ಹುಬ್ಬಳ್ಳಿ: ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ ಇನ್ನೂ ಆರು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಶಿಕ್ಷಣ ಇಲಾಖೆ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಇಲಾಖೆಯು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವವೂ ಸಲ್ಲಿಸಿದೆ.

ಜಿಲ್ಲೆಯಲ್ಲಿ ಪ್ರಸ್ತುತ ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಗ್ರಾಮೀಣ, ಹುಬ್ಬಳ್ಳಿ ಶಹರ, ಕಲಘಟಗಿ, ಕುಂದಗೋಳ ಹಾಗೂ ನವಲಗುಂದದಲ್ಲಿ ತಲಾ ಒಂದೊಂದು ಶಾಲೆ ಸೇರಿ ಒಟ್ಟು 8 ಕರ್ನಾಟಕ ಪಬ್ಲಿಕ್ ಶಾಲೆಗಳಿವೆ (ಕೆಪಿಎಸ್). ಇಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ ಬೋಧಿಸಲಾಗುತ್ತದೆ.

‘ಪೋಷಕರು ಹಾಗೂ ವಲಯ ವ್ಯಾಪ್ತಿಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಡಿಕೆಯಂತೆ 2024–25ನೇ ಸಾಲಿನಲ್ಲಿ ಜಿಲ್ಲೆಯ ಹುಬ್ಬಳ್ಳಿ ಶಹರ, ಹುಬ್ಬಳ್ಳಿ ಗ್ರಾಮೀಣ ಮತ್ತು ಕಲಘಟಗಿ ಭಾಗದಲ್ಲಿ ಹೆಚ್ಚುವರಿಯಾಗಿ ಇನ್ನೂ 6 ಇಂಗ್ಲಿಷ್ ಮಾಧ್ಯಮದ ಶಾಲೆಗಳ ಅವಶ್ಯವಿದ್ದು, ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎನ್ನುತ್ತಾರೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಎಸ್.ಎಸ್.ಕೆಳದಿಮಠ.

‘ಸರ್ಕಾರದ ಸೂಚನೆಯಂತೆ ಸಿಎಸ್ಆರ್ ಅನುದಾನದಡಿಯಲ್ಲಿ ಜಿಲ್ಲೆಯ ಕೆಲ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಮಕ್ಕಳಿಗೆ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡಲು ಅನುಕೂಲವಾಗುವಂತಹ 18 ಶಾಲೆಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಈ ಶಾಲೆಗಳನ್ನು ಪ್ರಸಕ್ತ ಸಾಲಿನಲ್ಲಿ ಕೆಪಿಎಸ್ ಮಾದರಿಯಲ್ಲಿ ಶಾಲೆಗಳಾಗಿ ಪರಿವರ್ತಿಸಬಹುದು ಎಂಬ ಪ್ರಸ್ತಾಪವನ್ನೂ ಸಲ್ಲಿಸಲಾಗಿದೆ‘ ಎನ್ನುತ್ತಾರೆ ಅವರು.

ಇಂಗ್ಲಿಷ್ ಮಾಧ್ಯಮಕ್ಕೆ ಬೇಡಿಕೆ:

‘ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಬೇಡಿಕೆ ಇದೆ. ಆದರೆ, ಕನ್ನಡ ಭಾಷೆಗೂ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಆದ್ದರಿಂದ ಒಂದೇ ಶಾಲೆಯ ಆವರಣದಲ್ಲಿ ಎರಡೂ ಮಾಧ್ಯಮದ ಶಾಲೆಗಳನ್ನು ಆರಂಭಿಸುವ ಚಿಂತನೆ ಸರ್ಕಾರಕ್ಕಿದೆ‘ ಎನ್ನುತ್ತಾರೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು.

‘ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯುವುದಕ್ಕಾಗಿ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯ ನೆರವಿನಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯುವ ಚಿಂತನೆಯೂ ಸರ್ಕಾರದ ಮುಂದಿದೆ’ ಎನ್ನುತ್ತಾರೆ ಅವರು.

‘ಜಿಲ್ಲೆಯಲ್ಲಿ ಎರಡೂ ಮಾಧ್ಯಮದಲ್ಲಿ ಬೋಧನೆ ಮಾಡುವಂತಹ 65 ಸರ್ಕಾರಿ ಶಾಲೆಗಳಲ್ಲಿ ಹಾಗೂ ಪ್ರಸಕ್ತ ಸಾಲಿನಲ್ಲಿ ಪ್ರಸ್ತಾವ ಸಲ್ಲಿಸಿರುವ ಆರು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿಯೇ ಬೋಧನೆ ಮಾಡುವಂತಹ ವಿಷಯ ಪರಿಣತ ಇಂಗ್ಲಿಷ್ ಭಾಷಾ ಶಿಕ್ಷಕರ ಅಗತ್ಯವಿದೆ‘ ಎನ್ನುತ್ತಾರೆ ಅವರು.

