ಗದಗ: ‘ತನಿಖಾ ಸಂಸ್ಥೆಗಳ ಮೂಲಕ ಬೆದರಿಕೆ ಹಾಕಿ, ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬರಬೇಕೆನ್ನುವ ಬಿಜೆಪಿಯ ಆಟ ಈ ಚುನಾವಣೆಯಲ್ಲಿ ನಡೆಯುವುದಿಲ್ಲ. ಜನರು ಸೇವೆಗೆ ತಲೆಬಾಗುತ್ತಾರೆಯೇ ಹೊರತು ಬೆದರಿಕೆಗೆ ಬಾಗುವುದಿಲ್ಲ‘ ಎಂದು ಮಾಜಿ ಕಾಂಗ್ರೆಸ್ ಶಾಸಕ ಡಿ.ಆರ್.ಪಾಟೀಲ ಹೇಳಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಎಚ್.ಕೆ.ಪಾಟೀಲ ಬೆಂಬಲಾರ್ಥ ವಾರ್ಡ್ ನಂ.20ರಲ್ಲಿರುವ ಶಾಬಾದಿಮಠ ಅವರ ಕಟ್ಟಡದ ಆವರಣದಲ್ಲಿ ಸೇರಿದ್ದ ಹಿತೈಷಿಗಳ ಜೊತೆಗಿನ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.

‘ಜನ ಒಮ್ಮೆ ಮೋಸ ಹೋಗುತ್ತಾರೆ. ಪ್ರತಿಸಲ ಅಲ್ಲ. ಜನತಂತ್ರ ವ್ಯವಸ್ಥೆ ಇದು. ಒಮ್ಮೆ ಅವರು ಸೆಟೆದು ನಿಂತರೆ ಯಾವ ಶಕ್ತಿಯೂ ಉಳಿಯುವುದಿಲ್ಲ. ಸಿಬಿಐ, ಇಡಿ ಹಾಗೂ ಐಟಿ ತನಿಖಾ ಸಂಸ್ಥೆಗಳು ಏನೂ ಮಾಡಲಾಗುವುದಿಲ್ಲ. ಇತಿಹಾಸ ನೋಡಿದರೆ ಗೊತ್ತಾಗುತ್ತದೆ. ಅಧಿಕಾರದಲ್ಲಿರುವ ಬಿಜೆಪಿ ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ತಾನು ನೀಡಿದ ಭರವಸೆಯನ್ನು ಇದುವರೆಗೂ ಈಡೇರಿಸಿಲ್ಲ. ಬದಲಾಗಿ ಸೌಹಾರ್ದದಿಂದ ಇದ್ದ ವಾತಾವರಣವನ್ನು ಬದಲಿಸಿ ಮನಸ್ಸು ಒಡೆಯುವ ಪ್ರಯತ್ನ ಮಾಡಿದೆ. ಇದು ಎಲ್ಲರ ಮನಸ್ಸನ್ನು ನೋಯಿಸಿದೆ. ಬಿಜೆಪಿ ಪಕ್ಷ ಏನೆಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ಆ ಪಕ್ಷದ ಸೋಲಿನ ಸರಣಿ ಕರ್ನಾಟಕದಿಂದಲೇ ಆಗಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಪಕ್ಷ ಜನರಿಗೆ ಸುಳ್ಳು ಭರವಸೆ ನೀಡುವುದಿಲ್ಲಾ ಬದಲಾಗಿ ಅವರ ಸೇವೆ ಮೂಲಕ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತದೆ. ಇದನ್ನು ಜನತೆ ಮನಗಂಡಿದ್ದಾರೆ‘ ಎಂದರು.

‘ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಸಹೋದರ ಎಚ್. ಕೆ. ಪಾಟೀಲರು ಇಡೀ ದೇಶದಲ್ಲಿ ಕೆಲವೇ ಪ್ರಾಮಾಣಿಕ, ಶುದ್ಧಹಸ್ತದ ನಾಯಕ. ಬರಲಿರುವ ಚುನಾವಣೆಯಲ್ಲಿ ಅವರಿಗೆ ಮತ ನೀಡಿ ಭಾರಿ ಮತಗಳಿಂದ ಆರಿಸಿ, ಕಳುಹಿಸಿದರೆ ನಿಮ್ಮ ಸೇವೆಯನ್ನು ನಾವಿಬ್ಬರೂ ಸಹೋದರರು ದೇವರ ಪೂಜೆ ಅಂತಾ ತಿಳಿದು ಸೇವೆ ಮಾಡುತ್ತೇವೆ‘ ಎಂದರು.

ಶಾಸಕ ಎಚ್. ಕೆ. ಪಾಟೀಲರು ಮಾತನಾಡಿ, ‘ಸೇವೆಯ ಮೂಲಕ ನಾವು ಜನರ ಮನಸ್ಸನ್ನು ಪರಿವರ್ತಿಸಬೇಕು. ಇಲ್ಲಿ ಇಷ್ಟು ಸಂಖ್ಯೆಯಲ್ಲಿ ಸೇರಿರುವ ಜನರನ್ನು ನೋಡಿದರೆ ನನಗೆ ಈ ವಾರ್ಡ್ನಲ್ಲಿ ಭಾರಿ ಮತಗಳ ಮುನ್ನಡೆ ದೊರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ‘ ಎಂದರು.

ಪ್ರಶಾಂತ ಶಾಬಾದಿಮಠ, ಪರಪ್ಪ ಕಮತರ, ನಗರಸಭೆ ಸದಸ್ಯೆ ಪರ್ವಿನಾಬಾನು ಅಬ್ದುಲಮುನಾಫ ಮುನ್ನಾ, ಪ್ರಭು ಬುರುಬುರೆ, ಆರೀಫ ಹುನಗುಂದ, ದಾವಲಸಾಬ ಈಟಿ ಇದ್ದರು. ನಾಗಪ್ಪ ಗುಗ್ಗರಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಪರಪ್ಪ ಕಮತರ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.