ಗದಗ: ವರ್ಣಭೇದ ಪದ್ಧತಿ, ಮೇಲು ಕೀಳು ಎಂಬ ತಾರತಮ್ಯ, ಲಿಂಗಭೇದ ನೀತಿ ವಿರುದ್ಧ ಹೋರಾಡಿ ಸಮ ಸಮಾಜ ನಿರ್ಮಿಸಲು ಪ್ರಯತ್ನಿಸಿದವರು ವಿಶ್ವಗುರು ಬಸವಣ್ಣ ಎಂದು ಪ್ರಾಂಶುಪಾಲೆ ಸುಮಿತ್ರಾ ಹಿರೇಮಠ ಹೇಳಿದರು.

ನಗರದ ಡಾ. ಪಿಜಿಎ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಕನ್ನಡ ಉಪನ್ಯಾಸಕ ವಿ.ಎಂ.ಗುರುಮಠ ಮಾತನಾಡಿ, ವಚನ ಸಾಹಿತ್ಯವು ಅಮೂಲ್ಯ ವಿಚಾರಧಾರೆಗಳನ್ನು ಹೊಂದಿದ್ದು ಇಡೀ ವಿಶ್ವದ ಮನುಕುಲವೇ ಬೆರಗಾಗುವಂತಹ ಕಾರ್ಯ 12ನೇ ಶತಮಾನದಲ್ಲಿ ಭಕ್ತಿ ಭಂಡಾರ ಬಸವಣ್ಣ ಅವರಿಂದ ನಡೆಯಿತು ಎಂದು ಹೇಳಿದರು.

ಉಪನ್ಯಾಸಕ ಗಂಗಾಧರ ಹಿಡಿಕಿಮಠ ಮಾತನಾಡಿ, ವಚನ ಸಾಹಿತ್ಯ ಬೆಳೆಸುವುದರಲ್ಲಿ ಸಂಗೀತಗಾರರ ಪಾತ್ರ ಅಮೂಲ್ಯವಾಗಿದೆ ಎಂದು ಹೇಳಿದರು.

ಸಾಕ್ಷಿ ಅವರು ರಚಿಸಿರುವ ‘ಸೋಲಾದರೇನಂತೆ’ ಎಂಬ ಗ್ರಂಥ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು.

ಪ್ರಾಧ್ಯಾಪಕರಾದ ನಾರಾಯಣ ಹಿರೇಕೊಳಚಿ, ಲತಾ ವೃತ್ತಿಕೊಪ್ಪ, ಎಸ್.ಎಸ್.ಗಡ್ಡದಮಠ, ಕೊಡಗಾನೂರ ಹನುಮಂತ, ಉಪನ್ಯಾಸಕರಾದ ಎನ್.ಎಂ.ಶೇಕ್, ಮಹಾಲಕ್ಷ್ಮಿ ಹೆಗಡೆ, ಮೃತ್ಯುಂಜಯ ಮಠದ, ಶರಣಪ್ಪ ಕಲ್ಬುರ್ಗಿ, ವೈ.ಆರ್.ಮೂಲಿಮನಿ, ವಿ.ಎಂ.ಪಟ್ಟದಕಲ್ಲು ಇದ್ದರು.

ವಿದ್ಯಾರ್ಥಿಗಳಾದ ರಾಹುಲ್ ರಾಠೋಡ್, ಶ್ರುತಿ ಪವನ್, ವಿಜಯಲಕ್ಷ್ಮಿ ಹಿರೇಮಠ , ರಂಜಿತಾ ಬಡಿಗೇರ, ಕೃತಿ ಸುಲಾಕೆ, ಸಂಗೀತ ಡಿ ಎಂ., ಸುಮತಿ ಮುರುಗೋಡ್, ರಾಹುಲ್ ರಾಠೋಡ, ಅನಘಾ ಕುಲಕರ್ಣಿ, ಯಶೋದಾ ಮಾದರ ವಚನ ಗಾಯನ ಮಾಡಿದರು.

ಕೃತಿ ಸುಲಾಕೆ ಸ್ವಾಗತಿಸಿದರು. ರಂಜಿತಾ ಬಡಿಗೇರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.