ರಾಮನಾಥಪುರದಲ್ಲಿನ ಕಾವೇರಿ ಸ್ನಾನಘಟ್ಟದಲ್ಲಿ ಭಕ್ತರು ಪುಣ್ಯಸ್ನಾನ ಮಾಡುತ್ತಿರುವುದು
ರಾಮೇಶ್ವರ ದೇವಾಲಯದ ಪ್ರಾಂಗಣದಲ್ಲಿ ಸಾಲು ಈಶ್ವರ ಲಿಂಗಗಳ ಮುಂದಿರುವ ನಂದಿ ವಿಗ್ರಹಗಳು
ರಾಮೇಶ್ವರ ದೇವಾಲಯದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶಂಭುನಾಥ ಸ್ವಾಮೀಜಿ ದರ್ಶನ ಪಡೆದರು. (ಸಂಗ್ರಹ ಚಿತ್ರ)
ದೇಗುಲಗಳ ಸಂಕೀರ್ಣ
ದಕ್ಷಿಣಕಾಶಿ ಎಂದೆ ಪ್ರಸಿದ್ಧಿ ಪಡೆದಿರುವ ರಾಮನಾಥಪುರದಲ್ಲಿ ಪ್ರಮುಖವಾಗಿ ರಾಮೇಶ್ವರ ಸುಬ್ರಹ್ಮಣ್ಯೇಶ್ವರ ಲಕ್ಷ್ಮಣೇಶ್ವರ ವರದಾನ ಬಸವೇಶ್ವರ ಉತ್ತರಾದಿ ಮಠ ವ್ಯಾಸಾಂಜನೇಯ ಅಗಸ್ತೇಶ್ವರ ಲಕ್ಷ್ಮೀ ನರಸಿಂಹಸ್ವಾಮಿ ಪಟ್ಟಾಭಿರಾಮ ಸೇರಿದಂತೆ ಅನೇಕ ದೇವಾಲಯಗಳಿವೆ. ಪ್ರತಿವರ್ಷ ಡಿಸೆಂಬರ್‌ನಲ್ಲಿ ಇಲ್ಲಿನ ಪ್ರಸನ್ನ ಸುಬ್ರಹ್ಮಣ್ಯೇಶ್ವರ ಸ್ವಾಮಿಗೆ ಚಂಪಾಷಷ್ಠಿ ಮತ್ತು ತುಳುಷಷ್ಠಿ ಉಭಯ ರಥೋತ್ಸವಗಳು ಜರುಗುತ್ತಿದ್ದು ರಾಜ್ಯದ ವಿವಿಧೆಡೆಗಳಿಂದ ಸಹಸ್ತ್ರಾರು ಭಕ್ತರು ಭೇಟಿ ನೀಡಿ ಕಾವೇರಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ವರ್ಷದ ಎಲ್ಲ ಕಾಲದಲ್ಲೂ ನಿತ್ಯ ರಾಮನಾಥಪುರಕ್ಕೆ ನೂರಾರು ಭಕ್ತರು ಭೇಟಿ ನೀಡುತ್ತಾರೆ.