ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೇಗೂರು: ಸಿಕ್ಕಿಬಿದ್ದ ನಕಲಿ ವೈದ್ಯ

Published 11 ಜುಲೈ 2024, 15:29 IST
Last Updated 11 ಜುಲೈ 2024, 15:29 IST
ಅಕ್ಷರ ಗಾತ್ರ

ಧಾರವಾಡ: ಆರೋಗ್ಯಾಧಿಕಾರಿಗಳ ತಂಡವು ತಾಲ್ಲೂಕಿನ ತೇಗೂರಿನಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ಕ್ಲಿನಿಕ್‌ ನಡೆಸುತ್ತಿದ್ದ ನಕಲಿ ವೈದ್ಯನನ್ನು ಪತ್ತೆ ಹಚ್ಚಿದೆ.

ಜಿಲ್ಲಾಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ತನುಜಾ ಮತ್ತು ತಂಡದವರು ಕಾರ್ಯಾಚರಣೆ ನಡೆಸಿದ್ದಾರೆ. ನಕಲಿ ವೈದ್ಯ ಮಂ‌ಜುನಾಥ ಇಳಿಗೇರ ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳು ಅನಧಿಕೃತ ಕ್ಲಿನಿಕ್‌ಗೆ ಬೀಗ ಜಡಿದಿದ್ದಾರೆ. ಕ್ಲಿನಿಕ್‌ನಲ್ಲಿ ಅಲೋಪಥಿ ಔಷಧಗಳು (ಮಾತ್ರೆ, ಸಿರಪ್‌...) ಸಿಕ್ಕಿವೆ.

‘ಮಂ‌ಜುನಾಥ ಇಳಿಗೇರ ಅವರು ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ. ಅನಧಿಕೃತವಾಗಿ ಕಕ್ಲಿನಿಕ್‌ ನಡೆಸುತ್ತಿದ್ದರು. ಅವರ ವಿರುದ್ಧ ‌ಕೆಪಿಎಂಇ ಕಾಯ್ದೆಯಡಿ ಪ‍್ರಕರಣ ದಾಖಲಿಸಲಾಗಿದೆ’ ಎಂದು ಡಿಎಚ್‌ಒ ಶಶಿ ಪಾಟೀಲ ತಿಳಿಸಿದ್ದಾರೆ. .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT