ಕಬ್ಬಾಳು ಗ್ರಾಮದ ಜಮೀನಿನ ಬದುಗಳಲ್ಲಿ ಅನಾಥವಾಗಿ ಬಿದ್ದಿರುವ ಶಿಲಾಶಾಸನಗಳು
ಕಬ್ಬಾಳು ಗ್ರಾಮದಲ್ಲಿರುವ ತೆರೆದ ಬಿಸಿಲು ಮಾರಮ್ಮ
ಮೈಸೂರು ವಿವಿ ಪ್ರಕಟಿಸಿರುವ ಎಪಿಗ್ರಾಫಿಯಾ ಕರ್ನಾಟಕದಲ್ಲಿ ಕಬ್ಬಾಳು ಶಾಸನ ದಾಖಲಾಗಿದೆ. ಅವು ಈಗಲೂ ಹೊಲ ಗದ್ದೆಗಳಲ್ಲಿದ್ದು ಸಂರಕ್ಷಿಸಬೇಕಾಗಿದೆ.
ಗಂಗಾಧರ್ ಗ್ರಾಮಸ್ಥ
ರಂಗ ಕುಣಿತದ ಸಂಭ್ರಮ
‘ಕಬ್ಬಾಳು ಜನತೆಯನ್ನು ಸಾವಿನಿಂದ ರಕ್ಷಿಸಿದ ಕನ್ನಂಬಾಡಮ್ಮ ದೇವಿಯ ಅದ್ದೂರಿ ಉತ್ಸವ ಮಾರಿಹಬ್ಬ ಹಾಗೂ ಹೊನ್ನಾರು ಯುಗಾದಿ ಹಬ್ಬಗಳನ್ನು ಇಡೀ ಗ್ರಾಮದ ಜನರು ಒಗ್ಗೂಡಿ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ರಂಗಮಂಟಪದ ಮುಂಭಾಗ ಗ್ರಾಮೀಣ ಕಲೆಯಾದ ರಂಗಕುಣಿತವನ್ನು ಕುಣಿದು ಸಂತಸ ಪಡುತ್ತಾರೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜೇಗೌಡ ಮತ್ತು ಯತೀಶ್ ಪ್ರಶಂಸಿಸುತ್ತಾರೆ.