ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಕಲೇಶಪುರ | ಮಾಗಡಿಯಲ್ಲಿ ಗ್ರಾಮದಲ್ಲಿ ಕಾಡಾನೆಗಳಿಂದ ಬೆಳೆ ಹಾನಿ

Published 2 ಜುಲೈ 2024, 14:07 IST
Last Updated 2 ಜುಲೈ 2024, 14:07 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನ ಹಲಸುಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಗಡಿ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿಯಾಗಿದೆ.

ಗ್ರಾಮದ ರೈತ ಎಚ್‌.ಆರ್‌. ದಯಾನಂದ್‌ ಅವರ ಕಾಫಿ ತೋಟಕ್ಕೆ  25ಕ್ಕೂ ಹೆಚ್ಚು ಕಾಡಾನೆಗಳು  ನುಗ್ಗಿ 500ಕ್ಕೂ ಹೆಚ್ಚು ಅರೇಬಿಕಾ ಕಾಫಿ ಗಿಡಗಳು, ಕಾಳು ಮೆಣಸು ಬಳ್ಳಿಗಳು, ಅಡಿಕೆ ಗಿಡಗಳು ಹಾಗೂ ತೋಟದ ಬೇಲಿಯನ್ನು  ನಾಶ ಮಾಡಿವೆ.  ಕಾಫಿ ಗಿಡಗಳನ್ನು ಬೇರು ಸಮೇತ ಕಿತ್ತು ಹಾಕಿ ಭಾರಿ ನಷ್ಟ ಉಂಟು ಮಾಡಿವೆ ಎಂದು  ಕೃಷಿಕ ದಯಾನಂದ್ ಅಳಲು ತೋಡಿಕೊಂಡಿದ್ದಾರೆ.

ಒಂದು ದಶಕದಿಂದಲೂ  ಕಾಡಾನೆಗಳು ಆಗಾಗ  ತೋಟಕ್ಕೆ  ಬೆಳೆ ನಾಶ ಮಾಡುತ್ತಿದ್ದು,  ನಿರಂತರ ನಷ್ಟ ಅನುಭವಿಸಬೇಕಾಗಿದೆ.  ಅರಣ್ಯ ಇಲಾಖೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಸಮೀಪದ ಮಾಗಡಿ ಗ್ರಾಮದ ರೈತ ಎಚ್‌.ಆರ್. ದಯಾನಂದ್ ಅವರ ಕಾಫಿ ತೋಟಕ್ಕೆ ಕಾಡಾನೆಗಳು ನುಗ್ಗಿ ಕಾಫಿ ಗಿಡಗಳನ್ನು ನಾಶ ಮಾಡಿರುವುದು
ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಸಮೀಪದ ಮಾಗಡಿ ಗ್ರಾಮದ ರೈತ ಎಚ್‌.ಆರ್. ದಯಾನಂದ್ ಅವರ ಕಾಫಿ ತೋಟಕ್ಕೆ ಕಾಡಾನೆಗಳು ನುಗ್ಗಿ ಕಾಫಿ ಗಿಡಗಳನ್ನು ನಾಶ ಮಾಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT