ಹೆತ್ತೂರು: ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿರುವುದರಿಂದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗೆ ಕಾಣಿಸಿಕೊಂಡಿರುವ ಕೊಳೆರೋಗ ನಿಯಂತ್ರಣಕ್ಕೆ ಬರುತ್ತಿಲ್ಲ.

ಅತ್ತಿಹಳ್ಳಿ ಗ್ರಾಮದಲ್ಲಿ ಈ ವರ್ಷ 537.5 ಸೆಂ.ಮೀ., ಕಾಗಿನಹರೆ 585 ಸೆಂ.ಮೀ., ಮಂಕನಹಳ್ಳಿ 621 ಸೆಂ.ಮೀ. ಮಳೆಯಾಗಿದೆ. ಜೂನ್ನಿಂದ ಇದುವರೆಗೆ ಬೆಳೆಗಾರರು 3 ಸುತ್ತಿನ ಬೋರ್ಡೊ ದ್ರಾವಣ ಸಿಂಪಡಿಸಿದ್ದಾರೆ. ಈಗ ಮತ್ತೆ ಮಳೆ ಮುಂದುವರಿದಿರುವುದರಿಂದ ಬೆಳೆ ಹಾನಿಯ ಆತಂಕದಲ್ಲಿದ್ದಾರೆ.

ಶೇ 80ರಷ್ಟು ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಕೆಲವು ತೋಟಗಳಲ್ಲಿ ಅರೇಬಿಕ ಕಾಫಿ, ಅಡಿಕೆ ಹಣ್ಣಾಗಿ ಉದುರಲು ಪ್ರಾರಂಭವಾಗಿದೆ.

ಹೆತ್ತೂರು, ಯಸಳೂರು ಹೋಬಳಿಯಲ್ಲಿ ಶೇ 75ರಷ್ಟು ರೈತರ ತೊಟಗಳಲ್ಲಿ ಕಾಫಿ ಕಾಯಿಗಳು ನೆಲಕ್ಕುರುಳಿವೆ. ತೇವಾಂಶ ಹೆಚ್ಚಳದಿಂದ ಕಾಳುಮೆಣಸಿನ ಬಳ್ಳಿಗಳಿಗೆ ಸೊರಗು ರೋಗ ಕಾಣಿಸಿಕೊಂಡಿದೆ. ಕಾಳುಮೆಣಸಿನ ಗರೆ ಉದುರುತ್ತಿದ್ದು, ಈ ಬಾರಿ ಉತ್ತಮ ಫಸಲು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಹೊಂಗಡಹಳ್ಳ ಗ್ರಾಮದ ಬೆಳೆಗಾರ ಗಣೇಶ್.

ಹೆತ್ತೂರು, ಯಸಳೂರು ಹೋಬಳಿಯಲ್ಲಿ ದುಪ್ಪಟ್ಟು ಮಳೆಯಾಗಿದ್ದು, ಬಿಡುವು ನೀಡದ ಮಳೆಯಿಂದಾಗಿ ಈ ಭಾಗದ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದೆ. ವಾಣಿಜ್ಯ ಬೆಳೆಗಳು ಭಾರಿ ಪ್ರಮಾಣದಲ್ಲಿ ನೆಲ ಸೇರಲು ಇದು ಪ್ರಮುಖ ಕಾರಣವಾಗಿದೆ.

ಕಳೆದ ಬಾರಿ ಬೇಸಿಗೆಯಲ್ಲಿ ತಾಪಮಾನ ಏರಿಕೆಯಾಗಿ ಹಾನಿ ಸಂಭವಿಸಿತ್ತು. ಇದೀಗ ಮಳೆಯಿಂದಾಗಿ ಶೇ 60ರಷ್ಟು ಬೆಳೆ ನಷ್ಟ ಸಂಭವಿಸುವ ಆತಂಕ ಎದುರಾಗಿದೆ. ತೋಟದಲ್ಲಿ ಮರಗಳು ಸಹ ನೆಲ ಕಚ್ಚುತ್ತಿವೆ. ಕಾಳುಮೆಣಸಿಗೂ ಕೊಳೆರೋಗ ಆವರಿಸುತ್ತಿದೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ.

‘ಕಾಫಿ ಬಹುವಾರ್ಷಿಕ ಬೆಳೆಯಾಗಿದ್ದರೂ, ನಿರ್ವಹಣೆ ವೆಚ್ಚ ಹೆಚ್ಚು. ಕಾರ್ಮಿಕರ ಸಮಸ್ಯೆ ಜೊತೆಗೆ ಪ್ರಕೃತಿ ವಿಕೋಪದಂತಹ ಪರಿಸ್ಥಿತಿಯಲ್ಲಿ ಬೆಳೆಗಾರರ ರಕ್ಷಣೆಗೆ ಸರ್ಕಾರ ಬರಬೇಕು’ ಎಂದು ಒತ್ತಾಯಿಸಿದರು.

ಹೆಚ್ಚಿನ ಮಳೆಯಿಂದಾಗಿ ಅಡಿಕೆ ಕಾಳುಮೆಣಸಿಗೆ ಬರುವ ಕೊಳೆರೋಗ ಎಲೆಯುತ್ತಿ ರೋಗ ಸೊರಗು ರೋಗಗಳನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ.
– ಮಲ್ಲಿಕಾರ್ಜುನ್, ಐಗೂರು ಗ್ರಾಮದ ಬೆಳೆಗಾರ

ಮಳೆ ಮುಂದುವರಿದಿರುವುದರಿಂದ ಮತ್ತೊಂದು ಸುತ್ತಿನ ಜೌಷಧ ಸಿಂಪಡಣೆ ಮಾಡಬೇಕೊ ಬೇಡವೋ ಎಂಬ ಪ್ರಶ್ನೆ ಎದುರಾಗಿದೆ. ಈ ವರ್ಷ ತೋಟದ ಬೆಳೆಗಳಿಂದ ಹೆಚ್ಚಿನ ಲಾಭ ನಿರೀಕ್ಷಿಸುವಂತಿಲ್ಲ.
–ಸುಧಾಕರ, ಹೊಸಹಳ್ಳಿ ಗ್ರಾಮದ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.