ಹೊಳೆನರಸೀಪುರ: ಪಟ್ಟಣದ ಲಕ್ಷ್ಮೀನರಸಿಂಹ ಯುವಕರ ಸಂಘದಿಂದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಲ್ಕುದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು ನ.22ರಂದು ರಾಜ್ಯ ಮತ್ತು ರಾಷ್ಟ್ರಮಟ್ಟದ ಮಹಿಳೆಯರ 10 ಹಾಗೂ ಪುರುಷರ 35 ಜೋಡಿಗಳ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ.

ಸೋಮವಾರ ಪತ್ರಿಕಾ ಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಸದಸ್ಯ ಎಚ್.ವಿ. ಪುಟ್ಟರಾಜು, ‘ನ 21ರ ಗುರುವಾರ ಸಂಜೆ ಜೀ ಕನ್ನಡ ವಾಹಿನಿಯ ಸರಿಗಮಪ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಬಸವನಗುಡಿ ಬೀದಿಯಲ್ಲಿ ನಿರ್ಮಿಸುತ್ತಿರುವ ಪುನೀತ್ ರಾಜ್ಕುಮಾರ್ ವೇದಿಕೆಯಲ್ಲಿ ನಡೆಯುತ್ತದೆ. ನ.22ರ ಶುಕ್ರವಾರ ಸಂಜೆ ಹೊಳೆನರಸೀಪುರದ ಜೈ ವೀರಹನುಮಾನ್ ದೊಡ್ಡಗರಡಿಯ ಅಧ್ಯಕ್ಷರು, ಸದಸ್ಯರು ಹಾಗೂ ಉಸ್ತಾದರ ಸಹಕಾರದಲ್ಲಿ 35 ಜೊತೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ (ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ) ಬಯಲು ರಂಗಮಂದಿರ ಮೈದಾನದಲ್ಲಿ ನಿರ್ಮಿಸಿರುವ ರಣಧೀರ ಕಂಠೀರವ ವೇದಿಕೆಯಲ್ಲಿ ನಡೆಯಲಿದೆ’ ಎಂದರು.

‘ನ.23ರ ಶನಿವಾರ ಲಕ್ಷ್ಮೀನರಸಿಂಹಸ್ವಾಮಿ ದೇವಾಸ್ಥಾನದ ಮುಂಭಾಗ ನಿರ್ಮಿಸಿರುವ ರಾಷ್ಟ್ರಕವಿ ಕುವೆಂಪು ವೇದಿಕೆಯಲ್ಲಿ ಸುಗಮ ಸಂಗೀತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 24ರ ಭಾನುವಾರ ಸಂಜೆ ಭುವನೇಶ್ವರಿ ಉತ್ಸವ ವಿವಿಧ ಜಾನಪದ ಕಲಾಮೇಳ ಹಾಗೂ 10ಕ್ಕೂ ಹೆಚ್ಚು ಕಲಾ ತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಲಿದೆ’ಎಂದರು.

ಮುಖಂಡರಾದ ಎಚ್.ಜೆ. ಓಲೆ ಕುಮಾರ, ಪೈಲ್ವಾನ್ ಧನಂಜಯ, ಉಮೇಶ್ ಲಕ್ಕೇಗೌಡ, ಕಾರ್ತಿಕ್ ಹಾಗೂ ಭರತ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.