ಹಾವೇರಿ:ಯಾವುದೇ ವ್ಯಕ್ತಿಯನ್ನು ತೆಗೆಳುವ ಬದಲು, ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು. ಆಗ ಅವರುಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಮತ್ತು ಆರ್ಕಿಟೆಕ್ಟರ್ ಸಂಘದ ಅಧ್ಯಕ್ಷ ಮಹಾಂತೇಶ ಮಳಿಮಠ ಹೇಳಿದರು.

ಸರ್. ಎಂ.ವಿಶ್ವೇಶ್ವರಯ್ಯ ನವರ 157ನೇ ಜನ್ಮದಿನದ ಅಂಗವಾಗಿ ನಗರದ ನೌಕರರ ಭವನದಲ್ಲಿ ಶನಿವಾರ ನಡೆದ ‘ಎಂಜಿನಿಯರ್ಸ್ ಡೇ’ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲರಿಗೂ ನೀರು ಪೂರೈಸಲು ಶಕ್ತವಾದ ಯೋಜನೆ ರೂಪಿಸಬೇಕು ಎಂದು ವಿಶ್ವೇಶ್ವರಯ್ಯನವರು ಬಾಲ್ಯದಲ್ಲೇ ಕನಸು ಕಂಡಿದ್ದರಂತೆ. ಅದರಂತೆ ಸಾಧನೆ ಮಾಡಿದ್ದಾರೆ. ಅವರಂತೆ ಎಲ್ಲ ಎಂಜಿನಿಯರ್ಗಳು ಒಗ್ಗೂಡಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಮುಂದಾಗಬೇಕು ಎಂದರು.

ಎಂಜಿನಿಯರ್ ಭವನ ನಿರ್ಮಾಣಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ನಿವೇಶನ ಮಂಜೂರಾಗಿದ್ದು, ಮುಂದಿನ ಬಾರಿ ಎಂಜಿನಿಯರ್ಸ್ ಡೇಯನ್ನು ಆ ಭವನದಲ್ಲಿ ಆಚರಿಸಲಾಗುವುದು. ಕೊಡಗು ಸಂತ್ರಸ್ತರಿಗೆ ಸಂಘದಿಂದ ₹25 ಸಾವಿರ ಪರಿಹಾರವನ್ನು ಜಿಲ್ಲಾಧಿಕಾರಿ ಮೂಲಕ ನೀಡಲು ನಿರ್ಧರಿಸಲಾಗಿದೆ ಎಂದರು.

ಉಪನ್ಯಾಸಕ ಹೇಮಂತ ಪೂಜಾರ ಮಾತನಾಡಿ, ಎಲ್ಲ ಎಂಜಿನಿಯರ್ಗಳನ್ನು ಸಮಾಜಕ್ಕೆ ಪರಿಚಯಿಸುವ ಸಲುವಾಗಿ ವಿಶ್ವೇಶ್ವರಯ್ಯ ನವರ ಜನ್ಮದಿನವನ್ನು ‘ಅಭಿಯಂತರರ ದಿನ’ವನ್ನಾಗಿ ಆಚರಣೆ ಮಾಡಲು ನಿರ್ಧರಿಸಲಾಗಿತ್ತು. ಅವರು, ಒಳ್ಳೆಯ ಎಂಜಿನಿಯರ್, ಆಡಳಿತಗಾರ, ಸಮಾಜ ಸೇವಕರಾಗಿ ದುಡಿದಿದ್ದಾರೆ ಎಂದರು.

ಹೊಸ ಎಂಜಿನಿಯರ್ಗಳು ತಮ್ಮ ವೃತ್ತಿಯ ಆರಂಭಿಕ ನಾಲ್ಕೈದು ವರ್ಷಗಳು ಉತ್ತಮ ಎಂಜಿನಿರ್ಗಳ ಜೊತೆ ಕೆಲಸ ಮಾಡುವ ಮೂಲಕ ಅನುಭವ ಪಡೆಯಬೇಕು ಎಂದರು.

ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಕಾರ್ಯದರ್ಶಿ ಮಹೇಶ ಹೆಬ್ಬಳ್ಳಿ, ಶ್ರೀಕಾಂತ ಹೊಸಮನಿ, ಮಹೇಶ ವಾಲ್ವೇಕರ್, ಎಸ್.ವಿ.ಚೇತನ್, ರವಿಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.