ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರಿಗೆ ಹೆಸರು, ಕಡಲೆ ಚೀಲ ಹಸ್ತಾಂತರ ಇಂದು

Published : 6 ಅಕ್ಟೋಬರ್ 2024, 16:05 IST
Last Updated : 6 ಅಕ್ಟೋಬರ್ 2024, 16:05 IST
ಫಾಲೋ ಮಾಡಿ
Comments

ಅಣ್ಣಿಗೇರಿ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಜ್ಯ ಉಗ್ರಾಣದಲ್ಲಿ ಕಳವಾಗಿದ್ದ ಕಡಲೆ ಹಾಗೂ ಹೆಸರು ಕಾಳು ತುಂಬಿದ್ದ ಚೀಲಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದ್ದು, ರೈತರಿಗೆ ವಿತರಿಸಲಾಗುವುದು ಎಂದು  ಸಿಪಿಐ ರವಿಕುಮಾರ ಕಪ್ಪತ್ತನವರ ಹೇಳಿದರು.

ಪಕ್ಷಾತೀತ ರೈತ ಹೋರಾಟ ಸಮಿತಿ ಪಟ್ಟಣದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

10 ರೈತರ ಪೈಕಿ ಅ.7ರಂದು  ನಾಲ್ವರು ರೈತರಿಗೆ ಚೀಲಗಳನ್ನು ವಿತರಿಸಲಾಗುವದು. ರೈತರು ನ್ಯಾಯಾಲಯದ ಮೂಲಕ ಚೀಲಗಳನ್ನು ಪಡೆಯಬೇಕಿತ್ತು. ಇದನ್ನು ವಿಶೇಷ ಪ್ರಕರಣವೆಂದು ಪರಗಣಿಸಿ ನ್ಯಾಯಾಲಯದ ಅನುಮತಿ ಪಡೆದು ಚೀಲಗಳನ್ನು ಹಸ್ತಾಂತರಿಸಲಾಗುತ್ತಿದೆ ಎಂದರು.

ರೈತ ಭಗವಂತಪ್ಪ ಪುಟ್ಟಣ್ಣವರ ಮಾತನಾಡಿದರು. ಶಾಸಕ ಎನ್.ಎಚ್.ಕೋನರಡ್ಡಿ ಮತ್ತು ಪೊಲೀಸ್ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಸ್ಥಳೀಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಶೀಲ್ದಾರ್‌ ಮಂಜುನಾಥ ದಾಸಪ್ಪನವರ, ಪಿಎಸ್ಐ ಸಿಧ್ದಾರೂಡ ಆಲದಕಟ್ಟಿ, ಸದುಗೌಡ ಪಾಟೀಲ, ಚಂಬಣ್ಣ ಹಾಳದೋಟರ, ಮಂಜುನಾಥ ಮಾಯಣ್ಣವರ, ಚಂಬಣ್ಣ ಸುರಕೋಡ, ಮಹಾಬಲೇಶ್ವರ ಹೆಬಸೂರ, ಭರತೇಶ ಜೈನ್‌, ರೈತ ಹೋರಾಟಗಾರರಾದ ಗುರುಸಿದ್ದಪ್ಪ ಕೊಪ್ಪದ, ಯಲ್ಲಪ್ಪ ಮರಬಸಿ, ವೀರನಾರಾಯಣ ಬೆಂತೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT