ಗದಗ: ‘ಮುಕ್ಕಣ್ಣೇಶ್ವರ ಸ್ವಾಮೀಜಿಯವರ 100ನೇ ಪುಣ್ಯಾರಾಧನೆ ಅಂಗವಾಗಿ ನ. 6ರಿಂದ 13ರವರೆಗೆ ಪ್ರವಚನ, ಧರ್ಮಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಮಠದ ಪೀಠಾಧಿಪತಿ ಶಂಕರಾನಂದ ಸ್ವಾಮೀಜಿ ತಿಳಿಸಿದರು.

‘ಕರಿಕಟ್ಟಿಯ ಕೀರ್ತನ ಕೇಸರಿ ಗುರುನಾಥ ಶಾಸ್ತ್ರಿಗಳಿಂದ ನ. 6ರಿಂದ 10ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ‘ಮುಕ್ಕಣ್ಣೇಶ್ವರ ಸ್ವಾಮಿಗಳ ಚರಿತಾಮೃತ’ ವಿಷಯ ಕುರಿತು ಮಠದಲ್ಲಿ ಆವರಣದಲ್ಲಿ ಪ್ರವಚನ ನಡೆಯಲಿದೆ. ಮುಕ್ಕಣ್ಣೇಶ್ವರ ಮಹಾ ಸ್ವಾಮೀಜಿಯವರ 100ನೇ ಪುಣ್ಯಾರಾಧನೆ ಅಂಗವಾಗಿ 8 ದಿನಗಳ ಕಾಲ ಮಹಾ ಅನ್ನಸಂತರ್ಪಣೆ ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನ. 6ರಂದು ಸಂಜೆ 6.30ಕ್ಕೆ ಪ್ರವಚನ ಕಾರ್ಯಕ್ರಮ ಹಾಗೂ ಹೈಮಾಸ್ಟ್ ದೀಪದ ಉದ್ಘಾಟನೆ ನಡೆಯಲಿದೆ. ಗದಗ-ಅಡ್ನೂರ-ರಾಜೂರ ದಾಸೋಹ ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ ಉದ್ಘಾಟಿಸುವರು. ಜಿ.ಜಿ. ಕುಲಕರ್ಣಿ ಅಧ್ಯಕ್ಷತೆ ವಹಿಸುವರು’ ಎಂದು ತಿಳಿಸಿದರು.

‘ನ.10ರಂದು ಸಂಜೆ 6.30ಕ್ಕೆ ಪ್ರವಚನದ ಸಮಾರೋಪ ನಡೆಯಲಿದ್ದು, ಗದಗ-ಬೆಟಗೇರಿಯ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಗದಗ ಶಿವಾನಂದ ಮಠದ ಮಾತೋಶ್ರೀ ಮುಕ್ತಾತಾಯಿ ಸಮ್ಮುಖ ವಹಿಸುವರು. ಜಿ.ಜಿ. ಕುಲಕರ್ಣಿ ಅಧ್ಯಕ್ಷತೆ ವಹಿಸುವರು’ ಎಂದು ತಿಳಿಸಿದರು.

‘ನ. 11ರಂದು ಸಂಜೆ 6.30ಕ್ಕೆ ನಡೆಯುವ ಧರ್ಮಸಭೆಯಲ್ಲಿ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನರಸಾಪುರದ ವೀರೇಶ್ವರ ಸ್ವಾಮೀಜಿ ಹಾಗೂ ಅಬ್ಬಿಗೇರಿ ಮಠದ ಬಸವರಾಜ ಸ್ವಾಮೀಜಿ ನೇತೃತ್ವ ವಹಿಸುವರು. ಕಿತ್ತಲಿ ಸಿದ್ರಾಮೇಶ್ವರ ಮಠದ ಮಂಜುನಾಥ ಸ್ವಾಮೀಜಿ, ವೆಂಕಟಾಪುರದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಂಕರಾನಂದ ಶಾಸ್ತ್ರಿಗಳು ಸಮ್ಮುಖ ವಹಿಸುವರು ಎಂದು ತಿಳಿಸಿದರು.

‘ನ.12ರಂದು ಬೆಳಿಗ್ಗೆ 10ಕ್ಕೆ ನಡೆಯುವ ಧರ್ಮಸಭೆಯಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸುವರು. ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಹರ್ಲಾಪುರದ ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ, ವೆಂಕಟಾಪುರದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ನರಗುಂದ ಶಾಸಕ ಸಿ.ಸಿ. ಪಾಟೀಲ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಆನೆಗೊಂದಿಯ ರಾಜವಂಶಸ್ಥ ರಾಮ ದೇವರಾಯಲು ಹಾಗೂ ಕೃಷ್ಣ ದೇವರಾಯಲು ಭಾಗವಹಿಸುವರು’ ಎಂದು ತಿಳಿಸಿದರು.

‘ಸಂಜೆ 6.30ರ ಧರ್ಮಸಭೆಯಲ್ಲಿ ಗದಗ ಶಿವಾನಂದ ಮಠದ ಸದಾಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಲ್ಲಸಮುದ್ರ ಓಂಕಾರೇಶ್ವರ ಮಠದ ಫಕ್ಕೀರೇಶ್ವರ ಸ್ವಾಮೀಜಿ, ದದೇಗಲ್ಲ ಸಿದ್ಧಾರೂಢ ಮಠದ ಆತ್ಮಾನಂದ ಭಾರತಿ ಸ್ವಾಮೀಜಿ ನೇತೃತ್ವ, ಮಲ್ಲಾಪುರದ ಮಾತೋಶ್ರೀ ಆನಂದಮಯಿ ತಾಯಿ ಸಮ್ಮುಖ ವಹಿಸುವರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಸಭೆ ಸದಸ್ಯ ಎಲ್.ಡಿ. ಚಂದಾವರಿ, ಆರ್.ಪಿ. ದೊಡ್ಡಮನಿ ಭಾಗವಹಿಸುವರು’ ಎಂದು ತಿಳಿಸಿದರು.

‘ನ.13ರಂದು ಬೆಳಿಗ್ಗೆ 10ಕ್ಕೆ ನಡೆಯುವ ಧರ್ಮ ಸಭೆಯಲ್ಲಿ ಹುಬ್ಬಳ್ಳಿ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ತಂಗಡಗಿಯ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ನೇತೃತ್ವ ವಹಿಸುವರು. ಆನೆಗೊಂದಿಯ ಬ್ರಹ್ಮಾನಂದ ಸ್ವಾಮೀಜಿ, ಬೆಳಹೋಡದ ಪರಿಪೂರ್ಣಾನಂದ ಸ್ವಾಮೀಜಿ, ಕಲ್ಲೂರಿನ ಶಿವರಾಮಾನಂದ ಸ್ವಾಮೀಜಿ, ಬಸನಕೊಪ್ಪದ ರಮಾನಂದ ಭಾರತಿ ಸ್ವಾಮೀಜಿ ಸಮ್ಮುಖವಹಿಸುವರು’ ಎಂದು ತಿಳಿಸಿದರು.

‘100ನೇ ಪುಣ್ಯಾರಾಧನೆ ಕಾರ್ಯಕ್ರಮದ ಅಂಗವಾಗಿ ಅದ್ಧೂರಿಯಾದ ಭಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಈ ಕಾರ್ಯಕ್ರಮಕ್ಕೆ ಬೆಟಗೇರಿ, ಹುಯಿಲಗೋಳ, ಹಾತಲಗೇರಿ, ನಾಗರಾಳ ಗ್ರಾಮದ ಡೊಳ್ಳಿನ ಮೇಳ, ಕಲ್ಯಾಣ ಕರ್ನಾಟಕದ ಭಜನಾ ಮೇಳ, ಇಟಗಿ, ಆನೆಗುಂದಿ, ತಿರುಚನಗುಡ್ಡ, ಮುದ್ದಿನಗುಡ್ಡ, ಗಾದಿಗನೂರ ನರೇಗಲ್ ದುರ್ಗಾದೇವಿ ಭಜನಾ ಸಂಘ ಹಾಗೂ ಜಾಂಜ್ ಮೇಳ, ವೀರಭದ್ರೇಶ್ವರ ನಂದಿಕೋಲ ಮೇಳ ಭಾಗವಹಿಸಲಿವೆ’ ಎಂದು ತಿಳಿಸಿದರು.

ಗಂಗಾಧರ ಅಬ್ಬಿಗೇರಿ, ಬಿ.ಎನ್ ಯರನಾಳ, ಮಲ್ಲಿಕಾರ್ಜುನ ಸರ್ವಿ, ಎಸ್.ಎಸ್ ಮುಗಳಿ, ಬಿ.ವಿ ಜಗಾಪೂರ, ಶಿವಪ್ಪ ಕೆ. ಮಾಗುಂಡ, ಶರಣಪ್ಪ ಗೋಟಿ, ಟಿ.ಆರ್.ಮಡಿವಾಳರ, ಶಂಕರ ಹಾನಗಲ್, ಎಂ.ಎನ್ ಕಲಕೇರಿ, ಐ.ಬಿ. ಮೈದರಗಿ, ಜಿ.ವಿ. ಚನ್ನಪ್ಪಗೌಡರ, ಸಿ.ಎಫ್. ಪಾಟೀಲ, ರಮೇಶ ಪೂಜಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.