ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನವರಾತ್ರಿ; ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

Published : 6 ಅಕ್ಟೋಬರ್ 2024, 16:03 IST
Last Updated : 6 ಅಕ್ಟೋಬರ್ 2024, 16:03 IST
ಫಾಲೋ ಮಾಡಿ
Comments

ಅಳ್ನಾವರ: ‘ನಮ್ಮ ಭವ್ಯ ಪರಂಪರೆ, ಸಂಸ್ಕ್ರತಿ ಉಳಿಯಲು ಶಕ್ತಿ ದೇವಿ ಆರಾಧನೆ ಮುಖ್ಯ. ದುಷ್ಟ ಶಕ್ತಿ ದಮನ ಮಾಡಿ ಉತ್ತಮ ಸಮಾಜ ನಿರ್ಮಿಸಲು ನವರಾತ್ರಿ ಉತ್ಸವ ಮುನ್ನುಡಿ ಬರೆಯಲಿ’ ಎಂದು ಅಳ್ನಾವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಸಿ.ಹಿರೇಮಠ ಹೇಳಿದರು.

ಇಲ್ಲಿನ ಅಶೋಕ ರಸ್ತೆಯಲ್ಲಿನ ದುರ್ಗಾಮಾತಾ ಉತ್ಸವ ಸಮಿತಿಯಿಂದ ನವರಾತ್ರಿ ಪ್ರಯುಕ್ತ ಶನಿವಾರ  ಹಮ್ಮಿಕೊಂಡಿದ್ದ ಸಾಂಸ್ಕ್ರತಿಕ ಉತ್ಸವದಲ್ಲಿ ಮಾತನಾಡಿದ ಅವರು,  ಮಕ್ಕಳ ಪ್ರತಿಭೆ ಹೊರಹೊಮ್ಮಲು ಸಾಂಸ್ಕ್ರತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.

ಗ್ರಾಮದೇವಿ ದೇವಸ್ಥಾನದ ಧರ್ಮದರ್ಶಿ ಬಿ.ಎ.ಪಾಟೀಲ ಮಾತನಾಡಿ, ಹಬ್ಬಗಳು ಜನರಲ್ಲಿ ಏಕತೆ,
ಸಹೋದರತ್ವ ಭಾವ ಮೂಡಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಉತ್ಸವದ ಪ್ರಯುಕ್ತ ರಂಗೋಲಿ, ಮ್ಯುಸಿಕಲ್ ಚೇರ್‌ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  

ಹಿರಿಯರಾದ ಗುರು ಹಟ್ಟಿಹೊಳಿ, ಸುರೇಶ ಕೊಡಳ್ಳಿ, ವೀರೇಶ ಲಿಂಗನಮಠ, ಅಶೋಕ ಪಾಟೀಲ, ಫಕೀರ ಮೇದಾರ, ರವಿ ಮೇದಾರ, ಬಸವರಾಜ ಮೇದಾರ, ನಿಜಗುಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT