ಉಪ್ಪಿನಬೆಟಗೇರಿ: ಭಾವೈಕ್ಯೆತೆಯ ಸಂಕೇತವಾದ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಮರು ಬುಧವಾರ ಜುಲೈ 17 ರಂದು ಗ್ರಾಮದಲ್ಲಿ ಶೃದ್ಧಾ, ಭಕ್ತಿಯಿಂದ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

ರಾಜ್ಯದಾದ್ಯಂತ ಡೋಲಿಗಳನ್ನು ಕಾಗದ ಬಳಸಿ ತಯಾರಿಸುತ್ತಾರೆ. ಆದರೆ ಉಪ್ಪಿನಬೆಟಗೇರಿ ಗ್ರಾಮದ ಸಸಿ (ಅಲಿಮ್ ಫೀರಾ) ಮಸೂತಿಯಲ್ಲಿ ಸಸಿಗಳಿಂದ ತಯಾರಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬರಲಾಗುತ್ತಿದೆ. ರಾಜ್ಯ ಸೇರಿದಂತೆ ಹಲವೆಡೆ ಕಾಗದದಿಂದ ಡೋಲಿಗಳನ್ನು ತಯಾರಿಸಿ ಅವುಗಳನ್ನು ಮಸೂತಿಯಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡುವುದು ವಾಡಿಕೆ.

ಧಾರವಾಡ ಜಿಲ್ಲೆಯ ಉಪ್ಪಿನಬೆಟಗೇರಿ ಮತ್ತು ವಿಜಯಪುರದಲ್ಲಿ ಎರಡು ಸಸಿ ಡೋಲಿ ತಯಾರಿಸುತ್ತಾರೆ. ವಿಜಯಪುರದಲ್ಲಿ ಮಣ್ಣಿನ ಲೇಪನದಲ್ಲಿ ಬೀಜ ನೆಟ್ಟು ಸಸಿ ಬೆಳೆಸಿದರೆ. ಉಪ್ಪಿನಬೆಟಗೇರಿಯಲ್ಲಿ ಜೈದರ ಹತ್ತಿಯ ಮೇಲೆ ಸಸಿಗಳನ್ನು ಬೆಳೆಸುತ್ತಾರೆ. ಸಾಮಾನ್ಯವಾಗಿ ಮಣ್ಣಿನಲ್ಲಿ ಎಲ್ಲ ತರಹದ ಬೀಜಗಳು ಹುಟ್ಟುತ್ತವೆ. ಆದರೆ ಹತ್ತಿಯಲ್ಲಿ ಸಸಿ ಬೆಳೆಸುವುದು ಇಲ್ಲಿನ ವಿಶೇಷವಾಗಿದೆ.

ಗ್ರಾಮದ ಹಳೆ ಬಸ್ ನಿಲ್ಧಾಣದ ಹತ್ತಿರವಿರುವ ಸಸಿ (ಅಲಿಮ್ ಫೀರಾ) ಮಸೂತಿಯಲ್ಲಿ ಮೊಹರಂ ಚಂದ್ರದರ್ಶನ ನಂತರ ಸಸಿ ಡೋಲಿ ತಯಾರಿ ನಡೆಯುತ್ತದೆ. ಡೋಲಿ ತಯಾರಿಸುವಾಗ ಮಡಿ ಹುಡಿಯಿಂದ ಹತ್ತಿಯನ್ನು ಶುದ್ಧ ಮಾಡಿ ಬಿದಿರಿನಲ್ಲಿ ತಯಾರಿಸಿದ ಡೋಲಿಯ ಮೇಲೆ ಲೇಪನ ಮಾಡುತ್ತಾರೆ.

ರೈತರು ಬೆಳೆಯುವಂತಹ ದವಸ ಧಾನ್ಯಗಳು ಈ ಸಸಿಡೋಲಿಯನ್ನು ಅವಲಂಬಿಸಿವೆ ಎನ್ನುತ್ತಾರೆ ಹಿರಿಯರು. ಈ ಡೋಲಿಯಲ್ಲಿ ಸಸಿಗಳು ಯಾವ ರೀತಿಯಲ್ಲಿ ಬೆಳೆಯುತ್ತವೆಯೋ ಅದೇ ತೆರನಾಗಿ ನಮ್ಮ ಮುಂದಿನ ಬೆಳೆಗಳು ಬೆಳೆಯುತ್ತದೆ ಎಂಬುವುದು ಗ್ರಾಮಸ್ಥರ ನಂಬಿಕೆಯಾಗಿದೆ ಎಂದು ಮಸೂತಿಯ ಮುಜಾವರ ಬುಡ್ಡೇಸಾಬ ಜಾಲೇಗಾರ.

ಮೆರವಣಿಗೆ: ’ಅಲಾಹಿ ದೇವರು ಹೊಳೆಗೆ ಹೋಗುವ ದಿನ ಸಸಿ ಡೋಲಿಯನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ ನಂತರ ಮೂರನೇ ದಿನದಂದು ಹೊಳೆಯ ದಡದಲ್ಲಿ ಗುಂಡಿ ತೋಡಿ ಮುಚ್ಚಿ ಮಸೂತಿಗೆ ಬಂದು ಪ್ರಸಾದ ವಿತರಣೆ ಮಾಡುವ ಪದ್ದತಿ ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಿದೆ’ ಎನ್ನುತ್ತಾರೆ ಸಸಿ ಮಸೂತಿ ಓಣಿಯ ಗ್ರಾಮ ಪಂಚಾಯ್ತಿ ಸದಸ್ಯ ಬಸೀರಅಹ್ಮದ ಮಾಳಗಿಮನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.