ಸೋಮವಾರ, 8 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಣೆಬೆನ್ನೂರು: ಅಭಿವೃದ್ಧಿಗೆ ನರೇಗಾ ಬಲ

ಗುಡ್ಡದಹೊಸಳ್ಳಿ ಗ್ರಾಮದಲ್ಲಿ ಜಲಾನಯನ ಪ್ರದೇಶದ 153 ಎಕರೆ ಅಭಿವೃದ್ಧಿ
Published 5 ಜುಲೈ 2024, 15:26 IST
Last Updated 5 ಜುಲೈ 2024, 15:26 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಕಾರ್ಮಿಕರಿಗೆ ಬಲತಂದ ನರೇಗಾ ಯೋಜನೆ ನೈಸರ್ಗಿಕ ಸಂಪನ್ಮೂಲಗಳನ್ನು ಪುನರುಜ್ಜೀವಗೊಳಿಸುವ ಮೂಲ ಉದ್ದೇಶ ಹೊಂದಿದೆ. ಇದಕ್ಕೆ ತಾಲ್ಲೂಕಿನ ಸುಣಕಲ್ ಬಿದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡದ ಹೊಸಳ್ಳಿ ಸಾಕ್ಷಿಯಾಗಿದೆ.

ಭೂಮಿ ಮೇಲೆ ಬಿದ್ದಂತ ಮಳೆ ನೀರನ್ನು ಓಡುವ ನೀರನ್ನು ನಡೆಯುವಂತೆ ಮಾಡುವುದು, ನಡೆಯುವ ನೀರನ್ನು ನಿಲ್ಲುವಂತೆ, ನಿಂತಂತ ನೀರನ್ನು ಇಂಗುವಂತೆ ಮಾಡುವ ಉಪಚಾರದ ಕ್ರಮವೇ ಜಲಾನಯನ ಪ್ರದೇಶದ ಅಭಿವೃದ್ಧಿ. 

ಬ್ಯಾಡಗಿ, ರಟ್ಟೀಹಳ್ಳಿ, ಹಿರೇಕೆರೂರು, ಹಾವೇರಿ, ರಾಣೆಬೆನ್ನೂರು 5 ಜಲಾನಯನ ಪ್ರದೇಶಗಳನ್ನು ಗುರುತಿಸಿದ್ದರು. 3 ವರ್ಷದ ಕಾರ್ಯಕ್ರಮದಲ್ಲಿ ರಾಣೆಬೆನ್ನೂರಿಗೆ ₹27 ಲಕ್ಷ, ಬ್ಯಾಡಗಿ ₹30 ಲಕ್ಷ ಮತ್ತು ಹಿರೇಕೆರೂರು ₹30 ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ. ಎಲ್ಲಿಯೂ ಈ ಯೋಜನೆ ಪೂರ್ಣಗೊಂಡಿಲ್ಲ. ರಾಣೆಬೆನ್ನೂರು ತಾಲ್ಲೂಕಿನ ಗುಡ್ಡದ ಹೊಸಳ್ಳಿ ಇಲಾಖೆಯವರು ತಾಲ್ಲೂಕು ಪಂಚಾಯ್ತಿ ಅಧಿಕಾರಿ ಸೇರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದಾರೆ.

ಈ ಗ್ರಾಮದ ಸರ್ವೇ ನಂಬರ್ 154ರಿಂದ 187ರವರೆಗಿನ 153 ಎಕರೆ ಎತ್ತರದ ಪ್ರದೇಶದಲ್ಲಿ ಜಲಾನಯನ ಪ್ರದೇಶವನ್ನು ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ್ ಶ್ರೀಧರ್ ಅವರು ಸ್ಥಳಕ್ಕೆ ಈಚೆಗೆ ಭೇಟಿ ನೀಡಿ ನಕಾಶೆಯನ್ನು ಪರಿಶೀಲನೆ ನಡೆಸಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಬಂಧಪಟ್ಟ ಕೃಷಿ ಅರಣ್ಯ ತೋಟಗಾರಿಕೆ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯ ಸಹಕಾರ ದೊಂದಿಗೆ ಜಲಾನಯನ ಪ್ರದೇಶವನ್ನು ಗುರುತಿಸಿ ₹ 27 ಲಕ್ಷ ಅನುದಾನದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದರು. ರೈತರ ಗುಂಪುಗಳನ್ನು ರಚನೆ ಮಾಡಿ ಕಾಮಗಾರಿ ಪ್ರಾರಂಭಿಸಲು ರೈತರಿಗೆ ಸೂಚಿಸಿದ್ದರು.

ಸಮುದಾಯ ಸಂಘಟನೆ ಮತ್ತು ಜಾಗೃತಿ ಕಾರ್ಯಕ್ರಮ:

ಗ್ರಾಮದಲ್ಲಿ ಮೊದಲು ಕೂಲಿ ಕಾರ್ಮಿಕರು ರೈತರು ಹಾಗೂ ಸ್ವಸಹಾಯ ಸಂಘದ ಮಹಿಳೆಯರಿಗೆ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ, ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಸಮುದಾಯಕ್ಕೆ ನರೇಗಾ ಯೋಜನೆ ಬಗ್ಗೆ ಮಾಹಿತಿ ನೀಡಿ ಜಲಾನಯನ ಪ್ರದೇಶದಲ್ಲಿ ಜಲಾನಯನ ಕಾಮಗಾರಿ ಪ್ರಾರಂಭಿಸಲಾಗಿದೆ.

