ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ (ಕೆಎಂಸಿಆರ್ಐ) ಆಟದ ಮೈದಾನದಲ್ಲಿ ನ.5ರಿಂದ ನಾಲ್ಕು ದಿನಗಳವರೆಗೆ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್ಜಿಯುಎಚ್ಎಸ್) 22ನೇ ಅಂತರ್ ಕಾಲೇಜು ಅಥ್ಲೆಟಿಕ್ ಕೂಟದಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಸಮಗ್ರ ಪ್ರಶಸ್ತಿ ಪಡೆಯಿತು.

39 ಅಂಕಗಳೊಂದಿಗೆ ಈ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದರೆ, 35 ಅಂಕಗಳೊಂದಿಗೆ ಮಂಡ್ಯ ವೈದ್ಯಕೀಯ ಕಾಲೇಜು ದ್ವಿತೀಯ ಸ್ಥಾನ, 29 ಅಂಕಗಳೊಂದಿಗೆ ಮೂಡುಬಿದಿರೆಯ ಆಳ್ವಾಸ್ನ ನ್ಯಾಚುರೋಪಥಿ ಮತ್ತು ಯೋಗವಿಜ್ಞಾನ ಕಾಲೇಜು ತೃತೀಯ ಸ್ಥಾನ ಪಡೆಯಿತು.

ಪುರುಷರ ವಿಭಾಗದಲ್ಲಿ ಒಟ್ಟು 25 ಅಂಕಗಳೊಂದಿಗೆ ಮಂಡ್ಯ ವೈದ್ಯಕೀಯ ವಿಜ್ಞಾನ ಕಾಲೇಜು ಹಾಗೂ ಮಹಿಳೆಯರ ವಿಭಾಗದಲ್ಲಿ 31 ಅಂಕಗಳೊಂದಿಗೆ ಮಂಗಳೂರಿನ ಅಥೆನಾ ನರ್ಸಿಂಗ್ ಕಾಲೇಜು ಟೀಮ್ ಚಾಂಪಿಯನ್ ಟ್ರೋಫಿ ಪಡೆದವು.

ಪುರುಷರ ವಿಭಾಗದಲ್ಲಿ ಉದ್ದಜಿಗಿತ, ಡಿಸ್ಕಸ್ ಥ್ರೋ ಹಾಗೂ ಶಾಟ್ಪುಟ್ನಲ್ಲಿ ಪ್ರಥಮ ಸ್ಥಾನ ಪಡೆದ ಮೂಡುಬಿದಿರೆ ಆಳ್ವಾಸ್ನ ಆರೋಗ್ಯ ವಿಜ್ಞಾನ ಕಾಲೇಜಿನ ಸೂರ್ಯ ಪಿ. ಹಾಗೂ ಮಹಿಳೆಯರ ವಿಭಾಗದಲ್ಲಿ 800 ಮೀಟರ್ ಹಾಗೂ 1500 ಮೀಟರ್ ಓಟದಲ್ಲಿ ಪ್ರಥಮ, ಲಾಂಗ್ಜಂಪ್ ಹಾಗೂ ಶಾಟ್ಪುಟ್ನಲ್ಲಿ ತೃತೀಯ ಸ್ಥಾನ ಪಡೆದ ಶಿವಮೊಗ್ಗ ವೈದ್ಯಕೀಯ ಕಾಲೇಜಿನ ಸಾಕ್ಷಿ ಎಸ್.ಡಿ ಅವರು ಬೆಸ್ಟ್ ಅಥ್ಲಿಟ್ ಆಗಿ ಹೊರಹೊಮ್ಮಿದರು.

ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಟ್ರೋಫಿ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

ಅಂತರರಾಷ್ಟ್ರೀಯ ಕ್ರೀಡಾಪಟು ಪೂನಂ ಬೆಳ್ಳಿಯಪ್ಪ ಮಾತನಾಡಿ, ‘ಕ್ರೀಡೆಯಲ್ಲಿ ಸೋಲು– ಗೆಲುವು ಸಾಮಾನ್ಯ. ಕೆಲವರಿಗೆ ಯಶಸ್ಸು ಬೇಗನೆ, ಇನ್ನೂ ಕೆಲವರಿಗೆ ತಡವಾಗಿ ಲಭಿಸುತ್ತದೆ. ವಿಳಂಬದಿಂದ ನಿರಾಸೆಗೆ ಒಳಗಾಗದೆ ಸಾಧನೆಗೆ ಸದಾ ಶ್ರಮಿಸಬೇಕು’ ಎಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.

‘ಕ್ರೀಡೆಯು ದೈಹಿಕ, ಮಾನಸಿಕವಾಗಿ ಶಿಸ್ತು ಬೆಳೆಸುವ ಜೊತೆಗೆ ಭಾವನಾತ್ಮಕ ಅನುಭವಗಳನ್ನು ನೀಡುತ್ತದೆ. ಪ್ರತಿ ಹಂತದಲ್ಲಿ ಪ್ರೇರಣೆ ಪಡೆದುಕೊಂಡು ಕ್ರೀಡೆಯಲ್ಲಿ ಯಶಸ್ಸು ಸಾಧಿಸಬೇಕು. ಕ್ರೀಡೆಯನ್ನು ಪ್ರೀತಿಸಿ ಅದರಲ್ಲಿ ಪಾಲ್ಗೊಳ್ಳುವಿಕೆ ಹೆಚ್ಚಿಸಿಕೊಂಡಾಗ ಮಾತ್ರ ಯಶಸ್ಸು ದೊರೆಯುತ್ತದೆ’ ಎಂದು ಸಲಹೆ ನೀಡಿದರು.

ಕೆಎಂಸಿ–ಆರ್ಐ ನಿರ್ದೇಶಕ ಡಾ. ಎಸ್ ಎಸ್. ಕಮ್ಮಾರ, ಸಿಂಡಿಕೇಟ್ ಸದಸ್ಯ ಡಾ. ಎಂ.ಜಿ. ಜೀವಣ್ಣವರ, ಸೆನೆಟ್ ಸದಸ್ಯ ಸೋಮಶೇಖರ ಕಲ್ಮಠ, ಅಥ್ಲಿಟಿಕ್ ಕೂಟದ ಸಂಘಟನಾ ಚೇರ್ಮನ್ ಡಾ.ಗುರಶಾಂತಪ್ಪ ಯಲಗಚ್ಚಿನ, ಡಾ. ಕೆ.ಎಸ್. ಕಮ್ಮಾರ, ಕಾರ್ಯದರ್ಶಿ ಡಾ. ರಾಜಶೇಖರ ದುಂಡರಡ್ಡಿ, ಡಾ. ರಾಜಶೇಖರ ದ್ಯಾಬೇರಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.