‘ಕ್ಷೀರಭಾಗ್ಯ ಮತ್ತೆ ಆರಂಭಿಸಲಿ’
‘ಒಕ್ಕೂಟ ವ್ಯಾಪ್ತಿಯ ವಿವಿಧ ಹಾಲು ಉತ್ಪಾದಕರ ಸಂಘಗಳಿಗೆ ಭೇಟಿ ನೀಡಿ ಹೆಚ್ಚು ಹಾಲು ಉತ್ಪಾದನೆಗೆ ಕ್ರಮ ವಹಿಸಲಾಗುತ್ತಿದೆ. ಆಸಕ್ತರಿಗೆ ಆಕಳು ಕೊಳ್ಳಲು ಶೇ 3ರ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸಲಾಗುತ್ತಿದೆ. ಒಂದು ಸಂಘದ ಸದಸ್ಯರಿಗೆ 15 ಹಸುಗಳನ್ನು ಖರೀದಿಸಲು ಅವಕಾಶವಿದೆ. ಹೈನುಗಾರಿಕೆ ಉತ್ತೇಜನಕ್ಕಾಗಿ ಸಬ್ಸಿಡಿಯಲ್ಲಿ ಮ್ಯಾಟ್ ಮೇವು ಕಟರ್ ಹಾಲು ಹಿಂಡುವ ಯಂತ್ರವನ್ನು ಒದಗಿಸುತ್ತಿದ್ದೇವೆ’ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ ಬಣವಿ ತಿಳಿಸಿದರು. ‘ಈ ಹಿಂದೆ ಕ್ಷೀರಭಾಗ್ಯ ಯೋಜನೆಯಡಿ ಹೆಚ್ಚು ಹಾಲು ಮಾರಾಟವಾಗುತ್ತಿತ್ತು. ಯೋಜನೆಯನ್ನು ಮತ್ತೆ ಆರಂಭಿಸಿದರೆ ಹೆಚ್ಚಿನ ಜನರು ಹೈನುಗಾರಿಕೆಯತ್ತ ಆಸಕ್ತಿ ಬೆಳೆಸಿಕೊಳ್ಳುತ್ತಾರೆ’ ಎಂದು ಅವರು ಅಭಿಪ್ರಾಯಪಟ್ಟರು.