ರಟ್ಟೀಹಳ್ಳಿ: ಮಲೆನಾಡು ಹಾಗೂ ಉತ್ತರ ಕರ್ನಾಟಕ ಸಂಪರ್ಕ ಸೇತುವೆ ಕಲ್ಪಿಸುವ ನೂತನ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲ್ವೆ ಯೋಜನೆಗೆ ಸಾಕಷ್ಟು ಪರ –ವಿರೋಧ
ಗಳಿಂದಾಗಿ ಯೋಜನೆ ಅನುಷ್ಠಾನ ವಿಳಂಬದೊಂದಿಗೆ ಸಾಗಿದೆ.

₹1200 ಕೋಟಿ ಅಂದಾಜು ವೆಚ್ಚದೊಂದಿಗೆ ನಿರ್ಮಾಣಗೊಳ್ಳುವ ಈ ಯೋಜನೆಗೆ ಕೇಂದ್ರ ಸರ್ಕಾರ 103 ಕಿ.ಮಿ. ಉದ್ದದ ನೂತನ ರೈಲ್ವೆ ಮಾರ್ಗಕ್ಕೆ 2012–13ರಲ್ಲಿ ಸಮೀಕ್ಷೆ ನಡೆಸಿದೆ.

ಭೂಸ್ವಾಧೀನ, ರೈಲ್ವೆ ಮಾರ್ಗ ಬದಲಾವಣೆ, ಕೆಲಗೊಂದಲಗಳ ನಂತರ 5 ವರ್ಷಗಳ ನಂತರ ಸರ್ವೇ ಕಾರ್ಯ 2017ರಲ್ಲಿ ಪೂರ್ಣಗೊಂಡಿದೆ. ಶಿವಮೊಗ್ಗದಿಂದ ಕೊನಗವಳ್ಳಿವರೆಗೆ 14 ಕಿ.ಮೀ. ಉದ್ದದ ರೈಲ್ವೆ ಮಾರ್ಗ ಈ ಮೊದಲೇ ಇರುವ ಕಾರಣ 90 ಕಿ.ಮೀ. ಮಾರ್ಗ ಹೊಸದಾಗಿ ನಿರ್ಮಿಸಬೇಕಿದೆ.

ಯೋಜನೆ ಮೈಸೂರು ನೈರುತ್ಯ ರೈಲ್ವೆ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿದ್ದು, ಎರಡು ಹಂತದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಯೋಜನೆಗೆ ಒಟ್ಟು 1431.29 ಎಕರೆ ಭೂಮಿ ಬೇಕಾಗಿದೆ. ಮೊದಲನೆ ಹಂತದಲ್ಲಿ ಶಿವಮೊಗ್ಗದಿಂದ ಶಿಕಾರಿಪುರದವರೆಗೆ 46 ಕಿ.ಮೀ. ಉದ್ದದ ರೈಲ್ವೆ ಯೋಜನೆಗೆ ಅಗತ್ಯವಿರುವ ಶೇ 90ರಷ್ಟು ಭೂಸ್ವಾಧೀನ ಪ್ರಕೀಯೆ ಈಗಾಗಲೇ ಪೂರ್ಣಗೊಂಡಿದೆ.

ಅಲ್ಲದೆ ಈ ಮಾರ್ಗ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ರೈಲ್ವೆ ಇಲಾಖೆಯಿಂದ ಅನುಮೋದನೆ ನೀಡಲಾಗಿದೆ. ಇದರಲ್ಲಿ ಮೊದಲ ಹಂತದ ಶಿವಮೊಗ್ಗ-ಶಿಕಾರಿಪುರ ಮಾರ್ಗದಲ್ಲಿ 616 ಎಕರೆ ಭೂಮಿ ಬೇಕಿದ್ದು, ಇದರಲ್ಲಿ 500 ಎಕರೆ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ.

ರಾಜ್ಯ ಸರ್ಕಾರ ತನ್ನ ಪಾಲಿನ ₹ 244,73 ಕೋಟಿ ಅನುದಾನವನ್ನು 2019 ರಲ್ಲಿ ಮತ್ತೆ 2020ರಲ್ಲಿ ಎರಡನೇ ಹಂತದ ಭೂಸ್ವಾಧೀನಕ್ಕೆ ₹ 108.03 ಕೋಟಿ ಮತ್ತು ₹ 13.49 ಕೋಟಿ ಹಣವನ್ನು ನೀಡಲಾಗಿದೆ.

ಒಟ್ಟು 12 ನಿಲ್ದಾಣ ನಿರ್ಮಿಸಲು ಉದ್ದೇಶಿಸಿದ್ದು, ಈಗಾಗಲೇ 3 ನಿಲ್ದಾಣ ಗಳು ಅಸ್ವಿತ್ವದಲ್ಲಿವೆ. ಹೊಸದಾಗಿ 9 ನಿಲ್ದಾಣಗಳನ್ನು ನಿರ್ಮಿಸಬೇಕಿದೆ.ಈ ಮಾರ್ಗದಲ್ಲಿ ಶಿಕಾರಿಪುರ ಬಹುದೊಡ್ಡ ರೈಲ್ವೆ ನಿಲ್ದಾಣ ಆಗಿ ನಿರ್ಮಾಣಗೊಳ್ಳಲಿದೆ.

2ನೇ ಹಂತದ ಶಿಕಾರಿಪುರದಿಂದ ರಾಣೇಬೆನ್ನೂರು ಮಾರ್ಗ 50 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ಬೇಕಾಗುವ ಶೇ 90 ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಮಾರ್ಗದ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ನೀಡಲಾಗುತ್ತದೆ.

