ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾವಗಲ್‌ | ಆಹಾರ ಅರಸಿ ಬಂದ ಚಿರತೆ: ಕೂಗಿ ಓಡಿಸಿದ ಮಹಿಳೆ

Published 8 ಜುಲೈ 2024, 15:30 IST
Last Updated 8 ಜುಲೈ 2024, 15:30 IST
ಅಕ್ಷರ ಗಾತ್ರ

ಜಾವಗಲ್‌: ಆಹಾರ ಅರಸಿ ಗ್ರಾಮದ ಮನೆಯ ಬಳಿ ಬಂದಿದ್ದ ಚಿರತೆಯನ್ನು ಕಂಡ ಮಹಿಳೆ, ಜೋರಾಗಿ ಕೂಗಿದ್ದು, ಚಿರತೆ ಓಡಿ ಹೋಗಿದೆ.

ಗ್ರಾಮದ ಹೊರವಲಯದ ನೇರ್ಲಿಗೆ -ಕಡೂರು ರಸ್ತೆಯಲ್ಲಿರುವ ಇಂದ್ರೇಶ್ ಎಂಬುವವರ ತೋಟದ ಒಂಟಿ ಮನೆಯ ಬಳಿ ಭಾನುವಾರ ರಾತ್ರಿ 8.30 ರ ಸುಮಾರಿಗೆ ಆಹಾರ ಅರಸಿ ಚಿರತೆ ಬಂದಿದೆ.

ಈ ವೇಳೆ ಮನೆಯೊಳಗೆ ಇದ್ದ ಮಹಿಳೆ, ಕಿಟಕಿಯಿಂದ ಚಿರತೆಯನ್ನು ಕಂಡಿದ್ದು, ಶಬ್ದ ಮಾಡಿದ ನಂತರ ಚಿರತೆ ಅಲ್ಲಿಂದ ಹೋಗಿದೆ. ಈ ಎಲ್ಲ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಚಿರತೆ ಕಾಣಿಸಿಕೊಂಡಿರುವುದರಿಂದ ಆತಂಕಗೊಂಡಿರುವ ಇಂದ್ರೇಶ್ ಕುಟುಂಬಸ್ಥರು, ಕೂಡಲೇ ಬೋನು ಇಟ್ಟು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

ಅರಸೀಕೆರೆ ಸೇರಿದಂತೆ ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲೂ ಇತ್ತೀಚಿನ ದಿನಗಳಲ್ಲಿ ಚಿರತೆ ಹಾವಳಿ ವಿಪರೀತವಾಗಿದ್ದು, ಮನೆಯ ಸಾಕು ನಾಯಿ ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದು ಸಾಮಾನ್ಯವಾಗಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಕಾರ್ಯಾಚರಣೆ ನಡೆಸಿ, ಚಿರತೆ ಹಾವಳಿ ತಪ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT