ಹಾವೇರಿ: ‘ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಹಾಗೂ ಮತ ಎಣಿಕೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕ್ಷೇತ್ರದಲ್ಲಿ ನ.11ರ ಸಂಜೆ 6 ಗಂಟೆಯಿಂದ ಮುಂದಿನ 48 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ. 11ರಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಮತದಾರರಲ್ಲದವರು ಕ್ಷೇತ್ರದಿಂದ ಹೊರಗೆ ಹೋಗಬೇಕು. ಯಾರಾದರೂ ನಿಯಮಗಳನ್ನು ಮೀರಿದರೆ, ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದಕ್ಕೆ ತಕ್ಕಂತೆ ಮತಯಂತ್ರಗಳನ್ನು ಸಿದ್ಧಪಡಿಸಲಾಗಿದೆ. ಕ್ಷೇತ್ರದಲ್ಲಿ 241 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಮತದಾನಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತಗಟ್ಟೆ ಕೆಲಸಕ್ಕಾಗಿ ತಲಾ 265 ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ. 100 ಸೂಕ್ಷ್ಮ ವೀಕ್ಷಕರು ಮತಗಟ್ಟೆಗಳ ಮೇಲೆ ಕಣ್ಣಿಡಲಿದ್ದಾರೆ. 92 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅಲ್ಲೆಲ್ಲ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಶಿಗ್ಗಾವಿಯಲ್ಲಿ ಮಸ್ಟರಿಂಗ್– ಡಿ ಮಸ್ಟರಿಂಗ್: ‘ಶಿಗ್ಗಾವಿಯ ಜೆಎಂಜೆ ಶಾಲೆಯಲ್ಲಿ ಮಸ್ಟರಿಂಗ್ ಹಾಗೂ ಡಿ– ಮಸ್ಟರಿಂಗ್ ವ್ಯವಸ್ಥೆ ಮಾಡಲಾಗಿದೆ. ನ. 12ರಂದು ಬೆಳಿಗ್ಗೆ 8 ಗಂಟೆಯಿಂದ ಮಸ್ಟರಿಂಗ್ ಶುರುವಾಗಲಿದೆ. ನ. 13ರ ಸಂಜೆ 6.30 ಗಂಟೆಯಿಂದ ಡಿ– ಮಸ್ಟರಿಂಗ್ ಕಾರ್ಯ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಹಾವೇರಿ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತಯಂತ್ರಗಳ ಭದ್ರತಾ ಕೊಠಡಿ ಹಾಗೂ ಮತ ಎಣಿಕೆ ಕೇಂದ್ರ ತೆರೆಯಲಾಗುತ್ತಿದೆ. ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧರು ಹಾಗೂ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ಹೇಳಿದರು.

‘ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಮತಗಟ್ಟೆಗೆ ಬಂದು ಹೋಗಲು ಆಟೊ ವ್ಯವಸ್ಥೆ ಮಾಡಲಾಗುತ್ತಿದೆ. ಮತಗಟ್ಟೆಗಳಲ್ಲಿಯೂ ವೀಲ್ಚೇರ್ ವ್ಯವಸ್ಥೆ ಇರಲಿದೆ’ ಎಂದರು.

ಮೂವರ ವಿರುದ್ಧ ಎಫ್ಐಆರ್: ‘ಪ್ರಚೋದನಾಕಾರಿ ಭಾಷಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಹಾಗೂ ಮಕ್ಕಳನ್ನು ಪ್ರಚಾರಕ್ಕೆ ಬಳಸಿದ್ದ ಆರೋಪದಡಿ ಒಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಸವಣೂರಿನಲ್ಲಿರುವ ಸುಭಾಷ್ ಗಡ್ಡೆಪ್ಪನವರ ಎಂಬುವವರ ಮನೆಯಲ್ಲಿ ಹಣ ಸಿಕ್ಕಿದೆ. ಅವರ ವಿರುದ್ಧ ಎನ್ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಳ್ಳಲಾಗಿದೆ. ಹಣದ ದಾಖಲೆ ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

‘ಒಂದು ಟೇಬಲ್–ಎರಡು ಕುರ್ಚಿಗೆ ಅವಕಾಶ’ ‘

ಮತಗಟ್ಟೆಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳ ನಿಲುಗಡೆ ಹಾಗೂ ಅಭ್ಯರ್ಥಿಯ ಚುನಾವಣೆ ಪ್ರಚಾರವನ್ನು ನಿರ್ಬಂಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು. ‘200 ಮೀಟರ್ ಹೊರಗೆ ಮಾತ್ರ ಒಂದು ಟೇಬಲ್ ಹಾಗೂ ಎರಡು ಕುರ್ಚಿಗೆ ಅವಕಾಶವಿದೆ. ಇದಕ್ಕೆ ಚುನಾವಣಾಧಿಕಾರಿ ಅನುಮತಿ ಅಗತ್ಯ. ಶಾಮಿಯಾನಕ್ಕೂ ಅವಕಾಶವಿಲ್ಲ. ಮತ ಕೋರಿ ಗುಂಪು ಮೊಬೈಲ್ ಸಂದೇಶ/ವಾಟ್ಸ್ಆ್ಯಪ್ ಸಂದೇಶ ಕಳುಹಿಸಲು ಅನುಮತಿ ಇಲ್ಲ. ಮತಗಟ್ಟೆ ಕೇಂದ್ರದಲ್ಲಿ ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ನಿರ್ಬಂಧಿಸಲಾಗಿದೆ’ ಎಂದರು.

- ‘ಭದ್ರತೆಗೆ ಸಾವಿರಕ್ಕೂ ಹೆಚ್ಚು ಸಿಬ್ಬಂದಿ’

‘ಕ್ಷೇತ್ರದಲ್ಲಿ ನಡೆಯುವ ಮತದಾನದ ಭದ್ರತೆಗೆ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ಬಿಎಸ್ಎಫ್ ಯೋಧರನ್ನೂ ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಎಸ್ಪಿ ಅಂಶುಕುಮಾರ ಹೇಳಿದರು. ‘ಎಸ್ಪಿ ಹೆಚ್ಚುವರಿ ಎಸ್ಪಿ ಡಿವೈಎಸ್ಪಿಗಳು ಇನ್ಸ್ಪೆಕ್ಟರ್ಗಳು ಪಿಎಸ್ಐಗಳು ಸೇರಿದಂತೆ 716 ಸಿಬ್ಬಂದಿ ಭದ್ರತೆ ಕರ್ತವ್ಯದಲ್ಲಿರಲಿದ್ದಾರೆ. ಉಳಿದಂತೆ ಕೆಎಸ್ಆರ್ಪಿ ಡಿಎಆರ್ ತುಕಡಿಗಳು ಹಾಗೂ ಬಿಎಸ್ಎಫ್ನ 5 ಕಂಪನಿಗಳು ಇರಲಿವೆ’ ಎಂದು ತಿಳಿಸಿದರು. ‘ಅಕ್ರಮ ತಡೆಗಾಗಿ 18 ಚೆಕ್ಪೋಸ್ಟ್ ತೆರೆಯಲಾಗಿದೆ. 184 ರೌಡಿಗಳನ್ನು ವಶಕ್ಕೆ ಪಡೆದು ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.

‘ಮತದಾನಕ್ಕೂ ಮುನ್ನ ಮೃತಪಟ್ಟ ಐವರು’

‘85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಈ ಸಂಬಂಧ 208 ಅರ್ಜಿಗಳು ಬಂದಿದ್ದವು. ಅದರಲ್ಲಿ 203 ಮಂದಿ ಈಗಾಗಲೇ ಮತದಾನ ಮಾಡಿದ್ದಾರೆ. ಐವರು ಮತದಾನಕ್ಕೂ ಮುನ್ನವೇ ಮೃತಪಟ್ಟಿದ್ದಾರೆ’ ಎಂದು ಜಿಲ್ಲಾಧಿಕಾರಿ ಹೇಳಿದರು. ‘92 ಅಂಗವಿಕಲರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 1 ಅರ್ಜಿ ತಿರಸ್ಕರಿಸಲಾಗಿದೆ. 91 ಮಂದಿ ಮತದಾನ ಮಾಡಿದ್ದಾರೆ’ ಎಂದರು.

‘ಎಂಟು ವಿಶೇಷ ಮತಗಟ್ಟೆಗಳು’

‘ಕ್ಷೇತ್ರದಲ್ಲಿ ಎಂಟು ವಿಶೇಷ ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಸುರ್ಪಗಟ್ಟಿ ಪ್ರೌಢಶಾಲೆ ಶಿಗ್ಗಾವಿ ಪಟ್ಟಣ ಪಂಚಾಯಿತಿ ಕಚೇರಿ ಬಂಕಾಪುರ ಕೊಟ್ಟಿಗೇರಿ ಬಾಲಕರ ಪ್ರೌಢಶಾಲೆ ಸವಣೂರಿನ ಸರ್ಕಾರಿ ಉರ್ದುಶಾಲೆ ಮೆಳ್ಳಾಗಟ್ಟಿಯ ಪ್ರೌಢಶಾಲೆಯಲ್ಲಿ ಸಖಿ ಮತಗಟ್ಟೆ ನಿರ್ಮಿಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ್ ಶ್ರೀಧರ್ ಹೇಳಿದರು. ‘ದುಂಡಶಿಯ ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಷಯ ಆಧರಿತ ಮತಗಟ್ಟೆ ತೆರೆಯಲಾಗುತ್ತಿದೆ. ಕೋಣನಕೇರಿ ಶಾಲೆಯಲ್ಲಿ ಯುವ ಮತದಾರರ ಮತಗಟ್ಟೆ ಇರಲಿದೆ. ನಾರಾಯಣಪುರದ ಶಾಲೆಯಲ್ಲಿ ಅಂಗವಿಕಲರ ವಿಶೇಷ ಮತಗಟ್ಟೆ ತೆರೆಯಲಾಗುತ್ತಿದೆ’ ಎಂದರು.

ಮತದಾರರ ವಿವರ

237525 ಒಟ್ಟು ಮತದಾರರು

121443 ಪುರುಷರು

116076 ಮಹಿಳೆಯರು

6 ಲಿಂಗತ್ವ ಅಲ್ಪಸಂಖ್ಯಾತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.