ಈ ನೂತನ ರೈಲು ಮಾರ್ಗ ಶಿವಮೊಗ್ಗದಿಂದ ಪ್ರಾರಂಭಗೊಂಡು ಶಿಕಾರಿಪುರ, ಕಿಟ್ಟದಹಳ್ಳಿ, ಹಾವೇರಿ ಜಿಲ್ಲೆಯ ಮಾಸೂರು, ರಟ್ಟೀಹಳ್ಳಿ, ದಂಡಗೀಹಳ್ಳಿ, ಹಲಗೇರಿ, ಮಾರ್ಗ ಮೂಲಕ ಸಾಗಿ ರಾಣೇಬೆನ್ನೂರ ಜಂಕ್ಷನ್ ತಲುಪಲಿದೆ. ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರು ಯೋಜನೆ ಪೂರ್ಣಗೊಳಿಸಲು 2025 ಡಿಸೆಂಬರ್ ಮಾಹೆಗೆ ಅಂತ್ಯಗೊಳಿಸುವಂತೆ ಹೇಳಲಾಗುತ್ತಿದೆ.

‘ಪಟ್ಟಣದಿಂದ ಇನ್ನಷ್ಟು ದೂರದಲ್ಲಿ ಮಾರ್ಗ ಗುರುತಿಸುವಂತೆ, ಹಾಗೂ ರೈಲ್ವೆ ಯೋಜನೆ ಕೈಬಿಡುವಂತೆ ಕಳೆದ ಹಲವಾರು ವರ್ಷಗಳಿಂದ ರೈತರು ಪ್ರಬಲವಾದ ಹೋರಾಟ, ಚಳವಳಿ, ಮುಷ್ಕರ, ಕೈಗೊಂಡ ಉದಾಹರಣೆಗಳಿವೆ. ಅಲ್ಲದೆ ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿದ್ದು, ಅಂತಿಮ ತೀರ್ಪಿಗಾಗಿ ಕಾಯುತ್ತಿದ್ದಾರೆ’ ಎನ್ನುತ್ತಾರೆ ರೈತ ಮುಖಂಡ ಪ್ರಭು ಮುದಿವೀರಣ್ಣನವರ.

ಯೋಜನೆಯಿಂದಾಗುವ ಲಾಭ

ನೂತನ ರೈಲ್ವೆ ಯೋಜನೆಯಿಂದಾಗಿ ಮಲೆನಾಡು ಅಭಿವೃದ್ಧಿಯೊಂದಿಗೆ ಹಾವೇರಿ ಜಿಲ್ಲೆಯ ಹಲವು ಗ್ರಾಮಗಳು ಅಭಿವೃದ್ಧಿಗೊಳ್ಳಲಿವೆ. ವಾಣಿಜ್ಯ ಉದ್ದಿಮೆಗಳಿಗೆ ಹಲವಾರು ಆರ್ಥಿಕ ಅವಕಾಶ ದೊರೆಯಲಿವೆ.

ಉತ್ತರ ಕರ್ನಾಟಕದ ಈ ಭಾಗದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣವಾಗಿ ಬೃಹತ್ ಕೈಗಾರಿಕೆ ಸ್ಥಾಪನೆಗೊಳ್ಳಲಿವೆ. ಈ ಮಾರ್ಗವು ಬೆಂಗಳೂರಿನಿಂದ ಹುಬ್ಬಳ್ಳಿ ತಲುಪುವ ಪರ್ಯಾಯ ಮಾರ್ಗವಾಗಿದ್ದು, ಮಲೆನಾಡು ಜನರಿಗೆ ಮುಂಬರುವ ದಿನಗಳಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಲಿದೆ.

ವಾಯುವ್ಯ ಕರ್ನಾಟಕ ಹುಬ್ಬಳ್ಳಿ ಮತ್ತು ಬೆಳಗಾವಿ ಜಿಲ್ಲೆಗೆ ಅತ್ಯುತ್ತಮ ಸಂಪರ್ಕ ಕಲ್ಪಿಸುವ ಮಹತ್ತರ ಯೋಜನೆಯಾಗಿದ್ದು, ಸ್ಥಳೀಯ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ಗೋವಾ, ಮಹಾರಾಷ್ಟ್ರ, ಗುಜರಾತಗಳಂತಹ ಅಂತರರಾಜ್ಯಗಳನ್ನು ಸಂಪರ್ಕಿಸುವ ಹೊಸ ರೈಲ್ವೆ ಯೋಜನೆ ಇದಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಶಿವಮೊಗ್ಗ ಸಂಸದ ಬಿ.ವಾಯ್. ರಾಘವೇಂದ್ರ ಅವರ ಕೊಡುಗೆಯ ಈ ಯೋಜನೆ ತುಂಬಾ ಮಹತ್ವವುಳ್ಳದಾಗಿದೆ.

ಈ ಯೋಜನೆ ಅವೈಜ್ಞಾನಿಕ, ಅಸಮರ್ಪಕ. ಈಗಾಗಲೇ ತುಂಗಾ ಮೇಲ್ದಂಡೆ ಯೋಜನೆ, ರಾಷ್ಟ್ರೀಯ ಹೆದ್ದಾರಿ, ಮುಂತಾದ ಯೋಜನೆಗೆ ಫಲವತ್ತಾದ ಭೂಮಿ ಕಳೆದುಕೊಂಡಿದ್ದೇವೆ ಪ್ರಭು ಮುದಿವೀರಣ್ಣನವರ, ರೈತ ಮುಖಂಡ
ಪ್ರಭು ಮುದಿವೀರಣ್ಣನವರ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.