ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀಳುವ ಸ್ಥಿತಿ ತಲುಪಿದ್ದ ವಿದ್ಯುತ್ ಕಂಬ ದುರಸ್ತಿ

Published 24 ಜುಲೈ 2024, 13:43 IST
Last Updated 24 ಜುಲೈ 2024, 13:43 IST
ಅಕ್ಷರ ಗಾತ್ರ

ಆಲೂರು: ಬೀಳುವ ಸ್ಥಿತಿಗೆ ತಲುಪಿದ್ದ ಬೃಹತ್‌ ಗಾತ್ರದ ವಿದ್ಯುತ್ ಕಂಬವನ್ನು ದುರಸ್ತಿ ಮಾಡಲಾಗಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಬಿಕ್ಕೋಡು ರಸ್ತೆ ಮತ್ತು ಹೌಸಿಂಗ್ ಬೋರ್ಡ್‌ನಿಂದ ಚರಂಡಿಯಲ್ಲಿ ಮಳೆ ನೀರು ಹರಿದು ಕಂಬದ ಬುಡಕ್ಕೆ ಹಾನಿಯಾಗಿತ್ತು. ಇದನ್ನು ಸೆಸ್ಕ್ ಎಂಜಿನಿಯರ್ ಕುಮಾರ್, ನೌಕರ ರವಿ ಗಮನಿಸಿ ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಂಬದ ಬುಡಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕಿ ಭದ್ರಪಡಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮುರುಗೇಶ್, ಪುರಸಭೆ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್ ಮತ್ತು ಸೆಸ್ಕ್ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ಕಂಬದ ದುರಸ್ತಿ ಕಾಮಗಾರಿ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT