ಅರಸೀಕೆರೆ: ನಗರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರೋತ್ಥಾನ 4ನೇ ಹಂತದಲ್ಲಿ ₹30 ಕೋಟಿ ಬಿಡುಗಡೆಯಾಗಿದೆ. ಪಕ್ಷಭೇದ ಮರೆತು ಸ್ಥಳೀಯ ಮುಖಂಡರು ಸೇರಿ ಹೊಂದಾಣಿಕೆಯಿಂದ ಸರ್ಕಾರದ ಯೋಜನೆಯನ್ನು ಬಳಸಿಕೊಳ್ಳಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.

ನಗರದ ಲಕ್ಷೀಪುರ ಬಡಾವಣೆ ಸೇರಿದಂತೆ ₹70 ಲಕ್ಷ ವೆಚ್ಚದಲ್ಲಿ 13ನೇ ವಾರ್ಡ್‍ನ ವಿವಿಧ ರಸ್ತೆಗಳ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನನ್ನ ಅಧಿಕಾರದ ಅವಧಿಯಲ್ಲಿ ಸಾರ್ವಜನಿಕರಿಗೆ ಉತ್ತಮ ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ದೇವಸ್ಥಾನಗಳು, ಒಳಚರಂಡಿ ಹಾಗೂ ಇನ್ನು ಹತ್ತು ಹಲವು ಸೌಲಭ್ಯಗಳ ಯೋಜನೆ ಜಾರಿಗೆ ತಂದು ಯಶಸ್ವಿಯಾಗಿದ್ದೇನೆ. ಹಾಗೂ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುವೆ ಎಂದರು.

ನಗರಸಭೆ ಸದಸ್ಯರು ಇರುವ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನನ್ನ ಜೊತೆ ಕೈ ಜೋಡಿಸಿ ಸಹಕಾರ ನೀಡಿದರೆ ಮಾದರಿ ನಗರವನ್ನಾಗಿ ಮಾಡಬಹುದು ಎಂದು ಹೇಳಿದರು.

ನಗರಸಭಾ ಸದಸ್ಯರು ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ನಗರಸಭೆ ಸದಸ್ಯ ವೆಂಕಟಮುನಿ ಮಾತನಾಡಿ, ಶಾಸಕ ಶಿವಲಿಂಗೇಗೌಡರು ವಿಶೇಷವಾಗಿ ಆಸಕ್ತಿ ವಹಿಸಿ ₹30 ಕೋಟಿ ನಗರಸಭೆಗೆ ಅನುದಾನ ತಂದಿದ್ದು ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಹೇಳಿದರು.

ನಗರಸಭೆ ಸದಸ್ಯ ಪ್ರೇಮ ಮಲ್ಲಿಕಾರ್ಜುನ್, ಮುಖಂಡರಾದ ಕೆ.ಸಿ. ಯೋಗೀಶ್, ಗಂಜಿಗೆರೆ ಚಂದ್ರಶೇಖರ್, ಮಂಜು, ರಾಜ್, ಪ್ರಶಾಂತ್, ಮೋಹನ್, ಲೋಕೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.