ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಡ್ತಿ -ವರದಾ ನದಿ ಜೋಡಣೆಗೆ ಆಗ್ರಹ

Published 3 ಜುಲೈ 2024, 14:15 IST
Last Updated 3 ಜುಲೈ 2024, 14:15 IST
ಅಕ್ಷರ ಗಾತ್ರ

ಶಿಗ್ಗಾವಿ: ಬೇಡ್ತಿ ಮತ್ತು ವರದಾ ನದಿ ಜೋಡಣೆ ಮಾಡಬೇಕೆಂದು ಆಗ್ರಹಿಸಿ ಮಂಗಳವಾರ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರು, ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸಂತೋಷ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

‘ಬೇಡ್ತಿ ನದಿ ಕಾರವಾರ ಜಿಲ್ಲೆಯಲ್ಲಿ ಉದಯವಾಗಿದ್ದು, ಹಾವೇರಿ ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ, ಧರ್ಮಾನದಿಗೆ ಜೋಡಣೆ ಮಾಡಿದರೆ ಈ ಭಾಗದ ಹತ್ತಾರು ತಾಲ್ಲೂಕುಗಳ ರೈತರು ನೀರಾವರಿ ಯೋಜನೆಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ಕೆರೆಕಟ್ಟೆಗಳನ್ನ ತುಂಬಿಸಲು ಅನುಕೂಲವಾಗುತ್ತದೆ. ಮತ್ತು ಬೋರ್‌ವೆಲ್‌ಗಳಿಗೆ ಅಂತರ್ಜಲ ಮಟ್ಟ ಹೆಚ್ಚುತ್ತದೆ’ ಎಂದು ಆಗ್ರಹಿಸಿದರು.

‘ಶಾಲ್ಮಲಾ ಹಾಗೂ ಗಂಗಾವಳಿ ನದಿಯ ಮೂಲಕ ಅರಬ್ಬೀ ಸಮುದ್ರಕ್ಕೆ ಸೇರುವುದನ್ನು ತಡೆಗಟ್ಟಿ ವರದಾ ಮತ್ತು ಧರ್ಮಾ ನದಿಗೆ ಸೇರಿಸಬೇಕು. ಈ ಕುರಿತು ಹಲವು ವರ್ಷಗಳಿಂದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರುತ್ತಾ ಬಂದರೂ ಪ್ರಯೋಜನಾಗಿಲ್ಲ’ ಎಂದು ದೂರಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣವರ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ನವಲಗುಂದ, ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಸ್.ಸಿದ್ದಬಸಪ್ಪ ಯಾದವ್, ಜಿಲ್ಲಾ ಸಮಿತಿ ಸದಸ್ಯ ರಾಜ್ ಪಠಾಣ್, ಕತ್ತಲ್ಸಾಬ್ ಬಣಗಾರ, ಪದಾಧಿಕಾರಿಗಳಾದ ಸಂಜೀವ ಮಣ್ಣಣ್ಣವರ, ಸದಾನಂದ ಯಲಿಗಾರ, ರಾಜು ಮಾಳವಾದೆ, ಬಿ.ಸಿ.ಗುದ್ಲಿಶೆಟ್ಟರ್, ನಾಗಪ್ಪ ಚೌಹಾಣ್, ಲಕ್ಷ್ಮಿ ಕರಡಿ, ಮಲ್ಲಿಕಾರ್ಜುನ ಜವಳಿ, ಗದಿಗೆಯ್ಯ ಹಿರೇಮಠ, ಅಮಿರ್ಜಾನ್ ಬೇಪಾರಿ, ಶಬಾನಾ ಹೆಬಸೂರ, ಶಂಕ್ರವ್ವ ದುಂಡಿಗೌಡ್ರ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT