ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿವೇಶನ ಹಂಚಿಕೆಗೆ ಜಾಗ ಖರೀದಿಸಲು ಸೂಚನೆ

Published : 2 ಅಕ್ಟೋಬರ್ 2024, 16:21 IST
Last Updated : 2 ಅಕ್ಟೋಬರ್ 2024, 16:21 IST
ಫಾಲೋ ಮಾಡಿ
Comments

ಬ್ಯಾಡಗಿ: ಪಟ್ಟಣದ ಮಲ್ಲೂರು ರಸ್ತೆಯ ಪಕ್ಕದಲ್ಲಿ ಖರೀದಿಸಿದ 10 ಎಕರೆ ಜಾಗದಲ್ಲಿ ಜಿ+ ಒನ್‌ ಮಾದರಿ ಮನೆ ನಿರ್ಮಾಣ ಕೈಬಿಟ್ಟ ಹಿನ್ನೆಲೆಯಲ್ಲಿ ಆಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆಗೆ ಅಗತ್ಯವಿರುವ ಜಾಗ ಖರೀದಿಸಲು ಮಂಗಳವಾರ ನಡೆದ ಸಭೆಯಲ್ಲಿ ಸದಸ್ಯರು ಒಲವು ವ್ಯಕ್ತಪಡಿಸಿದರು.

ಶಾಸಕ ಬಸವರಾಜ ಶಿವಣ್ಣನವರ ಅಧ್ಯಕ್ಷತೆಯಲ್ಲಿ ಆಶ್ರು ಸಮಿತಿಯ ಸಭೆ ಅತ್ಯಂತ ಗುಪ್ತವಾಗಿ ನಡೆಯಿತು. ಸದ್ಯದ ಪರಿಸ್ಥಿತಿಯಲ್ಲಿ ಆಶ್ರಯ ಬಡಾವಣೆಯ ಪಕ್ಕದಲ್ಲಿ 20 ಎಕರೆ ಕಂದಾಯ ಜಾಗೆಯಿದ್ದು, ಅದರಲ್ಲಿ ನಿವೇಶನ ಹಂಚಿಕೆ ಮಾಡಲು ಸದಸ್ಯರು ಸೂಚಿಸಿದರು ಎನ್ನಲಾಗಿದೆ.

‘ಈಗಾಗಲೇ ನಿವೇಶನ ರಹಿತರು ಸಾಲ ಮಾಡಿ ತಲಾ ₹30 ಸಾವಿರ ರಾಜೀವಗಾಂಧಿ ವಸತಿ ನಿಗಮಕ್ಕೆ ಸಂದಾಯ ಮಾಡಿದ್ದಾರೆ. ಆದರೂ ಫಲಾನುಭವಿಗಳಿಗೆ ಜಾಗ ವಿತರಣೆಯಾಗಿಲ್ಲ. ಕೂಡಲೇ ನಿವೇಶನಗಳನ್ನು ಮಂಜೂರು ಮಾಡಿದರೆ ಮನೆ ಕಟ್ಟಿಕೊಳ್ಳುತ್ತೇವೆ. ಇಲ್ಲದಿದ್ದರೆ ಸಾಲಕ್ಕೆ ಬಡ್ಡಿ ಕಟ್ಟುವುದು ತಪ್ಪುವುದಿಲ್ಲ’ ಎಂದು ಫಲಾನುಭವಿಯೊಬ್ಬರು ತಮ್ಮ ಅಳಲು ತೋಡಿಕೊಂಡರು. ಆಶ್ರಯ ಸಮಿತಿ ಈಗ ರಚನೆಯಾಗಿದ್ದು, ನಿಜವಾದ ಫಲಾನುಭವಿಗಳನ್ನು ಗುರುತಿಸಿ ಕೂಡಲೇ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿದರು.

‘ಪಟ್ಟಣದಲ್ಲಿ ಕಳೆದ 50 ವರ್ಷಗಳಿಂದ ವಾಸವಿರುವ ನಿವೇಶನ ರಹಿತರಿಗೆ ಮೊದಲ ಆದ್ಯತೆ ನೀಡಬೇಕು, ನಂತರ ಇನ್ನುಳಿದವರನ್ನು ಪರಿಗಣಿಸಬೇಕು. ನಿವೇಶನ ಹಂಚಿಕೆಯಲ್ಲಿ ನಿವೇಶನ ರಹಿತರಿಗೆ ಅನ್ಯಾಯವಾದರೆ ಲೋಕಯುಕ್ತಕ್ಕೂ ಹೋಗಲು ಸಿದ್ಧ’ ಎಂದು ಮಾಜಿ ಸೈನಿಕ ಎಂ.ಡಿ.ಚಿಕ್ಕಣ್ಣನವರ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT