ದಾವಣಗೆರೆ: ‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಆನೆಯಾದರೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹುಚ್ಚು ನಾಯಿ ಇದ್ದಂತೆ. ಆನೆ ನಡೆಯುವಾಗ ಹುಚ್ಚು ನಾಯಿ ಬೊಗಳಿದರೆ ಆನೆಯ ಗೌರವ ಕಡಿಮೆಯಾಗುತ್ತದೆಯೇ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರಶ್ನಿಸಿದರು.

‘ಯತ್ನಾಳ ಬಗ್ಗೆ ಮಾತನಾಡಲು ಅಸಹ್ಯವಾಗುತ್ತದೆ. ಅಸಂಬದ್ಧ, ಅಶ್ಲೀಲ ಪದಗಳನ್ನು ಬಳಕೆ ಮಾಡುವುದೇ ಅವರ ಸಂಸ್ಕೃತಿ. ನಾಯಿಗೆ ಇರುವ ನಿಯತ್ತೂ ಆ ಮನುಷ್ಯನಿಗೆ ಇಲ್ಲ. ಹುಚ್ಚು ನಾಯಿಯಂತೆ ಬೊಗಳುವುದೇ ಕೆಲಸವಾ? ಅವರು ಯಡಿಯೂರಪ‍್ಪ ಬಗ್ಗೆ ಮಾತನಾಡಿದರೆ ನಾವು ಸುಮ್ಮನಿರುವುದಿಲ್ಲ. ಅವರ ಮಿದುಳಿಗೂ ನಾಲಿಗೆಗೂ ಸಂಬಂಧವೇ ಇಲ್ಲ’ ಎಂದು ಭಾನುವಾರ ಪತ್ರಕರ್ತರ ಎದುರು ವಾಗ್ದಾಳಿ ನಡೆಸಿದರು.

‘ಅಧಿವೇಶನದ ಒಳಗೆ ಹಾಗೂ ಹೊರಗೆ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಟೀಕಿಸುವುದೇ ಅವರ ವೃತ್ತಿಯಾಗಿದೆ. ವಿಜಯೇಂದ್ರ ಅವರನ್ನು ನೇಮಿಸಿರುವುದು ಪಕ್ಷದ ವರಿಷ್ಠರು. ವಿಜಯೇಂದ್ರ ಅವರನ್ನು ಟೀಕೆ ಮಾಡುವುದು ಮೋದಿಯನ್ನೇ ಟೀಕಿಸಿದಂತೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.