ತಾಲ್ಲೂಕಿನ 153 ಎಕರೆ ಪ್ರದೇಶದಲ್ಲಿ ಮೇಲ್‌ ಸ್ಥರದಲ್ಲಿರುವ ಈಗಾಗಲೇ 35 ಎಕರೆ ಪ್ರದೇಶದಲ್ಲಿ ಬದು ನಿರ್ಮಾಣ ಕೃಷಿಯ ಅರಣ್ಯ ಬದು ಬೇಸಾಯ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಇದರಿಂದ ರೈತರಿಗೆ ಹೊಲದಲ್ಲಿ ಬದು ನಿರ್ಮಾಣ ಬದು ಬೇಸಾಯ ಅರಣ್ಯೀಕರಣ ಕಾಮಗಾರಿ ಮಾಡಿಕೊಳ್ಳುವದ ಜೊತೆಗೆ ₹ 3.60 ಲಕ್ಷ ಖರ್ಚಾಗಿದ್ದು, ಕೂಲಿ ಕಾರ್ಮಿಕರಿಗೆ ನೇರವಾಗಿ ಪಾವತಿಯಾಗಿದೆ. ಇದರಿಂದ 1050 ಮಾನವ ದಿನಗಳು ಸೃಜನೆಯಾಗಿದೆ ಎಂದು ವನಸಿರಿ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥ ಎಸ್ .ಡಿ .ಬಳೆಗಾರ ತಿಳಿಸಿದರು.

ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭೇಟಿ ನೀಡಿ ರೈತರು ಬೆಳೆದ ಬೆಳೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈತರ ಜಮೀನಿನಲ್ಲಿ ದೇಸಿ ಬೀಜ ಉತ್ಪಾದನೆ ಮಾಡುವ ಉದ್ದೇಶದಿಂದ ಪ್ರಾತ್ಯಕ್ಷಿಕೆ ದೇಶಿ ಬೀಜಗಳ ಉತ್ಪಾದನೆ ಮಾಡುವ ಸಲುವಾಗಿ ವನ ಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ರೈತರ ಜಮೀನುಗಳಲ್ಲಿ ರಾಗಿ, ನವಣೆ ಉದ್ದು, ಹೆಸರು, ತೊಗರಿ, ಸಜ್ಜೆ ಬೀಜಗಳ ಉತ್ಪಾದನೆ ಮಾಡುವುದರ ಜೊತೆಗೆ ರೈತರ ಬೀಜ ಬ್ಯಾಂಕು ಪ್ರಾರಂಭಿಸಲು ಪ್ರಾತ್ಯಕ್ಷಿಕೆಗಳನ್ನು ಮಾಡಿದ್ದಾರೆ ಎಂದು ತಾಲ್ಲೂಕು ನರೇಗಾ ಐಈಸಿ ಸಂಯೋಜಕ ದಿಂಗಾಲೇಶ್ ಅಂಗೂರ್ ತಿಳಿಸಿದರು.

ರಾಣೆಬೆನ್ನೂರು ತಾಲ್ಲೂಕಿನ ಗುಡ್ಡದ ಹೊಸಳ್ಳಿ ಗ್ರಾಮದ ರೈತರು ನರೇಗಾ ಯೋಜನೆಯ ಜಲಾನಯನ ಕಾಮಗಾರಿ ಕೈಗೊಂಡ ಜಮೀನಿನ ಬದುವಿನಲ್ಲಿ ತರಕಾರಿ ಹೆಸರು ಬೆಳೆದಿದ್ದಾರೆ 
ರಾಣೆಬೆನ್ನೂರು ತಾಲ್ಲೂಕಿನ ಗುಡ್ಡದ ಹೊಸಳ್ಳಿ ಗ್ರಾಮದ ರೈತರು ನರೇಗಾ ಯೋಜನೆಯ ಜಲಾನಯನ ಕಾಮಗಾರಿ ಕೈಗೊಂಡ ಜಮೀನಿನ ಬದುವಿನಲ್ಲಿ ತರಕಾರಿ ಹೆಸರು ಬೆಳೆದಿದ್ದಾರೆ 
ಕಿರು ಜಲಾನಯನ ಪ್ರದೇಶದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಸಸ್ಯ ಸಂಕುಲ ಹಾಗೂ ಜಾನುವಾರು ಸಂಪನ್ಮೂಲಗಳನ್ನು ಪುನರುಜ್ಜೀವನಗೊಳಿಸಲು ನರೇಗಾ ಯೋಜನೆ ಬಲ ನೀಡಿದೆ
ರೈತ ಫಲಾನುಭವಿಗಳು ಗುಡ್ಡದ ಹೊಸಳ್ಳಿ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT