ಆಲೂರಿನಲ್ಲಿ ಕಸವನ್ನು ಸಂಗ್ರಹಿಸಿದ ತ್ಯಾಜ್ಯವನ್ನು ವಿಲೇವಾರಿ ಕೇಂದ್ರದಲ್ಲಿ ಹಾಕಲಾಗುತ್ತಿದೆ.
ಪ್ರವಾಸಿ ತಾಣದಲ್ಲೂ ಅವ್ಯವಸ್ಥೆ
ಪ್ರವಾಸಿ ತಾಣವಾಗಿರುವ ಹಳೇಬೀಡಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234ರ ಬೇಲೂರು– ಬಾಣಾವರ ರಸ್ತೆ ಬದಿಯಲ್ಲಿ ಜನರು ಎಲ್ಲೆಂದರಲ್ಲಿ ಕಸ ಸುರಿಯುವುದು ಹೆಚ್ಚಾಗುತ್ತಿದೆ. ಪ್ರವಾಸಿಗರು ಹಳೇಬೀಡು ಪ್ರವೇಶಿಸಿದ ತಕ್ಷಣ ತ್ಯಾಜ್ಯ ರಾಶಿ ದರ್ಶನ ಮಾಡುವಂತಾಗಿದೆ. ನಿತ್ಯ ಪಂಚಾಯಿತಿಯ ಕಸ ಸಂಗ್ರಹಿಸುವ ವಾಹನ ಓಡಾಡುತ್ತಿದೆ. ಪ್ರತಿ ಬೀದಿಗೂ ವಾರದಲ್ಲಿ ಎರಡು ದಿನ ವಾಹನ ಸಂಚರಿಸಿದರೂ ಹೆದ್ದಾರಿ ಕಸದಿಂದ ಮುಕ್ತವಾಗಿಲ್ಲ ಎಂಬ ದೂರು ಜನರಿಂದ ಕೇಳಿ ಬರುತ್ತಿದೆ. ಕಸ ಸಾಗಿಸುವ ವಾಹನ ಸಂಚರಿಸುವಾಗ ಧ್ವನಿವರ್ಧಕ ಮೂಲಕ ತ್ಯಾಜ್ಯ ನಿರ್ವಹಣೆಯ ಜಾಗೃತಿ ಮೂಡಿಸಲಾಗುತ್ತಿದೆ. ವಾಹನಕ್ಕೆ ಕಸ ಹಾಕಲು ಸೂಚಿಸಿದರೂ ಕೆಲವರು ಉಡಾಫೆ ಮಾಡುತ್ತಿದ್ದಾರೆ. ನಮ್ಮಲ್ಲಿ ಸ್ವಚ್ಛತಾ ಸಿಬ್ಬಂದಿ ಕೊರತೆ ಸಹ ಇದೆ. ಗ್ರಾಮ ಪಂಚಾಯಿತಿಗೆ ಸ್ವಚ್ಛತಾ ಸಿಬ್ಬಂದಿ ನೇಮಕ ಮಾಡಿಕೊಡುವಂತೆ ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಲಾಗಿದೆ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಸ್.ಸಿ.ವಿರೂಪಾಕ್ಷ ಹೇಳಿದರು.
ದಂಡಾಸ್ತ್ರ ಪ್ರಯೋಗ
ನಗರಸಭೆ ವ್ಯಾಪ್ತಿಯಲ್ಲಿ ಜನರು ಹಸಿ ಕಸ ಒಣ ಕಸ ಬೇರ್ಪಡಿಸಿ ಆಟೋಗಳಿಗೆ ಹಾಕಬೇಕು. ಸ್ವಚ್ಛ ಸುಂದರ ನಗರ ನಿರ್ಮಾಣಕ್ಕೆ ಸಹಕಾರ ನೀಡಬೇಕು ಇಲ್ಲವಾದರೆ ನಗರಸಭೆಯಿಂದ ದಂಡಾಸ್ತ್ರ ಪ್ರಯೋಗಿಸಲಾಗುವುದು. ನರಸಿಂಹಮೂರ್ತಿ ಹಾಸನ ನಗರಸಭೆ ಆಯುಕ್ತ ಬೀದಿನಾಯಿ ಹೆಚ್ಚಳ ಪಂಚಾಯಿತಿಯವರು ಖಾಸಗಿ ಭೂಮಿಯಲ್ಲಿ ಕಸ ಹಾಕುತ್ತಿರುವುದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ನಮ್ಮ ತೋಟಗಳಿಗೆ ಹೋಗಲು ತೊಂದೆಯಾಗಿದೆ. ಬೇಸಿಗೆಯಲ್ಲಿ ಕಸಕ್ಕೆ ಬೆಂಕಿ ಹಾಕುವುದರಿಂದ ಹೊಗೆ ಅವರಿಸಿಕೊಳ್ಳುತ್ತದೆ. ಕೆಲವು ಸಲ ತೆಂಗಿನ ಮರಕ್ಕೆ ಬೆಂಕಿ ತಗುಲಿ ಸುಟ್ಟು ಹೋಗಿವೆ. ಎಚ್.ಬಿ. ಶಿವಕುಮಾರ್ ಹಿರೀಸಾವೆ ಕಸ ಹಾಕಲು ಜಾಗ ಇಲ್ಲ ಹಿರೀಸಾವೆಯಲ್ಲಿ ನಿತ್ಯ ಟನ್‌ಗಟ್ಟಲೆ ಕಸ ಸಂಗ್ರಹವಾಗುತ್ತದೆ. ತ್ಯಾಜ್ಯ ವಿಲೇವಾರಿ ಮಾಡಲು ಜಾಗದ ಸಮಸ್ಯೆ ಇದೆ. ಕಸ ವಿಲೇವಾರಿ ಮಾಡಲು ಭೂಮಿ ನೀಡುವಂತೆ ಕಂದಾಯ ಇಲಾಖೆಗೆ ಹಲವು ವರ್ಷಗಳಿಂದ ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಜಾಗ ನೀಡಿಲ್ಲ. ಸತೀಶ್ ಹಿರೀಸಾವೆ ಪಿಡಿಒ ಸ್ವಚ್ಛತೆಗೆ ಸಹಕರಿಸಿ ಹಳೇಬೀಡು ಸೇರಿದಂತೆ ಯಾವ ಗ್ರಾಮದಲ್ಲಿಯೂ ರಸ್ತೆ ಬದಿಯಲ್ಲಿ ಕಸ ಬೀಳದಂತೆ ಎಚ್ಚರ ವಹಿಸಿದ್ದೇವೆ. ಹೆದ್ದಾರಿ ಬದಿಯಲ್ಲಿ ಕಸದ ರಾಶಿ ಬೀಳುತ್ತಿದೆ. ಜನರು ಎಚ್ಚೆತ್ತುಕೊಂಡು ಕಸ ಹಾಕುವುದನ್ನು ನಿಲ್ಲಿಸಬೇಕು. ಹೆದ್ದಾರಿ ಇಲಾಖೆಯವರು ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಜೊತೆ ಕೈಜೋಡಿಸಬೇಕು. ನಿತ್ಯಾನಂದ ಹಳೇಬೀಡು ಗ್ರಾ.ಪಂ. ಅಧ್ಯಕ್ಷ ಗೊಬ್ಬರ ತಯಾರಿಕೆ ಸಂಗ್ರಹಿಸಿದ ಕಸವನ್ನು ಬಾಚನಹಳ್ಳಿ ಬಳಿ ಇರುವ ಕಸ ಸಂಗ್ರಹಣ ಕೇಂದ್ರಕ್ಕೆ ತರಲಾಗುತ್ತಿದ್ದು ಅಲ್ಲಿ ಕಸ ಬೇರ್ಪಡಿಸಿ ಗೊಬ್ಬರ ಹಾಗೂ ಒಣ ಕಸದ ವಿಲೇವಾರಿ ಮಾಡಲಾಗುತ್ತಿದೆ. ಜ್ಯೋತಿ ಆಲೂರು ಪ.ಪಂ. ಆರೋಗ್ಯ ನಿರೀಕ್ಷಕಿ ಸಮರ್ಪಕ ವಿಲೇವಾರಿ ಆಲೂರಿನಲ್ಲಿ ಕಸ ಸಂಗ್ರಹಣೆಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ. ಪಟ್ಟಣದ 11 ವಾರ್ಡ್‌ಗಳಲ್ಲಿ ಮನೆಗಳಿಂದ ಕಸ ಸಂಗ್ರಹಿಸಿ ವಿಲೇವಾರಿ ಕೇಂದ್ರಕ್ಕೆ ಸಾಗಿಸಲಾಗುತ್ತಿದೆ. ತಾಹೀರಾಬೇಗಂ ಆಲೂರು ಪ.ಪಂ. ಅಧ್ಯಕ್ಷೆ