ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖಾಸಗಿ ಜಮೀನು ಕೊಟ್ಟರೆ ಜೇನುಕಲ್ ರಸ್ತೆ ಅಭಿವೃದ್ಧಿ: ಶಾಸಕ ಶಿವಲಿಂಗೇಗೌಡ

Published : 8 ಜುಲೈ 2024, 14:22 IST
Last Updated : 8 ಜುಲೈ 2024, 14:22 IST
ಫಾಲೋ ಮಾಡಿ
Comments

ಅರಸೀಕೆರೆ: ನಗರದ ಹಾಸನ ರಸ್ತೆಯಿಂದ ಜೇನುಕಲ್ ಸಿದ್ದೇಶ್ವರಸ್ವಾಮಿ ಕ್ಷೇತ್ರಕ್ಕೆ ಸಾಗುವ ರಸ್ತೆಯಲ್ಲಿ ₹2ಕೋಟಿ ವೆಚ್ಚದ ಕಾಂಕ್ರಿಟ್ ಸ್ಲಾಬ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಸೋಮವಾರ ಶಾಸಕ ಕೆ.ಎಂ.ಶಿವಲಿಂಗೇಗೌಡ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ, ‘ತಾಲ್ಲೂಕು ಜಿಲ್ಲೆಯಿಂದ ಮಾತ್ರವಲ್ಲದೆ ರಾಜ್ಯ ವ್ಯಾಪಿ ಭಕ್ತರನ್ನು ಹೊಂದಿರುವ ಜೇನುಕಲ್ ಸಿದ್ದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ನಡೆಯುವ ಮಹೋತ್ಸವದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಪ್ರತಿದಿನ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಹೋಗುತ್ತಾರೆ. ಹಾಗಾಗಿ ನಗರದ ಮೂಲಕ ಸಾಗುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ರಸ್ತೆ ಅಗಲೀಕರಣ ಮಾಡಲಾಗಿದೆ’ ಎಂದರು.

ರಸ್ತೆಯ ಎರಡು ಬದಿ ಇರುವ ಖಾಸಗಿ ಒಡೆತನದ ಜಮೀನುಗಳ ಮಾಲೀಕರು ಮತ್ತಷ್ಟು ರಸ್ತೆ ಅಗಲೀಕರಣಕ್ಕೆ ಜಮೀನು ಬಿಟ್ಟುಕೊಟ್ಟರೆ ರಸ್ತೆ ಮಧ್ಯೆ ಡಿವೈಡರ್ ನಿರ್ಮಿಸಿ ಮತ್ತಷ್ಟು ರಸ್ತೆ ಅಗಲೀಕರಣ ಮಾಡಿಕೊಡಲು ಸಿದ್ಧವಿರುವುದಾಗಿ ಹೇಳಿದರು.

ಹಾಸನ ರಸ್ತೆ ಸಿದ್ದೇಶ್ವರ ಸ್ವಾಮಿ ಆರ್ಚ್‌‌‌‌ನಿಂದ ಜೇನುಕಲ್ ಸ್ಟೇಡಿಯಂವರೆಗೆ ನಿರ್ಮಾಣ ಮಾಡುತ್ತಿರುವ ಕಾಂಕ್ರಿಟ್ ಸ್ಲಾಬ್‌‌‌ಗಳ ಅಳವಡಿಕೆ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಂದ ಗುಣಮಟ್ಟ ಕೆಲಸ ಪಡೆದುಕೊಳ್ಳುವಂತೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌‌‌ಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಸ್ವಾಮಿ, ನಗರ ಸಭೆ ಸದಸ್ಯರಾದ ಮನೋಹರ್ ಮೇಸ್ತ್ರಿ, ಹರೀಶ್, ಕಾಂಗ್ರೆಸ್ ಮುಖಂಡ ಕೃಷ್ಣ, ಗಿರೀಶ್, ವಾಸು, ಎಂ.ವೈ.ಖಾನ್, ಲೋಕೋಪಯೋಗಿ ಇಲಾಖೆಯ ಎಇಇ ಮುನಿರಾಜು  ಉಪಸ್ಥಿತರಿದ್ದರು.

ಸಿದ್ದೇಶ್ವರ ಗೋಪುರದಿಂದ ಕಾಮಗಾರಿ ಆರಂಭ ಕಾಂಕ್ರಿಟ್ ಸ್ಲಾಬ್‌‌‌ಗಳ ನಿರ್ಮಾಣ ಗುಣಮಟ್ಟದ ಕೆಲಸ ಮಾಡಲು ಸೂಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT