ಹುಬ್ಬಳ್ಳಿ: 1957ರ ಸೆಪ್ಟೆಂಬರ್ 6ರಂದು ರಾಜ್ಯದ ಮೊದಲ ವೈದ್ಯಕೀಯ ಮಹಾವಿದ್ಯಾಲಯವಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ (ಕೆಎಂಸಿ), 1960–70ರ ವೇಳೆಗೆ ದೇಶದಲ್ಲೇ ಉತ್ತಮ ವೈದ್ಯಕೀಯ ಮಹಾವಿದ್ಯಾಲಯವಾಗಿ ರೂಪುಗೊಂಡಿತು. ಕೆಎಂಸಿ 1996ರಲ್ಲಿ ಕಿಮ್ಸ್ (ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ಆಗಿ ಪರಿವರ್ತನೆಗೊಂಡಿತು. ಇದೇ ವರ್ಷ ಕಳೆದ ಸೆಪ್ಟೆಂಬರ್ 6ರಂದು ಮತ್ತೆ ಕೆಎಂಸಿಆರ್ಐ (ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ) ಆಗಿ ಮರುನಾಮಕರಣಗೊಂಡಿತು. ಮೂರನೇ ಬಾರಿ ಹೆಸರು ಬದಲಾಯಿತು. ಆದರೆ, ಇದಕ್ಕೆ ತಕ್ಕಂತೆ ಗುಣಮಟ್ಟದ ಸೇವೆಗಳ ಸವಾಲು ಕೆಎಂಸಿಆರ್ಐ ಮುಂದಿದೆ.

ಕೆಎಂಸಿಎಂಆರ್ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ ಅವರ ಪ್ರಕಾರ, ಕಿಮ್ಸ್ ಹೆಸರನ್ನು ಕೆಎಂಸಿಎಂಆರ್ಐ ಎಂದು ಬದಲಾವಣೆ ಮಾಡಿದ್ದರಿಂದ ಹಲವು ಪ್ರಯೋಜನ ಆಗಲಿವೆ. ಮುಖ್ಯವಾಗಿ ಸಂಶೋಧನೆಗೆ ಮತ್ತು ಹೊಸ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ನೆರವಾಗಲಿದೆ. ವಿದೇಶದಿಂದ ವೈದ್ಯಕೀಯ ಯಂತ್ರೋಪಕರಣ ತರಿಸಿಕೊಂಡಲ್ಲಿ ತೆರಿಗೆ ವಿನಾಯಿತಿ ದೊರಕಲಿದೆ.

ಈಗಾಗಲೇ ಉತ್ತರ ಕರ್ನಾಟಕದ ಕಾಮಧೇನು, ಕಲ್ಪವೃಕ್ಷ, ಸಂಜೀವಿನಿ ಎಂದೆಲ್ಲ ಕರೆಯಲ್ಪಡುವ ಕೆಎಂಸಿಆರ್ಐ ನಿತ್ಯ ಸಾವಿರಾರು ರೋಗಿಗಳು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ವೈದ್ಯಕಿಯ ಸೇವೆ ಪಡೆಯುತ್ತಿದ್ದಾರೆ. 2010ರಲ್ಲಿ ಕೆಎಂಸಿ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ₹100 ಕೋಟಿ ಅನುದಾನ ಬಿಡುಗಡೆ ಮಾಡಿದಾಗ ಸಾಕಷ್ಟು ಅಭಿವೃದ್ಧಿ ಕೈಗೊಳ್ಳಲಾಯಿತು. 500 ಹಾಸಿಗೆಯನ್ನು 2000ಕ್ಕೆ ಏರಿಸಲಾಯಿತು.

ಎಂಬಿಬಿಎಸ್ ಶಿಕ್ಷಣಕ್ಕೆ ಇದ್ದ 100 ಸೀಟ್ಗಳ ಪ್ರವೇಶಾವಕಾಶವನ್ನು 250ಕ್ಕೆ ಏರಿಸಲಾಯಿತು. ಎಂಡಿ ಪ್ರವೇಶವನ್ನು 150ರಿಂದ 300ಕ್ಕೆ ಏರಿಸಲಾಯಿತು. ಕ್ಯಾತಿಟೆರೈಸೇಶನ್ ಪ್ರಯೋಗಾಲಯ, ನರವಿಜ್ಞಾನ, ಮೂತ್ರಪಿಂಡಶಾಸ್ತ್ರ, ತಾಯಿ–ಮಗುವಿನ ವಿಭಾಗ, ಅಪಘಾತ ತುರ್ತು ಚಿಕಿತ್ಸಾ ವಿಭಾಗ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೈಟೆಕ್ ಆಪರೇಷನ್ ಥಿಯೇಟರ್, ಸಿಟಿ ಮತ್ತು ಎಂಆರ್ಐ ಯಂತ್ರಗಳ ಅಳವಡಿಕೆಯಲ್ಲದೆ ಸಭಾಂಗಣದ ನವೀಕರಣ, ವಸತಿ ನಿಲಯಗಳು, ಪ್ರತ್ಯೇಕ ಗ್ರಂಥಾಲಯ, ರಸ್ತೆ, ಕ್ರೀಡಾಂಗಣ, ಒಳಾಂಗಣ ಜತೆಗೆ ಉದ್ಯಾನ, ಶವಾಗಾರವನ್ನು ಅಭಿವೃದ್ಧಿಪಡಿಸಲಾಯಿತು.

ಇಷ್ಟೇ ಅಲ್ಲದೆ ನಂತರದ ದಿನಗಳಲ್ಲಿ ಸುಸಜ್ಜಿತ ರಕ್ತ ನಿಧಿ (ಬ್ಲಡ್ ಬ್ಯಾಂಕ್) ಆರಂಭಿಸಲಾಗಿದೆ. ಪ್ಲಾಸ್ಟಿಕ್ ಸರ್ಜರಿ ವಿಭಾಗದ ಜತೆ ರೋಟರಿ ಕ್ಲಬ್ ಮಿಡ್ಟೌನ್ ಸಂಯೋಗದಲ್ಲಿ ’ಜೀವಾಮೃತ‘ ತಾಯಿ ಎದೆ ಹಾಲು ಕೇಂದ್ರವನ್ನೂ ಆರಂಭಿಸಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲೇ ಸುಸಜ್ಜಿತ ವಿಕಿರಣ ಯಂತ್ರವನ್ನೊಳಗೊಂಡ ಕ್ಯಾನ್ಸರ್ ಚಿಕಿತ್ಸಾ ವಿಭಾಗ, ವಿಕಿರಣ ಶಾಸ್ತ್ರ ವಿಭಾಗವೂ ಕೂಡ ಬಡ ರೋಗಿಗಳ ಪಾಲಿಗೆ ವರದಾನವೆನಿಸಿದೆ. ನೇತ್ರ ವಿಭಾಗವೂ ಇದೆ. ಇದಲ್ಲದೆ ಕುಷ್ಠರೋಗ ವಿಭಾಗ, ಕ್ಷಯರೋಗ ವಿಭಾಗವೂ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ.

ಇಷ್ಟೆಲ್ಲ ಸೌಲಭ್ಯ ಇದ್ದರೂ ರೋಗಿಗಳ ದಟ್ಟಣೆಯನ್ನು ನಿರ್ವಹಿಸುವುದು ಮಾತ್ರ ಕೆಎಂಸಿಆರ್ಐಗೆ ದೊಡ್ಡ ಸವಾಲಾಗಿದೆ. ರೋಗಿಗಳು, ಅವರ ಜತೆ ಬರುವ ಸಂಬಂಧಿಕರಿಂದ ಆಸ್ಪತ್ರೆ ಆವರಣ ಸದಾ ಗಿಜುಗುಡುತ್ತಿರುತ್ತದೆ. ಸಂಖ್ಯೆಗೆ ಅನುಗುಣವಾಗಿ ಆಸನ ವ್ಯವಸ್ಥೆ ಇಲ್ಲದೆ ಜನರು ಕಂಡಕಂಡಲ್ಲಿ ತಿಂದುಂಡು ಮಲಗುವುದು ಇಲ್ಲಿನ ಸಾಮಾನ್ಯ ಚಿತ್ರಣವಾಗಿದೆ. ಹೊರರೋಗಿಗಳ ವಿಭಾಗವಂತೂ ಸದಾ ಗದ್ದಲದಲ್ಲೇ ಮುಳುಗಿರುತ್ತದೆ. ಹೆಚ್ಚು ವೈದ್ಯರನ್ನು ಅವರ ಖಾಸಗಿ ಕ್ಲಿನಿಕ್ನಲ್ಲಿ ಕಾಣಬೇಕಿದೆ. ಆಸ್ಪತ್ರೆಯ ನಿಗದಿತ ಸಮಯದಲ್ಲಾದರೂ ತಜ್ಞವೈದ್ಯರು ಲಭ್ಯರಿದ್ದು, ಸೇವೆ ನೀಡಿದರೆ ತುಂಬಾ ಅನುಕೂಲವಾಗುತ್ತದೆ ಎಂದು ರೋಗಿಗಳ ಸಂಬಂಧಿಕರು ತಿಳಿಸಿದರು.

ಮರುನಾಮಕರಣ: ಪ್ರಯೋಜನ ಹಲವು

ರಾಜ್ಯದಲ್ಲಿ ಸರ್ಕಾರಿ ವೈದ್ಯಕೀಯ ಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಕೆಎಂಸಿಆರ್ಐಯಲ್ಲಿ ಕೃತಕ ಗರ್ಭಧಾರಣೆ ಕೇಂದ್ರ (ಐವಿಎಫ್) ಸ್ಥಾಪನೆಗೆ ರಾಜ್ಯ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಈ ಕೇಂದ್ರ ಸ್ಥಾಪಿಸಲು ಹಲವು ಜನ ದಾನಿಗಳು ಮುಂದೆ ಬಂದಿದ್ದು ಕಲಬುರಗಿಯ ‘ಮಾನವೀಯ ಕಲ್ಪ’ ಎನ್ಜಿಒ ಸುಮಾರು ₹ 90 ಲಕ್ಷ ಹಣ ನೀಡಿದೆ. ಖಾಸಗಿಯಾಗಿ ಐವಿಎಫ್ ಮೂಲಕ ಮಗು ಪಡೆಯಲು ₹3 ಲಕ್ಷಕ್ಕೂ ಅಧಿಕ ಖರ್ಚುಬರಲಿದೆ. ಕೆಎಂಸಿಆರ್ಐನಲ್ಲಿ ಕಡಿಮೆ ಖರ್ಚು ತಗುಲುತ್ತದೆ. ಆಸ್ಪತ್ರೆಯಲ್ಲಿ ಅಳವಡಿಸಲಾದ ಸುಸಜ್ಜಿತ ಎಂಆರ್ಐ ಸ್ಕ್ಯಾನ್ನಲ್ಲಿ ಪ್ರತಿದಿನ 30ಕ್ಕೂ ಹೆಚ್ಚು ಜನ ರೋಗಿಗಳ ತಪಾಸಣೆ ಮಾಡಲಾಗುತ್ತಿದೆ. ಬಿಪಿಎಲ್ ಕಾರ್ಡ್ದಾರರು ಕಡಿಮೆ ಹಣದಲ್ಲಿ ಸೇವೆ ಪಡೆಯುತ್ತಿದ್ದಾರೆ. ಕ್ಯಾನ್ಸರ್ ಚಿಕಿತ್ಸಾ ವಿಭಾಗವು ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾಗಲಿದೆ. ಈಗಿರುವ ಕ್ಯಾನ್ಸರ್ ಚಿಕಿತ್ಸಾ ವಿಭಾಗವನ್ನು ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನಾಗಿಸುವುದರ ಜತೆಗೆ ಪಿಇಟಿ ಸ್ಕ್ಯಾನ್ ಯಂತ್ರದ ಬೇಡಿಕೆಯನ್ನು ಕೆಎಂಸಿಆರ್ಐ ನಿರ್ದೇಶಕರು ಸರ್ಕಾರದ ಮುಂದಿಟ್ಟಿದ್ದಾರೆ. ರೊಬೊಟಿಕ್ ಸರ್ಜರಿ ಇಂದಿರಾಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ನೆಫ್ರೊ ಯುರಾಲಜಿ ಸೌಲಭ್ಯ ಕಲ್ಪಿಸುವುದು ಕೂಡ ಬೇಡಿಕೆ ಪಟ್ಟಿಯಲ್ಲಿದೆ.

ಮಾರ್ಗಸೂಚಿ ಬೇಕು

ವಿವಿಧ ಜಿಲ್ಲೆಗಳಿಂದ ಬರುವ ರೋಗಿಗಳು ಕೆಎಂಸಿಆರ್ಐಗೆ ಬರಲು ಪರದಾಡುತ್ತಾರೆ. ಅವರಿಗಾಗಿ ನಗರದ ವಿವಿಧೆಡೆ ಮಾರ್ಗಸೂಚಿ ಫಲಕ ಅಳವಡಿಸಬೇಕು. ಕೆಎಂಸಿಆರ್ಐಗೆ ಬಂದ ಮೇಲೆ ಅದು ಒಂದು ರೀತಿ ಚಕ್ರವ್ಯೂಹದಂತೆ. ಯಾವ್ಯಾವ ವಿಭಾಗ ಎಲ್ಲೆಲ್ಲಿ ಇದೆಯೆಂದು ಗೊತ್ತಾಗಲ್ಲ. ಇಂಥ ದೀರ್ಘಕಾಲದ ಸಮಸ್ಯೆಗಳನ್ನು ನಿವಾರಿಸಿ ರೋಗಿಗಳು ಮತ್ತು ಅವರ ಅಟೆಂಡರ್ಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಶಿಶು ತೀವ್ರ ನಿಗಾ ಘಟಕದಲ್ಲಿ(ಎನ್ಐಸಿಯು) ಬೆಡ್ ಸಂಖ್ಯೆ ಹೆಚ್ಚಿಸಬೇಕು.

-ಮಹೇಂದ್ರ ಸಿಂಘಿ ಅಧ್ಯಕ್ಷರು ಮಹಾವೀರ ಲಿಂಬ್ ಸೆಂಟರ್

ಕೆಎಂಸಿಆರ್ಐ ಜನಸ್ನೇಹಿ ಆಗಲಿ

ಕೆಎಂಸಿಆರ್ಐ ಇನ್ನಷ್ಟು ಜನಸ್ನೇಹಿ ಆಗಬೇಕು. ಮುಖ್ಯವಾಗಿ ಹೊರರೋಗಿಗಳ ವಿಭಾಗದಲ್ಲಿ ದಟ್ಟಣೆ ಸಮಸ್ಯೆ ಸರಿಪಡಿಸಲು ಸುವ್ಯವಸ್ಥೆ ಕಲ್ಪಿಸಬೇಕು. ಹೊರರೋಗಿಗಳ ಜೊತೆ ಬರುವವರಿಗೆ ಕೂರಲು ಪಾದರಕ್ಷೆಗಳನ್ನು ಬಿಡಲು ವ್ಯವಸ್ಥಿತ ಕ್ರಮ ಆಗಬೇಕು. ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸಮರ್ಪಕ ವ್ಯವಸ್ಥೆ ಜಾರಿಯಾಗಬೇಕು. ಪೂರ್ಣಪ್ರಮಾಣದ ಔಷಧ ಪೂರೈಕೆಗೆ ಕ್ರಮಕೈಗೊಳ್ಳಬೇಕು. ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಅನಗತ್ಯ ಅಲೆದಾಟ ತಪ್ಪಿಸಬೇಕು.

