ಹುಬ್ಬಳ್ಳಿ: ಭಾರತದ ವಿದ್ಯುತ್ ಚಾಲಿತ ಸ್ಕೂಟರ್ ಉತ್ಪಾದಕ ಸಂಸ್ಥೆ ಅಥೇರ್ ಎನರ್ಜಿ ಇಲ್ಲಿನ ಬೈರಿದೇವರಕೊಪ್ಪದಲ್ಲಿ ಬೆಲ್ಲದ ಗ್ರೂಪ್ ಪಾಲುದಾರಿಕೆಯೊಂದಿಗೆ ಎಥರ್ 450X ರಿಟೇಲ್ ಮಾರಾಟ ಮಳಿಗೆ ಆರಂಭಿಸಿದೆ.

ಅಥೇರ್ ಎನರ್ಜಿಯ ಮುಖ್ಯ ಉದ್ಯಮ ಅಧಿಕಾರಿ ತರುಣ್ ಮೆಹ್ತಾ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಇಲ್ಲಿ ಆರಂಭವಾಗಿರುವುದು ರಾಜ್ಯದ ನಾಲ್ಕನೇ ಅಥೇರ್ ಎನರ್ಜಿ ರಿಟೇಲ್ ಮಳಿಗೆಯಾಗಿದ್ದು, ಎರಡು ಬೆಂಗಳೂರಿನಲ್ಲಿ ಮತ್ತು ಒಂದು ಮೈಸೂರಿನಲ್ಲಿವೆ. ಅಥೇರ್ 450X ಮತ್ತು ಅಥೇರ್ 450+ ಸ್ಕೂಟರ್‌ಗಳು ಇಲ್ಲಿ ಖರೀದಿಗೆ ಮತ್ತು ಪರೀಕ್ಷಾರ್ಥ ಚಾಲನೆಗೆ ಲಭ್ಯ ಇರಲಿವೆ’ ಎಂದು ತಿಳಿಸಿದರು.

ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳ ವಾಯಿದೆ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಬ್ಯಾಟರಿಗಳು ಕನಿಷ್ಠ 9ರಿಂದ 10 ವರ್ಷಗಳ ಕಾಲ ಬಾಳಿಕೆಗೆ ಬರುತ್ತವೆ. ಮೂರು ವರ್ಷದಲ್ಲಿ 50 ಸಾವಿರ ಕಿ.ಮೀ. ವಾಹನ ಚಲಾಯಿಸಿದರೂ ಶೇ 10ರಷ್ಟು ಮಾತ್ರ ಬ್ಯಾಟರಿ ಶಕ್ತಿ ಬಳಕೆಯಾಗಿರುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ನಮ್ಮ ಕಂಪನಿಯು ವಿದ್ಯಾನಗರ, ದೇಶಪಾಂಡೆ ನಗರ, ಗೋಕುಲ ರಸ್ತೆ ಮತ್ತು ಬೈರಿದೇವರಕೊಪ್ಪದಲ್ಲಿ ಬ್ಯಾಟರಿಗಳನ್ನು ರಿಚಾರ್ಜ್ ಮಾಡಲು ಎಥರ್ ಗ್ರಿಡ್ ಪಾಯಿಂಟ್‌ಗಳನ್ನು ಸ್ಥಾಪಿಸಿದೆ. ನಗರದಲ್ಲಿ ಇನ್ನೂ 8ರಿಂದ10 ಕಡೆ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ 45 ನಿಮಿಷದಲ್ಲಿ ಶೇ 80ರಷ್ಟು ಜಾರ್ಚ್ ಮಾಡಬಹುದು. ಮುಂಬರುವ ದಿನಗಳಲ್ಲಿ ಇನ್ನೂ ಕಡಿಮೆ ಅವಧಿಯಲ್ಲಿ ಬ್ಯಾಟರಿ ಚಾರ್ಜ್ ಮಾಡುವ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುವುದು. ವಸತಿ ಸಮಚ್ಛಯದಲ್ಲಿಯೂ ಚಾರ್ಜಿಂಗ್ ಕೇಂದ್ರ ಹೊಂದಲು ಗ್ರಾಹಕರಿಗೆಕಂಪನಿ ನೆರವಾಗಲಿದೆ’ ಎಂದು ತಿಳಿಸಿದರು.

ಫೇಮ್ 2 ನೀತಿ ಜಾರಿಯ ಬಳಿಕ ಅಥೇರ್ 450X ಬೆಲೆ ₹1,44,500 ಹಾಗೂ 450+ ಬೆಲೆ ₹1,24,490 ಇದೆ ಎಂದು ವಿವರಿಸಿದರು. ಬೆಲ್ಲದ ಗ್ರೂಪ್‌ನ ನಿರ್ದೇಶಕ ಅಗಸ್ತ್ಯ ಬೆಲ್ಲದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.