ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾರ್ವೊಂದರ ಬಳಿ ಮಾರಕಾಸ್ತ್ರಗಳನ್ನು ಹಿಡಿದು ಸಂಚರಿಸುತ್ತಿದ್ದ ಆರು ಜನರನ್ನು ಕಸಬಾಪೇಟ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈಶ್ವರನಗರದ ವಿರೇಂದ್ರ ತಳಕಲ್, ಹೂಗಾರ ಪ್ಲಾಟ್ನ ಕುಮಾರ ಪೂಜಾರ, ಅಲ್ತಾಪ್ನಗರದ ಅಮೀರುದ್ದಿನ್ ಬಿಜಾಪುರ, ರಣದಮ್ಮ ಕಾಲೊನಿಯ ವಿನಾಯಕ ಜಿತೂರಿ, ನೇಕಾರನಗರದ ಅಂಕಿತ ಜಾಧವ, ಸುನೀಲ ಕಲಾಲ ಬಂಧಿತರು. ಕಸಬಾಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲ್ಯುಮಿನಿಯಂ ವಸ್ತುಗಳ ವಶ: ಇಲ್ಲಿನ ತಾಡಪತ್ರಿಗಲ್ಲಿ ಕ್ರಾಸ್ ಬಳಿ ಕಳವು ಮಾಡಿಕೊಂಡು ಹೋಗುತ್ತಿದ್ದ ಅಲ್ಯುಮಿನಿಯಂ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಬ್ಬರು ಆರೋಪಿಗಳು ಆಟೊದಲ್ಲಿ ಹಾಗೂ ಒಬ್ಬ ಬೈಕ್ನಲ್ಲಿ ಕಳವು ಮಾಡಿದ್ದ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಪೊಲೀಸರು ಅನುಮಾನಗೊಂಡು ಪರಿಶೀಲಿಸಿದಾಗ ಅವು ಕಳವು ಮಾಡಿದ್ದ ವಸ್ತುಗಳು ಎಂದು ಗೊತ್ತಾಗಿದೆ. ಅವುಗಳ ಮೌಲ್ಯ ₹1.80 ಲಕ್ಷ. ಆರೋಪಿಗಳು ಪರಾರಿಯಾಗಿದ್ದು, ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.