ಹುಬ್ಬಳ್ಳಿ: ‘ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸಿದ್ಧಪಡಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಲನಚಿತ್ರ ನವೆಂಬರ್ 22ರಂದು ರಾಜ್ಯದಾದ್ಯಂತ ಮರು ಬಿಡುಗಡೆಯಾಗಲಿದೆ’ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಸುರೇಶ ಗೋಕಾಕ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಒತ್ತಾಯದ ಮೇರೆಗೆ ಚಿತ್ರ ಮತ್ತೊಮ್ಮೆ ಬಿಡುಗಡೆಯಾಗಲಿದೆ. ರಾಯಣ್ಣನ ಸಾಹಸ ಹಾಗೂ ದೇಶಪ್ರೇಮವನ್ನು ಜನತೆಗೆ ತಿಳಿಸಬೇಕು ಎನ್ನುವುದು ಇದರ ಉದ್ದೇಶ’ ಎಂದರು.

ಸಿನಿಮಾದ ಹಂಚಿಕೆದಾರ ಕೆ. ಬಸವರಾಜ ಮಾತನಾಡಿ, ‘ರಾಜ್ಯದಾದ್ಯಂತ 120 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಅವುಗಳಲ್ಲಿ ಉತ್ತರ ಕರ್ನಾಟಕ ಭಾಗದ 38 ಚಿತ್ರಮಂದಿರಗಳು ಸೇರಿವೆ. ಶಾಲಾ ವಿದ್ಯಾರ್ಥಿಗಳು ಗುರುತಿನ ಪತ್ರ ತಂದು ಶೇ 50ರಷ್ಟು ರಿಯಾಯಿತಿಯೊಂದಿಗೆ ಟಿಕೆಟ್ ಪಡೆದು, ಚಿತ್ರ ವೀಕ್ಷಿಸಬಹುದು’ ಎಂದು ತಿಳಿಸಿದರು.

ಕಿರಣ ಉಪ್ಪಾರ, ದುಂಡಪ್ಪ ಶೆಟ್ಟರ್, ವಿನಾಯಕ ಕೊಟ್ಟೂರುಶೆಟ್ಟರ್, ಶಿವಪ್ರಸಾದ ಹಾದಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.