ಹಾಸನ: ರಾಜಕೀಯ ಎದುರಾಳಿ ಎಚ್.ಡಿ.ರೇವಣ್ಣ ಅವರನ್ನು ಹಾಡಿ ಹೊಗಳಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ಎ.ಮಂಜು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹಾಸನಾಂಬೆ ದರ್ಶನ ಪಡೆದ ನಂತರ ಮಾತನಾಡಿದ ಅವರು, ‘ಜಯಮಾಲಾ ಸಚಿವರಾಗಿ ಹೀಗೆ ಹೇಳಿಕೆ ನೀಡಿರುವುದು ತಪ್ಪು. ಕೂಡಲೇ ಅವರು ಇದು ನನ್ನ ವೈಯಕ್ತಿಕ ಹೇಳಿಕೆ ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಬೇಕು. ರಾಜಕೀಯವನ್ನು ಚಿತ್ರರಂಗ ಅಂದುಕೊಂಡಿದ್ದಾರೆ. ಬಹುಶಃ ಅವರು ಅನುಭವದ ಕೊರತೆಯಿಂದ ಹೀಗೆ ಹೇಳಿದ್ದಾರೆ. ಯಾವ ವೇದಿಕೆಯಲ್ಲಿ ಏನು ಮಾತನಾಡಬೇಕು ಎಂಬುದು ಅವರಿಗೆ ಗೊತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ರೇವಣ್ಣ ಅವರನ್ನು ಹೊಗಳಲು ಜಯಮಾಲಾ ಯಾರು?’ ಎಂದು ಖಾರವಾಗಿ ಪ್ರಶ್ನಿಸಿದ ಮಂಜು, ಇದರ ವಿರುದ್ಧ ಹೈಕಮಾಂಡ್ ಗೂ ದೂರು ನೀಡುವೆ. ಜೊತೆಗೆ ಪಕ್ಷದ ವೇದಿಕೆಯಲ್ಲೂ ಚರ್ಚೆ ಮಾಡುವೆ’ ಎಂದರು.

‘ಜಯಮಾಲಾ ಚುನಾವಣೆ ಎದುರಿಸಿ ಗೆದ್ದು ಸಚಿವರಾದವರಲ್ಲ. ಮುಂದೆ ಚುನಾವಣೆಯಲ್ಲಿ ಗೆದ್ದು ಬಂದು ನಂತರ ಮಾತನಾಡಲಿ. ಅವರು ಆಕಸ್ಮಿಕವಾಗಿ ಸಚಿವೆಯಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.