ಹಾಸನ: ನಗರ ಹೊರವಲಯದ ರಾಜೀವ್ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಾದ ಹಾಸನದ ಲೋಕಕಿರಣ್, ಕೆ.ಆರ್.ಪೇಟೆಯ ಆದರ್ಶ ಎಂ ಮತ್ತು ಕುಣಿಗಲ್ನ ಜಿತೇಂದ್ರ ಅವರು ರೀಲ್ಸ್ ಮಾಡುವ ನೆಪದಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಗುರುವಾರ ವಿಡಿಯೊ ಹರಿದಾಡಿತ್ತು.

ನವೆಂಬರ್ 12ರಂದು ರಾತ್ರಿ ಕಾಲೇಜು ಮುಂಭಾಗದ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್ಗೆ ಪೆಟ್ರೋಲ್ ತುಂಬಿ, ದಾರದಿಂದ ಕಟ್ಟಿ, ಅದರ ಮೇಲೆ ಆಟಂಬಾಂಬ್ ಇಟ್ಟು ಸ್ಫೋಟಿಸಿ ವಿಡಿಯೊ ಮಾಡಿದ್ದರು.

ಘಟನೆ ನಡೆದ ಸ್ಥಳದ ಸಮೀಪದಲ್ಲೇ ಪೆಟ್ರೋಲ್ ಟ್ಯಾಂಕರ್ ನಿಂತಿತ್ತು. ಎಚ್ಪಿ ಸಂಸ್ಥೆಯ ಸಮೀಪವೇ ಬಾಂಬ್ ಸ್ಫೋಟಿಸಿದ್ದು, ಅನಾಹುತ ತಪ್ಪಿದೆ.

‘ವಿದ್ಯಾರ್ಥಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೋರ್ಟ್ಗೆ ಹಾಜರುಪಡಿಸಿದ್ದು, ದಂಡ ವಿಧಿಸಲಾಗಿದೆ’ ಎಂದು ಎಸ್ಪಿ ಮೊಹಮ್ಮದ್ ಸುಜೀತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.