ಹುಬ್ಬಳ್ಳಿಯ ಚರಂಡಿಗಳಲ್ಲಿ ತುಂಬಿದ ಹೂಳನ್ನು ನಿಯಮಿತವಾಗಿ ತೆರವುಗೊಳಿಸದ ಕಾರಣ ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿ ಮಾರ್ಪಟ್ಟಿವೆ
ಹುಬ್ಬಳ್ಳಿಯಲ್ಲಿ ಹಲವು ವರ್ಷಗಳಿಂದ ಅಪೂರ್ಣ ಕಾಮಗಾರಿಗಳು ರಾಜಾಜಿಸುತ್ತಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾಗಿವೆ. ಜಗದೀಶ ನಗರದಲ್ಲಿ ಅಪೂರ್ಣ ರಸ್ತೆ ಕಾಮಗಾರಿಯ ನೋಟ ಇದು
ಹೆಚ್ಚಿದ ಅನಾರೋಗ್ಯ ಸಮಸ್ಯೆ
ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲೂ ಸೊಳ್ಳೆಗಳ ಕಡಿತದ ಸಮಸ್ಯೆ ಇದೆ. ಉದ್ಯಾನ ಹಾಗೂ ಹುಲ್ಲುಹಾಸು ಮಾಡಿಕೊಂಡಿರುವ ಆಸ್ಪತ್ರೆಗಳಲ್ಲಿ ಸೊಳ್ಳೆ ಹಾವಳಿ ನಿಯಂತ್ರಣಕ್ಕೆ ಬಾರದಾಗಿದೆ. ಸೊಳ್ಳೆ ಕಡಿತದಿಂದ ಕೊಳೆಗೇರಿಗಳ ಜನರು ಅನಾರೋಗ್ಯಕ್ಕೆ ಈಡಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಶಂಕಿತ ಡೆಂಗಿಜ್ವರದ ಸಮಸ್ಯೆಗೆ ಚಿಕಿತ್ಸೆ ಪಡೆಯುವುದಕ್ಕೆ ಕಿಮ್ಸ್‌ಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ’ಜ್ವರ ಹಾಗೂ ಇತರೆ ಸಮಸ್ಯೆಯಿಂದ ಬಳಲುತ್ತಿರುವ ಜನರು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಡೆಂಗಿ ಪತ್ತೆಯಾಗಿಲ್ಲ. ಆದರೆ, ನಿಯಮಿತವಾಗಿ ಪರೀಕ್ಷೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ‘ ಎಂದು ಕಿಮ್ಸ್ ನಿರ್ದೇಶಕ ಡಾ.ಎಫ್.ಎಸ್.ಕಮ್ಮಾರ ’ಪ್ರಜಾವಾಣಿ’ಗೆ ತಿಳಿಸಿದರು.
ಧಾರವಾಡದ ನೆಹರುನಗರದ, ಬಾವಿಕಟ್ಟಿ ಪ್ಲಾಟ್‌ನ ಕೊಳಕು ಸೇರುವ ಕೆಲಗೇರಿ ಕೆರೆ ಪ್ರದೇಶವು ಸೊಳ್ಳೆಗಳ ತಾಣವಾಗಿದೆ
ಸೊಳ್ಳೆ ಹಾವಳಿ ನಿಯಂತ್ರಿಸಲು ಪಾಲಿಕೆಯಿಂದ ಫಾಗಿಂಗ್ ಮಾಡಿಸುವ ವ್ಯವಸ್ಥೆ ಅನುಸರಿಸಲಾಗಿದೆ. ಇದಕ್ಕಾಗಿ ವಲಯವಾರು ಸಿಬ್ಬಂದಿಗೆ ಸೂಚಿಸಲಾಗಿದೆ
ಈಶ್ವರ ಉಳ್ಳಾಗಡ್ಡಿ,ಹು-ಧಾ ಪಾಲಿಕೆ ಆಯುಕ್ತ
ಎಲ್ಲಿಂದ ಸೊಳ್ಳೆಗಳು ಬರುತ್ತಿವೆ ಎನ್ನುವುದೇ ತಿಳಿಯುತ್ತಿಲ್ಲ. ಮನೆಯೊಳಗೆ ಮತ್ತು ಸುತ್ತಮುತ್ತ ಸ್ವಚ್ಛತೆ ಇದ್ದರೂ ಸೊಳ್ಳೆ ಬರುತ್ತಿವೆ