-ಶಶಿಶೇಖರ ವಿ. ಡಂಗನವರ ಸಾಮಾಜಿಕ ಕಾರ್ಯಕರ್ತ

ಸಕಲ ಸಮಸ್ಯೆಗೆ ಪರಿಹಾರ

ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಎದುರು ಸಾಕಷ್ಟು ಸವಾಲುಗಳಿವೆ. ಅವುಗಳನ್ನು ಸಮರ್ಥವಾಗಿ ನಿರ್ವಹಿಸಿ ಕೆಎಂಸಿಆರ್ಐಅನ್ನು ಉತ್ತರ ಕರ್ನಾಟಕದ ಸಂಜೀವಿನಿಯಾಗಿಸಿ ರಾಷ್ಟ್ರಮಟ್ಟದಲ್ಲಿ ಮತ್ತೆ ಮುಂಚೂಣಿಯಲ್ಲಿ ತರುವ ಪ್ರಯತ್ನ ನಮ್ಮದು. 1960–70ರ ದಶಕದ ಗತವೈಭವ ಮರುಳಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಹೊರರೋಗಿಗಳ ವಿಭಾಗದಲ್ಲಿ ಜನದಟ್ಟಣೆ ಸಮಸ್ಯೆ ನೀಗಿಸಲು ವಿಶೇಷ ನೋಂದಣಿ ಕೌಂಟರ್ ತೆರೆಯುತ್ತೇವೆ. ಎಲ್ಲಾ ಸಮಸ್ಯೆಗೆ ಪರಿಹಾರ ಸಿಗಲಿದೆ.

-ಡಾ.ಎಸ್.ಎಫ್.ಕಮ್ಮಾರ ನಿರ್ದೇಶಕ ಕೆಎಂಸಿಆರ್ಐ

ಹೆಜ್ಜೆ ಗುರುತು...

ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದ (KMC) ಸ್ಥಾಪನೆಯ ಶಿಲಾನ್ಯಾಸವನ್ನು ವಿಶಾಲ ಮೈಸೂರಿನ ಮಾಜಿ ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪನವರು 1957ರ ಮೇ 19ರಂದು ನೆರವೇರಿಸಿದ್ದರು. ಅಂದಿನ ಆರೋಗ್ಯ ಸಚಿವ ಆರ್.ಎಂ.ಪಾಟೀಲ ಮುಖ್ಯ ಅತಿಥಿಯಾಗಿದ್ದರು. ನಾಲ್ಕು ತಿಂಗಳಲ್ಲಿ (06–10–1957) ಕೆಎಂಸಿ ಕಾರ್ಯಾರಂಭಗೊಂಡಿತು. ಬಿ.ಡಿ.ಜತ್ತಿ ಎಸ್.ನಿಜಲಿಂಗಪ್ಪ ಡಿ.ಪಿ.ಕರ್ಮಾಕರ್ ಡಾ.ಡಿ.ಸಿ.ಪಾವಟೆ ಆರ್.ಎಂ.ಪಾಟೀಲ ಪಾಟೀಲ ಪುಟ್ಟಪ್ಪ ಈ ಮಹಾವಿದ್ಯಾಲಯದ ಸಂಸ್ಥಾಪಕರು. ಡಾ.ಚಂದ್ರಶೇಖರ ಶೆಟ್ಟಿ ಅವರು ಮೊದಲ ರೆಡಿಯೊಲಾಜಿಸ್ಟ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.