ಗುಡಗೇರಿ: ಸಹಕಾರ ಸಂಘಗಳಿಗೆ ಬರುವವರು ಸೇವಾ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಸಂಘಗಳು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.

ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 71ನೇ ಸಹಕಾರ ಸಪ್ತಾಹದ ಅಂಗವಾಗಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಕೆ.ಸಿ.ಸಿ. ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ತಾಲ್ಲೂಕು ಎಲ್ಲ ಸಹಕಾರ ಸಂಘಗಳು ಮತ್ತು ಸಹಕಾರ ಇಲಾಖೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಹಕಾರ ಸಂಸ್ಥೆಗಳ ನಡುವೆ ಸಹಕಾರ ಬಲಪಡಿಸುವ ದಿನದ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

‘ಇಲ್ಲಿ ನಿಸ್ವಾರ್ಥವಾಗಿ ಸೇವೆ ಮಾಡಿದಾಗ ಮಾತ್ರ ಜನನಾಯಕನಾಗಲು ಸಾಧ್ಯ. ನಾನು ಸಹ 25 ವರ್ಷ ಸಹಕಾರ ಸಂಘದಲ್ಲಿ ಸೇವೆ ಮಾಡಿದ್ದೇನೆ. ಅದರ ಫಲವಾಗಿ ಇಂದು ಶಾಸಕನಾಗಿದ್ದೇನೆ’ ಎಂದು ಹೇಳಿದರು.

ಕೆಸಿಸಿ ಬ್ಯಾಂಕ್ ನಿರ್ದೇಶಕ ಉಮೇಶ ಹೆಬಸೂರ ಮಾತನಾಡಿ, ‘ಈ ಸಹಕಾರ ಸಂಘವು ಆರ್ಥಿಕವಾಗಿ ಹಿಂದುಳಿದಿದ್ದು, ಬಲಿಷ್ಠವಾಗಿ ಬೆಳೆಯಲು ನಾವೆಲ್ಲ ಸಹಕಾರ ನೀಡುತ್ತೇವೆ’ ಎಂದು ಹೇಳಿದರು.

ಅರವಿಂದ ಕಟಗಿ, ಶಂಕರ ಮುಗದ, ಶಂಕ್ರಪ್ಪ ರಾಯನಾಳ, ಸಂಘದ ಅಧ್ಯಕ್ಷ ಚನ್ನಪ್ಪ ಮಳಲಿ, ನಿಂಗನಗೌಡ ಮರಿಗೌಡ್ರ, ವೆಂಕನಗೌಡ ಹಿರೇಗೌಡ್ರ, ಬಸನಗೌಡ ಕರೆಹೊಳಲಪ್ಪನವರ, ದ್ರಾಕ್ಷಾಯಿಣಿ ಶಿರೂರ, ರಂಗನಗೌಡ ಹಿರೇಗೌಡ್ರ, ಸಂಜಯಗೌಡ ತಿಮ್ಮನಗೌಡ್ರ, ನಿರ್ಮಲಾ ಬೂದಿಹಾಳ, ಬಸವನಗೌಡ ಚಿಕ್ಕೋಡ್ರ, ದ್ಯಾವಪ್ಪ ಮಾಕಣ್ಣವರ, ಪೂರ್ವಾಚಾರ್ಯ ಸುತಾರ, ಕೆಂಚ್ಚುನಗೌಡ ರಂಗನಗೌಡ್ರ, ರೂಪಾ ಪಾಟೀಲ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಬಡ್ನಿ, ಪ್ರಕಾಶ ಮಳ್ಳೊಳ್ಳಿ, ಸವಿತಾ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.