ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲ್ವೆ ಹೋರಾಟಕ್ಕೆ ಕೈಜೋಡಿಸಲು ಮನವಿ

Published : 6 ಅಕ್ಟೋಬರ್ 2024, 14:22 IST
Last Updated : 6 ಅಕ್ಟೋಬರ್ 2024, 14:22 IST
ಫಾಲೋ ಮಾಡಿ
Comments

ಮುಂಡರಗಿ: ಗದಗ, ಮುಂಡರಗಿ, ಹೂವಿನಹಡಗಲಿ ಮಾರ್ಗವಾಗಿ ಹರಪನಹಳ್ಳಿಗೆ ನೂತನ ರೈಲು ಮಾರ್ಗ ಮಂಜೂರಾತಿಗಾಗಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಕಾರ್ಯಕರ್ತರು ಭಾನುವಾರ ಕೊಪ್ಪಳ ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಜನಜಾಗೃತಿ ಕೈಗೊಂಡರು.

ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ನಿಯೋಜಿತ ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗದ ಸಮೀಕ್ಷಾ ಸಮಯದಲ್ಲಿ ನೂತನ ಮಾರ್ಗವು ಕೊಪ್ಪಳ ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ಮಾರ್ಗವಾಗಿ ಮುಂದೆ ಸಾಗುತ್ತದೆ. ಹೀಗಾಗಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ನೂತನ ರೈಲು ಮಾರ್ಗದ ಹೋರಾಟಕ್ಕೆ ಬನ್ನಿಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಈ ಭಾಗಕ್ಕೆ ನೂತನ ರೈಲು ಮಾರ್ಗ ಮಂಜೂರಾದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಮುಂದೆ ರಾಜ್ಯ ಸರ್ಕಾರ ನೂತನ ರೈಲು ಮಾರ್ಗ ನಿರ್ಮಾಣದ ಭೂಸ್ವಾಧೀನಕ್ಕೆ ಮುಂದಾದರೆ ಕಣಗಿನಹಾಳ, ಹಳ್ಳಿಗುಡಿ ಹಾಗೂ ಬನ್ನಿಕೊಪ್ಪ ಗ್ರಾಮಗಳ ಜನರು ಅದಕ್ಕೆ ಸೂಕ್ತವಾಗಿ ಸ್ಪಂದಿಸಬೇಕು ಎಂದರು.

ಮೂರೂ ಗ್ರಾಮಗಳ ಜನರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಸಹಕಾರ ಕೊಟ್ಟಾಗ ಮಾತ್ರ ಮುಂಡರಗಿ, ಹೂವಿನಹಡಗಲಿ ಮಾರ್ಗವಾಗಿ ನೂತನ ರೈಲು ಮಾರ್ಗ ಆರಂಭವಾಗುತ್ತದೆ. ಹೀಗಾಗಿ ಸುತ್ತಮುತ್ತಲಿನ ಎಲ್ಲ ಜನರು ಸಾರ್ವಜನಿಕ ಹೋರಾಟ ವೇದಿಕೆಯು ಕೈಗೊಂಡಿರುವ ಜನ ಕಲ್ಯಾಣ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಶಿವಕುಮಾರ ಹಿರೇಮಠ, ವಿಜಯಲಕ್ಷ್ಮಿ, ವಿಶಾಲಾಕ್ಷಿ, ವೀಮಲಾ, ಪದ್ಮಾವತಿ, ನೀಲಮ್ಮ, ಅಕ್ಕಮ್ಮ, ಲಕ್ಷ್ಮಿಬಾಯಿ, ಮಂಗಳಾ, ಶಾಂತಾ, ಶೋಭಾ, ಸಂಗಮ್ಮ, ಮಲ್ಲಮ್ಮ, ಲತಾ, ಪ್ರೇಮ, ಮಹಾದೇವಿ, ಕಸ್ತೂರಿ, ಲಕ್ಷ್ಮಿಬಾಯಿ, ಶಿವವ್ವ, ಅಕ್ಕಮಹಾದೇವಿ, ಶಶಿಕಲಾ, ಕುಸುಮ, ಲಲಿತಾ, ಈರಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT