ಧಾರವಾಡ: ಉತ್ತರ ಕರ್ನಾಟಕ ಲೇಖಕಿಯರ ಸಂಘವು 2021 ಹಾಗೂ 2022ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗೆ ಆರು ಲೇಖಕಿಯರನ್ನು ಆಯ್ಕೆ ಮಾಡಿದೆ.

ಸಾಹಿತ್ಯ ಸರಸ್ವತಿ ಪ್ರಶಸ್ತಿಗೆ ಜಯಾ ರಾಜಶೇಖರ್ (2021), ಶಾಂತಲಾ ಯಡ್ರಾವಿ (2022) ಹಾಗೂ ಶಾಂತಾದೇವಿ ಕಣವಿ ಕಥಾ ಪ್ರಶಸ್ತಿಗೆ ಬಾನು ಮುಷ್ತಾಕ್ (2021), ಮಧುರಾ ಕರ್ಣಂ (2022) ಅವರನ್ನು ಆಯ್ಕೆ ಮಾಡಲಾಗಿದೆ. ಲತಾ ರಾಜಶೇಖರ್ ಕಾವ್ಯ ಪ್ರಶಸ್ತಿಗೆ ಸವಿತಾ ನಾಗಭೂಷಣ್ (2021), ವಿನಯಾ ಒಕ್ಕುಂದ (2022) ಅವರನ್ನು ಆಯ್ಕೆ ಮಾಡಲಾಗಿದೆ.

ಸಾಹಿತ್ಯ ಸರಸ್ವತಿ ಹಾಗೂ ಕಥಾ ಪ್ರಶಸ್ತಿಗಳು ತಲಾ ₹5 ಸಾವಿರ ನಗದು ಹಾಗೂ ಕಾವ್ಯ ಪ್ರಶಸ್ತಿ ತಲಾ ₹10 ಸಾವಿರ, ಪ್ರಶಸ್ತಿ ಪತ್ರ ಒಳಗೊಂಡಿದೆ. ಆಗಸ್ಟ್ ಕೊನೆ ವಾರದಲ್ಲಿ ಜರುಗುವ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷೆ ರಾಜೇಶ್ವರಿ ಮಹೇಶ್ವರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.