ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಾ ಅಥ್ಲೆಟಿಕ್ಸ್‌: ಜಾವೆಲಿನ್, ಶಾಟ್‌ಪಟ್‌ನಲ್ಲಿ ನಂದಿತಾ ಸಾಧನೆ

Published 25 ಜುಲೈ 2024, 15:31 IST
Last Updated 25 ಜುಲೈ 2024, 15:31 IST
ಅಕ್ಷರ ಗಾತ್ರ

ಕೊಣನೂರು: ಸಮೀಪದ ಕೆರೆಕೋಡಿ ಗ್ರಾಮದ ಕೆ.ಇ. ನಂದಿತಾ ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿ‍ಪ್‌ನಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಈಚೆಗೆ ನಡೆದ 13ನೇ ಜ್ಯೂನಿಯರ್ ಮತ್ತು ಸಬ್‌ ಜ್ಯೂನಿಯರ್ ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ಶಾಟ್‌ಪಟ್‌ನಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ಹಾಗೂ ಜಾವೆಲಿನ್‌ನಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದರು.

ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಕ್ಕೆ ಮರುಗುತ್ತಿದ್ದ ಪೋಷಕರಿಗೆ ಕ್ರೀಡಾಸಾಧನೆಯಿಂದ ಹೆಮ್ಮೆ ಮೂಡಿಸಿದ್ದಾರೆ.

ಅರಕಲಗೂಡಿನ ಜತಿನ್ ಐಟಿಐ ಕಾಲೇಜಿನಲ್ಲಿ ಕೆ.ಇ.ನಂದಿತಾ ದ್ವಿತೀಯ ವರ್ಷದ ಐಟಿಐ ವ್ಯಾಸಂಗ ಮಾಡುತ್ತಿದ್ದು, ಕ್ರೀಡಾ ಸಾಧನೆಗೆ ಪೋಷಕರು, ಕೆರೆಕೋಡಿ, ಕೊಣನೂರು ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT