ಕೊಣನೂರು: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಹಾಗೂ ಸಂಜೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಇಲ್ಲಿನ ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಶಾಸಕ ಎ.ಮಂಜು ಅವರಿಗೆ ಮನವಿ ಮಾಡಿದರು.

ಬೆಳಿಗ್ಗೆ ಹಾಗೂ ಸಂಜೆ ಕೂಡಿಗೆ, ಕಣಿವೆ, ತೊರೆನೂರು, ಶಿರಂಗಾಲ, ಕಡುವಿನಹೊಸಹಳ್ಳಿ, ಮರಿಯಾನಗರ, ಬಾಣಾವರ ಮಾರ್ಗಗಳಿಂದ ಕೊಣನೂರಿಗೆ ಶಾಲಾ ಕಾಲೇಜಿಗೆ ತೆರಳಲು ಬಸ್ಸಿನ ಸಮಸ್ಯೆ ಇದ್ದು, ಸರಿಯಾದ ಸಮಯಕ್ಕೆ ಶಾಲಾ ಕಾಲೇಜಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಬಸ್ ಕೊರತೆಯಿಂದಾಗಿ ತರಗತಿಗಳ ಸಮಯಕ್ಕೆ ಬರಲಾಗುತ್ತಿಲ್ಲ ಮತ್ತು ಕೆಲವೊಂದು ಬಸ್ಗಳ ಚಾಲಕರು ಶಾಲಾ ಕಾಲೇಜು ಮಕ್ಕಳನ್ನು ಕಂಡರೆ ನಿಲ್ಲಿಸದೆ ಹಾಗೆಯೇ ಹೋಗುತ್ತಾರೆ ಎಂದರು.

ಮನವಿಗೆ ಸ್ಪಂದಿಸಿದ ಶಾಸಕ, ಕೂಡಲೇ ಕೊಡಗು ಹಾಗೂ ರಾಮನಾಥಪುರ ಸಾರಿಗೆ ಬಸ್ ಘಟಕದ ವ್ಯವಸ್ಥಾಪಕರ ಬಳಿ ಮಾತನಾಡಿ ಶಾಲಾ ಕಾಲೇಜು ಸಮಯಕ್ಕೆ ಸೂಕ್ತ ಬಸ್ ವ್ಯವಸ್ಥೆ ಮಾಡಿಸಿಕೊಡುವುದಾಗಿ ತಿಳಿಸಿದರು. ಶಾಲಾ ಕಾಲೇಜು ಸಮಯದಲ್ಲಿ ಎಲ್ಲಾ ಬಸ್ಗಳನ್ನು ನೀವು ಹೇಳಿರುವ ಗ್ರಾಮಗಳಲ್ಲಿ ನಿಲ್ಲಿಸುವಂತೆ ಸಂಬಧಿಸಿದವರಿಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.