ಕ್ಕೆ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅದ್ದೂರಿ ಆಚರಿಸಲು ಎಲ್ಲಾ ಛಾಯಾಗ್ರಾಹಕರು ಸಹಕರಿಸಬೇಕು ಎಂದು ತಾಲ್ಲೂಕು ಫೋಟೋಗ್ರಾಫರ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ. ಅಗಡಿ ತಿಳಿಸಿದರು.

ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಪೂರ್ವಭಾವಿ ಸಭೆ ಪ್ರಯುಕ್ತ ಅಸೋಸಿಯೇಷನ್ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

‘ಛಾಯಾಗ್ರಾಹಕರಿಗೆ ಪ್ರವಾಸ ಮತ್ತು ಅವರ ಕುಟುಂಬಗಳಿಗೆ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವುದು, ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನಿಸಲಾಗುವುದು’ ಎಂದರು.

ದಾವಣಗೆರೆ ಛಾಯಾಗ್ರಾಹಕರ ಸಹಕಾರ ಸದಸ್ಯರಿಗೆ ಯಶಸ್ವಿನಿ ಕಾರ್ಡ್ ಅನ್ನು ಮಾಜಿ ಅಧ್ಯಕ್ಷ ಶಿಕಾರಿಶಂಬೊ ವಿತರಿಸಿದರು.

ಪಂಚಾಕ್ಷರಯ್ಯ, ಕಿಶೋರ್ ಕುಮಾರ್ ಹಾಗೂ ಶಶಿಕುಮಾರ್ ಡಿ. ಬಿ. ಅವರು ಸಂಘದ ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಹೊಸ ಲುಮ್ಯಾಕ್ಸ್ ಎಸ್5ಎಲ್‌ಎಲ್ ಕ್ಯಾಮೆರಾ ಬಗ್ಗೆ ಕಾರ್ಯಗಾರವನ್ನು ರಘು ಅವರು ನಡೆಸಿಕೊಟ್ಟರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ್ ಜಾಧವ್, ಸಹಕಾರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ದುಗ್ಗೇಶ್ ಕಡೆಮನೆ, ಖಜಾಂಚಿ ಮಲ್ಲಿಕಾರ್ಜುನ್, ಸಂಚಾಲಕರಾದ ಮಿಥುನ್, ಮಹಾಂತೇಶ್, ಮಾಜಿ ಅಧ್ಯಕ್ಷ ಎಚ್.ಕೆ.ಸಿ. ರಾಜು ಇದ್ದರು. ಏಕನಾಥ್ ತಿಲಕ್ ಸ್ವಾಗತಿಸಿದರು. ರುದ್ರಮ್ಮ, ನಿರ್ಮಲ ಪ್ರಾರ್ಥಿಸಿದರು. ತಿಪ್ಪೇಸ್ವಾಮಿ ನಿರೂಪಿಸಿದರು. ಕಿರಣ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.