ಶಿರಹಟ್ಟಿ: ಹಿಂದೂ-ಮುಸ್ಲಿಂ ಭಾವೈಕ್ಯದ ಶಿರಹಟ್ಟಿಯ ಹಜರತ್ ಮೆಹಬೂಬ ಸುಬಾನಿ ಉರುಸ್ ವಿಜೃಂಭಣೆಯಿಂದ ಜರುಗಿತು.

ಮಂಗಳವಾರ ನಡೆದ ತವಾಫ್ನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ-ಮುಸ್ಲಿಂ ಭಕ್ತರು ಪಾಲ್ಗೊಂಡರು. ಸುತ್ತಲಿನ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದಿದ್ದ ಭಕ್ತರು ಜ. ಫಕೀರೇಶ್ವರರ ಮಹಾಸಂಸ್ಥಾನ ಮಠ ಹಾಗೂ ಹಜರತ್ ಮೆಹಬೂಬ ಸುಬ್ಹಾನಿ ದರ್ಗಾಕ್ಕೆ ನಮಿಸಿದರು.

ಹಿಂದೂ ಭಕ್ತರು ತಮ್ಮ ಮನೆಯಿಂದ ದರ್ಗಾದವರೆಗೂ ದೀಡ್ ನಮಸ್ಕಾರ ಹಾಕಿದರು. ಚಿಕ್ಕಮಕ್ಕಳ ತೂಕದಷ್ಟು ಸಕ್ಕರೆ, ಬೆಳ್ಳಿಯ ಕುದುರೆ ಹಾಗೂ ಕಡಗಗಳನ್ನು ಕಾಣಿಕೆಯಾಗಿ ಸಮರ್ಪಿಸಿದರು.

ಭಾನುವಾರ ರಾತ್ರಿ ಗಂಧದ ಕಾರ್ಯಕ್ರಮ, ಸೋಮವಾರ ಕೆಳಗೇರಿ ಓಣಿಯ ದರ್ಗಾದಿಂದ ಮೆಹಬೂಬ ಸುಬಾನಿ ದರ್ಗಾವರೆಗೆ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.