ಇಂಗ್ಲಿಷ್ ವಿಷಯ ಪರಿಣತ ಶಿಕ್ಷಕರ ಅವಶ್ಯ:

‘ಇಂಗ್ಲಿಷ್ ಮಾಧ್ಯಮದ ಬಹುತೇಕ ಪಠ್ಯ ವಿಷಯಗಳು ಎನ್ಸಿಇಆರ್ಟಿ ಶಾಲಾ ಪಠ್ಯಕ್ರಮದಲ್ಲಿ ಇರುತ್ತವೆ. ಇದಕ್ಕೆ ಪೂರಕವಾಗಿ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಲಾಗಿದೆ. ಈ ತರಗತಿಯ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿ ಪಠ್ಯವಿಷಯಗಳ ಅರ್ಥವಾಗುವಂತೆ ಬೋಧನೆ ಮಾಡಲು ಇಂಗ್ಲಿಷ್ ವಿಷಯದಲ್ಲಿಯೇ ಪರಿಣತ ಹೊಂದಿದ ಇಂಗ್ಲಿಷ್ ಭಾಷಾ ಶಿಕ್ಷಕರ ಅಗತ್ಯವಿದೆ‘ ಎನ್ನುತ್ತಾರೆ ಅವರು.

‘ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡುವ ಪ್ರತಿ ಶಾಲೆಗೆ 5 ಜನ ಇಂಗ್ಲಿಷ್ ಭಾಷಾ ಶಿಕ್ಷಕರು ಇರಬೇಕು ಎಂಬ ನಿಯಮವಿದೆ. ಆದರೆ, ನಮಲ್ಲಿ ಇದರ ಕೊರತೆ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ನೇಮಕವಾದಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು.

ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚಿದ ಬೇಡಿಕೆ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಶಿಕ್ಷಕರ ನೇಮಕಕ್ಕೆ ಮನವಿ ನಗರ ಪ್ರದೇಶದಲ್ಲಿ ಕೆಪಿಎಸ್ಗೆ ಬೇಡಿಕೆ

ಜಿಲ್ಲೆಯಲ್ಲಿ ಇಂಗ್ಲಿಷ್ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಭಾಷಾ ಪರಿಣತ ಶಿಕ್ಷಕರ ಅಗತ್ಯವಿದೆ. ಇವರ ನೇಮಕಕ್ಕೆ ಮನವಿ ಮಾಡಲಾಗಿದೆ.

–ಎಸ್.ಎಸ್.ಕೆಳದಿಮಠ ಉಪನಿರ್ದೆಶಕ ಶಾಲಾ ಶಿಕ್ಷಣ ಇಲಾಖೆ

2024–25ನೇ ಸಾಲಿನ ಇಂಗ್ಲಿಷ್ ಮಾಧ್ಯಮ ಶಾಲೆಗೆ ಪ್ರಸ್ತಾವ ತಾಲ್ಲೂಕು;ಶಾಲೆಯ ಹೆಸರುಹುಬ್ಬಳ್ಳಿ ಶಹರ;ಸ.ಹಿ.ಪ್ರಾ.ಶಾಲೆ ಮಂಜುನಾಥ ನಗರ ಸ.ಹಿ.ಪ್ರಾ.ಶಾಲೆ ಬಸವೇಶ್ವರ ನಗರ ಸ.ಹಿ.ಪ್ರಾ.ಶಾಲೆ ನಂ-07 ಬೀರಬಂದ ಸ.ಹಿ.ಮಾ.ಪ್ರಾ.ಶಾಲೆ ಬೇಂಗೆರಿ.ಹುಬ್ಬಳ್ಳಿ ಗ್ರಾಮೀಣ;ಸ.ಹಿ.ಹೆ.ಮ.ಪ್ರಾ.ಶಾಲೆ ಶರೇವಾಡಕಲಘಟಗಿ;ಸ.ಹಿ.ಮಾ.ಪ್ರಾ.ಶಾಲೆ ಉಗ್ಗಿನಕೇರಿ ಬಾಕ್ಸ್–2 ಜಿಲ್ಲೆಯ ಕೆಪಿಎಸ್ ಶಾಲೆಗಳು ತಾಲ್ಲೂಕು;ಶಾಲೆಯ ಹೆಸರು* ಧಾರವಾಡ ಗ್ರಾಮೀಣ;ಕೆಪಿಎಸ್– ಕರಡಿಗುಡ್ಡ* ಹುಬ್ಬಳ್ಳಿ ಗ್ರಾಮೀಣ; ಕೆಪಿಎಸ್– ನವನಗರ ರಾಯನಾಳ ಗೋಪನಕೊಪ್ಪ* ಹುಬ್ಬಳ್ಳಿ ಶಹರ; ಕೆಪಿಎಸ್– ಬಿಡನಾಳ* ಕಲಘಟಗಿ; ಕೆಪಿಎಸ್– ಬಮ್ಮಿಗಟ್ಟಿ* ಕುಂದಗೋಳ; ಕೆಪಿಎಸ್– ಗುಡಗೇರಿ* ನವಲಗುಂದ; ಜಿಎಚ್ಎಸ್– ಶಲವಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.