ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾಯಿ ಕಲಿಸಿದ ಸಂಸ್ಕೃತಿ ಶ್ರೇಷ್ಠ: ಬಸವರಾಜ ಬೊಮ್ಮಾಯಿ

Published 26 ಜನವರಿ 2024, 15:47 IST
Last Updated 26 ಜನವರಿ 2024, 15:47 IST
ಅಕ್ಷರ ಗಾತ್ರ

ಶಿಗ್ಗಾವಿ: ಮಗುವಿಗೆ ಜನ್ಮ ನೀಡಿ, ಉಸಿರಿ ನೀಡಿ, ಜ್ಞಾನ ನೀಡುವ ತಾಯಿ ಕಲಿಸಿದ ಸಂಸ್ಕಾರ ಸರ್ವ ಶ್ರೇಷ್ಠವಾಗಿದ್ದು, ಅವಳ ಮಾರ್ಗದರ್ಶನದಂತೆ ನಡೆದವರು ಬದುಕಿನಲ್ಲಿ ಯಶಸ್ವಿ ಗಳಿಸಲು ಸಾಧ್ಯವಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಗಂಗಮ್ಮತಾಯಿ ಬೊಮ್ಮಾಯಿ ಅವರ ಜನ್ಮ ದಿನಾಚರಣೆ ಅಂಗವಾಗಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ನಡೆದ ಶಿಗ್ಗಾವಿ-ಸವಣೂರ ತಾಲ್ಲೂಕಿನ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.

ಪತಿ–ಪತ್ನಿ ಸಂಬಂಧದಲ್ಲಿ ಸೀತೆರಾಮ, ಮಾತೃಪೀತೃವಿನ ಪರಿಪಾಲನೆ, ಗುರು ಶಿಷ್ಯ ಸಂಬಂಧಗಳು ಮುಖ್ಯವಾಗಿದ್ದು, ಅದರಲ್ಲಿ ಎಲ್ಲ ಸಂಬಂಧಗಳ ಕೊಂಡಿ ತಾಯಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಾಯಿ ಸೇವೆ ಅಪಾರಾಗಿದೆ. ಹಣೆ ಬರ ಎಂದು ಕಾಲಹರಣ ಮಾಡದೇ ಶ್ರಮವಹಿಸಿ ಸೇವಾ ಕಾರ್ಯ ಮಾಡಿ ಸಾಧಕರ ಸಾಲಿನಲ್ಲಿ ನಿಲ್ಲಬೇಕು ಎಂದರು.

ಸಾಧನೆಗಾಗಿ ಪ್ರತಿಯೊಬ್ಬರಲ್ಲಿ ಸ್ಪಷ್ಟವಾದ ಗುರಿ ಮುಖ್ಯವಾಗಿದೆ. ಗುರಿ ಇಲ್ಲದೆ ಯಾವುದನ್ನು ಸಾಧಿಸಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಕ್ಕಳಿಗೆ ಪ್ರೇರಣೆ ನೀಡಿದಾಗ ಮಾತ್ರ ಉನ್ನತ ಸ್ಥಾನಮಾನ ಪಡೆಯಲು ಸಾಧ್ಯವಿದೆ ಎಂದರು.

ಉಪನ್ಯಾಸಕ ಶರಣಯ್ಯ ಬಂಡಾರಿಮಠ ಮಾತನಾಡಿ, ಗುಡಿಸಲಿನಲ್ಲಿ ಜನಿದ ಪ್ರತಿಭೆ ಅರಮನೆಯಲ್ಲಿ ಸಾಯುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತೇಜ ನೀಡುವುದು ಮುಖ್ಯವಾಗಿದೆ. ಆಸ್ತಿ, ಅಂತಸ್ತಿಗಿಂತ ಜ್ಞಾನವಂತ ದೇಶದ ಆಡಳಿತ ನಡೆಸುವಂತಾಗುತ್ತಾನೆ. ಆತ್ಮಸ್ಥೈರ್ಯ ಇದ್ದರೆ ಜಗತ್ತನ್ನೇ
ಗೆಲ್ಲಬಹುದು. ಅದಕ್ಕೆ ಹಠ, ಛಲ ಮುಖ್ಯವಾಗಿದೆ ಎಂದರು.

ಶಿಗ್ಗಾವಿ-ಸವಣೂರ ತಾಲ್ಲೂಕಿನ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ 250 ವಿದ್ಯಾಥರ್ಿಗಳಿಗೆಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ, ಡಾ.ಫಕ್ಕೀರಗೌಡ ಪಾಟೀಲ, ಗಂಗಣ್ಣ ಸಾತಣ್ಣವರ, ಶಿವಪ್ರಸಾದ ಸುರಗಿಮಠ, ನವೀನ ಸವಣೂರ, ಕರೆಪ್ಪ ಕಟ್ಟಿಮನಿ, ಶಂಕರಗೌಡ ಪೊಲೀಸ್ ಗೌಡ್ರ, ಸಂಗಮೇಶ ಕಂಬಾಳಿಮಠ, ತಿಪ್ಪಣ್ಣ ಸಾತಣ್ಣವರ, ಹನುಮರಡ್ಡಿ
ನಡುವನಿಮನಿ, ದೇವಣ್ಣ ಚಾಕಲಬ್ಬಿ, ಮಲ್ಲೇಶಪ್ಪ ಹರಿಜನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT