ಸರ್ಕಾರ ರೈತರ ಜಮೀನುಗಳನ್ನು ಹಂತಹಂತವಾಗಿ ವಕ್ಫ್‌ಗೆ ಬರೆದು ಕೊಡಲು ತುದಿಗಾಲಿನಲ್ಲಿ ನಿಂತಿದೆ. ರೈತರ ಎಚ್ಚರವಹಿಸಿ ಪಹಣಿ ಪರಿಶೀಲಿಸಬೇಕು. ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ.
– ಎಚ್.ಕೆ.ಸುರೇಶ್ ಶಾಸಕ
ವಕ್ಪ್ ಗೊಂದಲದಿಂದ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಅತಿವೃಷ್ಟಿ ಅನಾವೃಷ್ಟಿ ಬೆಲೆ ಕುಸಿತದಿಂದ ತತ್ತರಿಸಿರುವ ರೈತರಿಗೆ ಈ ರೀತಿಯ ಆಘಾತ ಕೊಟ್ಟರೆ ಬದುಕುವುದಾದರೆ ಹೇಗೆ?
–ಎಲ್.ವಿ.ಜಯಕುಮಾರ್ ಘಟ್ಟದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ತಂದೆ ತಾಯಿ ಆಸ್ತಿಯನ್ನು ಮಕ್ಕಳ ಹೆಸರಿಗೆ ಮಾಡಿಕೊಳ್ಳುವುದು ಸುಲಭವಿಲ್ಲ. ಸಣ್ಣ ದೋಷವಿದ್ದರೂ ಜಿಲ್ಲಾಡಳಿತದವರೆಗೆ ಅಲೆದಾಡಬೇಕು. ಆದರೆ ರೈತರ ಜಮೀನು ಸುಲಭವಾಗಿ ವಕ್ಫ್ ಆಸ್ತಿಯಾಗುತ್ತಿವೆ.